ನ್ಯಾ.ಲೋಯಾ ಪ್ರಕರಣ: ಅಮಿತ್ ಶಾ ಬಗ್ಗೆ ದೇಶಕ್ಕೇ ಗೊತ್ತು ಎಂದ ರಾಹುಲ್
ನವದೆಹಲಿ, ಏಪ್ರಿಲ್ 20: ನ್ಯಾ.ಬಿ.ಎಚ್.ಲೋಯಾ ಸಾವು ಆಕಸ್ಮಿಕ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 'ಅಮಿತ್ ಶಾ ಅವರ ಕುರಿತು ಸತ್ಯ ಏನು ಎಂಬುದು ಬಹುಪಾಲು ಭಾರತೀಯರಿಗೆ ಗೊತ್ತು' ಎಂದಿದ್ದಾರೆ.
2005 ರಲ್ಲಿ ಗುಜರಾತಿನಲ್ಲಿ ನಡೆದ ಸೋಹ್ರಾಬುದ್ದಿನ್ ಎನ್ ಕೌಂಟರ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ಕೋರ್ಟಿನ ನ್ಯಾಯಾಧೀಶ ಲೋಯಾ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ 2014 ರಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.ಅವರು ಹೃದಯಾಘಾತದಿಂದ ನಿಧನರಾಗಿದ್ದು ಎಂದು ವೈದ್ಯಕೀಯ ವರದಿಗಳು ಹೇಳಿದ್ದವಾದರೂ, ಅವರ ಸಾವು ಅಸಹಜವೆಂದು ಶಂಕಿಸಿ, ವಿಚಾರಣೆ ನಡೆಯಬೇಕೆಂದು ಒತ್ತಡಹೇರಲಾಗಿತ್ತು.

ಆದರೆ ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಲೋಯಾ ಸಾವು ಆಕಸ್ಮಿಕ ಎಂದು ಹೇಳಿತ್ತು. ಸೋಹ್ರಾಬುದ್ದಿನ್ ಎನ್ ಕೌಂಟರ್ ಪ್ರಕರಣದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕೈವಾಡವಿದೆ ಎಂಬ ಆರೋಪವಿದ್ದ ಹಿನ್ನೆಲೆಯಲ್ಲಿ ಲೋಯಾ ಸಾವಿಗೂ ಅಮಿತ್ ಶಾ ಅವರಿಗೂ ವಿಪಕ್ಷಗಳು ಸಂಬಂಧ ಕಲ್ಪಿಸಿದ್ದವು.












Click it and Unblock the Notifications