ರೈತರ ಪ್ರತಿಭಟನೆ ವೇಳೆ ಸಿಂಘು ಗಡಿಯಲ್ಲಿ ಬಂಧಿಸಲಾಗಿದ್ದ ಪತ್ರಕರ್ತನಿಗೆ ಜಾಮೀನು
ನವದೆಹಲಿ,ಫೆಬ್ರವರಿ 02: ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ ವೇಳೆ ಬಂಧಿಸಲಾಗಿದ್ದ ಪತ್ರಕರ್ತನಿಗೆ ಜಾಮೀನು ದೊರೆತಿದೆ.
ದೂರುದಾರರು, ಸಂತ್ರಸ್ತರು, ಮತ್ತು ಸಾಕ್ಷಿದಾರರು ಕೇವಲ ಪೊಲೀಸರೇ ಆಗಿದ್ದನ್ನು ಚೀಪ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸತ್ವಿರ್ ಸಿಂಗ್ ಲಾಂಬಾ ಗಮನಿಸಿದ್ದಾರೆ. ಅಲ್ಲದೇ, ಆರೋಪಿ, ಅರ್ಜಿದಾರರು ಯಾವುದೇ ಪೊಲೀಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಪೊಲೀಸರು ಬಂಧಿಸಿದ್ದ ಪತ್ರಕರ್ತ ಮಂದೀಪ್ ಪೂನಿಯಾ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಆರೋಪಿಯು ಇದೇ ರೀತಿಯ ಅಪರಾಧಗಳಲ್ಲಿ ಒಳಗಾಗಬಾರದು. ಯಾವುದೇ ರೀತಿಯಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಅಗತ್ಯಬಿದ್ದಾಗ ತನಿಖೆ ಸಂಸ್ಥೆಗಳ ತನಿಖೆಗೆ ಸಹಕರಿಸುವಂತೆ ನಿರ್ದೇಶಿಸಲಾಗಿದೆ.
ಐಪಿಸಿ ಸೆಕ್ಷನ್ 353 ( ಹಲ್ಲೆ ಅಥವಾ ಅಪರಾಧ ಶಕ್ತಿಯಿಂದ ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಣೆಗೆ ಭಂಗ, 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಸೇವೆ ಮಾಡುವವರನ್ನು ತಡೆಯುವುದು) ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಭಾನುವಾರ ಪೂನಿಯಾ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.












Click it and Unblock the Notifications