ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 'ಆಪ್ ಬಿಡಿ, ಬಿಜೆಪಿ ಸೇರಿ; ಎಲ್ಲಾ ಪ್ರಕರಣ ಮುಚ್ಚುತ್ತೇವೆ'

|
Google Oneindia Kannada News

ನವದೆಹಲಿ, ಆಗಸ್ಟ್ 22: 'ಎಎಪಿ ತೊರೆದು, ಬಿಜೆಪಿಗೆ ಸೇರಿದರೆ, ಎಲ್ಲಾ ಪ್ರಕರಣಗಳನ್ನು ಮುಚ್ಚಿಹಾಕುತ್ತೆವೆ ಎಂದು ಬಿಜೆಪಿಯಿಂದ ಸಂದೇಶ ಬಂದಿದೆ' ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ದೆಹಲಿ ಮದ್ಯದ ನೀತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದ್ದು, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಈ ಬೆನ್ನಲ್ಲೇ ಆಮ್ ಆದ್ಮಿ ಪಕ್ಷವನ್ನು ತೊರೆದು ತಮ್ಮೊಂದಿಗೆ ಸೇರಿಕೊಳ್ಳುವಂತೆ ಬಿಜೆಪಿಯಿಂದ ಸಂದೇಶ ಬಂದಿದೆ ಎಂದು ಹೇಳಿದ್ದಾರೆ. ಬಿಜೆಪಿ ಸೇರಿದರೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಅವರ ವಿರುದ್ಧ ಇರುವ ಎಲ್ಲಾ ಪ್ರಕರಣಗಳನ್ನು ಮುಕ್ತಾಯಗೊಳಿಸುವುದಾಗಿ ತಿಳಿಸಿದೆ ಎಂದು ಆರೋಪಿಸಿದ್ದಾರೆ.

ಇದೇನು ಗಿಮಿಕ್, ಮೋದಿ ಜೀ?; ಸಿಸೋಡಿಯಾ ವ್ಯಂಗ್ಯಇದೇನು ಗಿಮಿಕ್, ಮೋದಿ ಜೀ?; ಸಿಸೋಡಿಯಾ ವ್ಯಂಗ್ಯ

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಬಿಜೆಪಿಯ ಸಂದೇಶ ನನಗೆ ಬಂದಿದೆ - "ಎಎಪಿ" ಅನ್ನು ಬಿಟ್ಟು ಬಿಜೆಪಿಗೆ ಸೇರಿಕೊಳ್ಳಿ, ಎಲ್ಲಾ ಸಿಬಿಐ ,ಇಡಿ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತೇವೆ" ಎಂದು ಎಂದಿದ್ದಾರೆ.

Join BJP, will Get All CBI, ED cases closed; Message From BJP- Manish Sisodia Claims

ಮುಂದುವರಿದು, "ಬಿಜೆಪಿಗೆ ನನ್ನ ಉತ್ತರ- ನಾನು ಮಹಾರಾಣಾ ಪ್ರತಾಪ್‌ನ ವಂಶಸ್ಥ, ನಾನು ರಜಪೂತ. ನನ್ನ ತಲೆಯನ್ನು ಬೇಕಾದರೇ ಕತ್ತರಿಸಿಕೊಳ್ಳುತ್ತೇನೆ. ಆದರೆ, ಭ್ರಷ್ಟ-ಪಿತೂರಿಗಾರರ ಮುಂದೆ ತಲೆಬಾಗುವುದಿಲ್ಲ. ನನ್ನ ಮೇಲಿರುವ ಕೇಸುಗಳೆಲ್ಲ ಸುಳ್ಳು, ಏನು ಬೇಕಾದರೂ ಮಾಡಿ" ಎಂದು ಉತ್ತರಿಸಿದ್ದೇನೆ ಎಂದೂ ತಿಳಿಸಿದ್ದಾರೆ.

ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು ಎಂದು ಪದೇ ಪದೇ ಒತ್ತಿ ಹೇಳುತ್ತಿರುವ ಆಪ್ ನಾಯಕ ಮನೀಶ್ ಸಿಸೋಡಿಯಾ, ಬಿಜೆಪಿಗೆ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ ದೆಹಲಿಯ ಮದ್ಯ ನೀತಿಯಲ್ಲಿನ ಅಕ್ರಮಗಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಇತ್ತೀಚೆಗೆ ಹಿರಿಯ ಎಎಪಿ ನಾಯಕನ ಮೇಲೆ ದಾಳಿ ನಡೆಸಿತ್ತು.

Join BJP, will Get All CBI, ED cases closed; Message From BJP- Manish Sisodia Claims

ಮನೀಶ್ ಸಿಸೋಡಿಯಾರನ್ನು ಬೆಂಬಲಿಸಿ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತೆ ಸೋಮವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ನೇತೃತ್ವದ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ನಿರತವಾಗಿದೆ ಎಂದಿದ್ದಾರೆ.

ಜನರು ಗಗನಕ್ಕೇರುತ್ತಿರುವ ಹಣದುಬ್ಬರ ಮತ್ತು ಏರುತ್ತಿರುವ ರೂಪಾಯಿ ಮೌಲ್ಯದಿಂದ ಜನರು ಬಳಲುತ್ತಿರುವಾಗಲೂ ಚುನಾಯಿತ ಸರಕಾರಗಳನ್ನು ಉರುಳಿಸಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಎಎಪಿಯ ಜನಪ್ರಿಯತೆಗೆ ಬಿಜೆಪಿ ಭಯಪಡುವ ಕಾರಣದಿಂದ ತಮ್ಮ ವಿರುದ್ಧ ಸುಳ್ಳು ಪ್ರಕರಣವನ್ನು ಹಾಕಲಾಗಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯು ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸ್ಪರ್ಧೆಯಾಗಿದೆ. ಎಎಪಿ ನಾಯಕನನ್ನು ತಡೆಯಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

Recommended Video

ಆತ್ಮ ನಿರ್ಭರ ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಅನಾವರಣ | Oneindia Kannada

English summary
Manish Sisodia Claims he got a message from the BJP that 'Break the AAP and join BJP, will get all CBI, ED cases closed'. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X