• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

JNU ಚುನಾವಣೆಯಲ್ಲಿ ಎಡಪಕ್ಷಗಳ ಕ್ಲೀನ್ ಸ್ವೀಪ್: ಎಬಿವಿಪಿ ಗಣನೀಯ ಸಾಧನೆ

|
   JNU Election : Left Alliance Students Win In Election | Oneindia Kannada

   ಯಾವ ವಿಧಾನಸಭಾ ಚುನಾವಣೆಗೂ ಕಮ್ಮಿಯಿಲ್ಲದಂತೇ ನಡೆಯುವ ದೆಹಲಿಯ ಜವಾಹರಲಾಲ್ ನೆಹರೂ ಯುನಿವರ್ಸಿಟಿಯ (JNU) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಂದಿನಂತೇ ಎಡಪಕ್ಷಗಳ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

   ಆದರೆ, ಈ ವಿಶ್ವವಿದ್ಯಾಲಯದಲ್ಲಿ ಬಿಜಿಪಿಯ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತನ್ನ ನೆಲೆಯನ್ನು ಕಂಡುಕೊಳ್ಳುತ್ತಿರುವುದಕ್ಕೆ ಸಾಕ್ಷಿ ಎನ್ನುವಂತೆ ಎಡಪಕ್ಷಗಳ ಅಭ್ಯರ್ಥಿಗಳಿಗೆ ಭರ್ಜರಿ ಪೈಪೋಟಿ ನೀಡಿದೆ.

   ದೆಹಲಿ ಉಪಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ

   ಮೊದಲಿನಿಂದಲೂ ಈ ವಿವಿಯಲ್ಲಿ ಎಡಪಕ್ಷಗಳದ್ದೇ ಕಾರುಬಾರು, ಆದರೆ ವಿವಿ ಆವರಣದಲ್ಲಿ ಉಗ್ರ ಅಫ್ಜಲ್ ಗುರು ನೇಣಿಗೆ ಹಾಕಿದ ಮೂರನೇ ವರ್ಷಾಚರಣೆಯ ವೇಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕನ್ಹಯ್ಯ ಕುಮಾರ್ ಮಾಡಿದ ಭಾಷಣ ಸೇರಿದಂತೆ, ಕೆಲವೊಂದು ವಿದ್ಯಮಾನಗಳಿಂದಾಗಿ ಎಬಿವಿಪಿಯ ಪ್ರಭಾವ ಹೆಚ್ಚಾಗಲಾರಂಭಿಸಿತು.

   ಎಬಿವಿಪಿಯಿಂದ ತೀವ್ರ ಪೈಪೋಟಿ ನಿರೀಕ್ಷಿಸಿದ್ದ ಎಡಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಂಘಗಳು ಹೊಂದಾಣಿಕೆ ಮಾಡಿಕೊಂಡು ಎಬಿವಿಪಿ ವಿರುದ್ದ ಕಣಕ್ಕಿಳಿದಿದ್ದವು, ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಎಲ್ಲಾ ಹುದ್ದೆಗಳಲ್ಲಿ ಎಡಪಕ್ಷದ ವಿದ್ಯಾರ್ಥಿಗಳು ಜಯ ಸಾಧಿಸಿದ್ದಾರೆ.

   ಎಲ್ಲಾ ಹುದ್ದೆಗಳಲ್ಲಿ ಎಬಿವಿಪಿ ಅಭ್ಯರ್ಥಿಗಳು ಸೋಲು ಅನುಭವಿಸಿದರೂ, ವೈಯಕ್ತಿಕವಾಗಿ ಅತಿಹೆಚ್ಚು ಮತಪಡೆದ ಸಂಘಟನೆ ಎನ್ನುವ ಹೆಗ್ಗಳಿಕೆ 'ಎಬಿವಿಪಿ' ಪಾಲಾಗಿರುವುದು, ಮುಂದಿನ ಚುನಾವಣೆಗಳಲ್ಲಿ ಇದು ಎಡಪಕ್ಷಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಗೆಲುವನ್ನು ಗೌರಿ ಲಂಕೇಶ್ ಗೆ ಅರ್ಪಿಸಿದ ವಿಜೇತ ಅಭ್ಯರ್ಥಿನಿ, ಮುಂದೆ ಓದಿ..

   JNU ವಿದ್ಯಾರ್ಥಿ ಸಂಘದ ಚುನಾವಣೆ

   JNU ವಿದ್ಯಾರ್ಥಿ ಸಂಘದ ಚುನಾವಣೆ

   JNU ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ 1,512 ಮತಗಳು ನೋಟಾ (None Of The Above) ಪಾಲಾಗಿದೆ. ಎಬಿವಿಪಿಯ ಆಕ್ರಮಣಕಾರಿ ಧೋರಣೆಯ ವಿರುದ್ದ ನಾವು ಹೋರಾಡಲಿದ್ದೇವೆಂದು ಗೆದ್ದ ವಿದ್ಯಾರ್ಥಿ ಅಭ್ಯರ್ಥಿಗಳು ಹೇಳಿದ್ದಾರೆ. ಪ್ರತೀ ದಿನ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲಿದ್ದೇವೆಂದು ವಿಜೇತ ಅಭ್ಯರ್ಥಿಗಳು ಭರವಸೆ ನೀಡಿದ್ದಾರೆ.(ಚಿತ್ರ: ಶೆಹಲಾ ರಷೀದ್ @ ಟ್ವಿಟ್ಟರ್)

   ಗೆಲುವನ್ನು ಗೌರಿ ಲಂಕೇಶ್ ಅವರಿಗೆ ಸಮರ್ಪಣೆ

   ಗೆಲುವನ್ನು ಗೌರಿ ಲಂಕೇಶ್ ಅವರಿಗೆ ಸಮರ್ಪಣೆ

   ನಮ್ಮ ಈ ವಿಜಯವನ್ನು ಇತ್ತೀಚೆಗೆ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ಚುನಾವಣೆ ಗೆದ್ದ ಅಧ್ಯಕ್ಷ ಅಭ್ಯರ್ಥಿನಿ ಗೀತಾ ಕುಮಾರಿ ಹೇಳಿದ್ದಾರೆ. ಗೌರಿ ಲಂಕೇಶ್ ತನ್ನ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಮೌಲ್ಯಗಳಿಗೆ ನಮ್ಮ ಗೆಲುವನ್ನು ಸಮರ್ಪಿಸುತ್ತಿದ್ದೇವೆಂದು ಗೀತಾ ಹೇಳಿದ್ದಾರೆ.

   ಎಲ್ಲಾ ಪ್ರಮುಖ ನಾಲ್ಕು ಸ್ಥಾನಗಳಲ್ಲಿ ಎಬಿವಿಪಿ ಎರಡನೇ ಸ್ಥಾನ

   ಎಲ್ಲಾ ಪ್ರಮುಖ ನಾಲ್ಕು ಸ್ಥಾನಗಳಲ್ಲಿ ಎಬಿವಿಪಿ ಎರಡನೇ ಸ್ಥಾನ

   ಚುನಾವಣೆ ನಡೆದ ಎಲ್ಲಾ ಪ್ರಮುಖ ನಾಲ್ಕು ಸ್ಥಾನಗಳಲ್ಲಿ ಎಬಿವಿಪಿ ಎರಡನೇ ಸ್ಥಾನ ಗಳಿಸಿದೆ, ಇದು ಕಳೆದ ಚುನಾವಣೆಗೆ ಹೋಲಿಸಿದರೆ ಎಬಿವಿಪಿಯ ಭಾರೀ ಸಾಧನೆ ಎನ್ನಬಹುದು. ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಎಬಿವಿಪಿಗೆ ಬೆಂಬಲ ನೀಡಿದ್ದಾರೆ. ಜೊತೆಗೆ ನಲವತ್ತರಲ್ಲಿ ಹತ್ತು ಕೌನ್ಸಿಲರ್ ಸೀಟನ್ನು ಎಬಿವಿಪಿ ತನ್ನದಾಗಿಸಿಕೊಂಡಿದೆ.

   ಎಲ್ಲಾ ನಾಲ್ಕು ಸ್ಥಾನಗಳು ಎಡಪಕ್ಷದ ಪಾಲು

   ಎಲ್ಲಾ ನಾಲ್ಕು ಸ್ಥಾನಗಳು ಎಡಪಕ್ಷದ ಪಾಲು

   ಅಧ್ಯಕ್ಷ ಚುನಾವಣೆಯಲ್ಲಿ ಎಡಪಕ್ಷದ ಗೀತಾ ಕುಮಾರಿ, ಎಬಿವಿಪಿಯ ನಿಧಿ ತ್ರಿಪಾಠಿಯನ್ನು464 ಮತಗಳಿಂದ, ಉಪಾಧ್ಯಕ್ಷ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ಎಡಪಕ್ಷದ ಸೈಮನ್ ಜೋಯಾ ಖಾನ್, ಎಬಿವಿಪಿಯ ದುರ್ಗೇಶ್ ಕುಮಾರ್ ಅವರನ್ನು 848 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದಾರೆ, (ಚಿತ್ರಕೃಪೆ: Indian Express)

   ಸೋಲಿನಲ್ಲೂ ಎಬಿವಿಪಿ ಗಣನೀಯ ಸಾಧನೆ

   ಸೋಲಿನಲ್ಲೂ ಎಬಿವಿಪಿ ಗಣನೀಯ ಸಾಧನೆ

   ಪ್ರಧಾನ ಕಾರ್ಯದರ್ಶಿ ಹುದ್ದೆಯ ಚುನಾವಣೆಯಲ್ಲಿ ಎಡಪಕ್ಷದ ದುಗ್ಗಿರಾಲಾ ಶ್ರೀಕೃಷಾ, ಎಬಿವಿಪಿಯ ನಿಖುಂಜ್ ಮಕ್ವಾನ ಅವರನ್ನು 1,107 ಮತಗಳಿಂದ, ಜಂಟಿ ಕಾರ್ಯದರ್ಶಿ ಚುನಾವಣೆಯಲ್ಲಿ ಶುಭಾನ್ಸು ಸಿಂಗ್ ಎಬಿವಿಪಿಯ ಪಂಕಜ್ ಕೇಸರಿ ಅವರನ್ನು 835 ಮತಗಳಿಂದ ಸೋಲಿಸಿದ್ದಾರೆ. (ಚಿತ್ರಕೃಪೆ: NDTV)

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   JNU (Jawaharlal Nehru University, Delhi) student union election: Left alliance retained all the four seats. Major rival BJP's student union ABVP sounding performance in JNUSU polls.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more