ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ
ನವದೆಹಲಿ, ಆಗಸ್ಟ್ 13 : ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್‌ಯು) ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆದಿದೆ. ಉಮದ್ ಖಾಲಿದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಮಧ್ಯಾಹ್ನ ನವದೆಹಲಿಯಲ್ಲಿನ Constitution Club of India ದಲ್ಲಿ ಅಪರಿಚಿತ ವ್ಯಕ್ತಿ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಉಮರ್ ಖಾಲಿದ್ ಹಲವು ವಿಚಾರಗಳಿಂದ ಸುದ್ದಿ ಮಾಡಿದ್ದರು. ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ 2016 ಫೆಬ್ರವರಿ 9ರಂದು ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದ ಆರೋಪವೂ ಅವರ ವಿರುದ್ದ ಕೇಳಿಬಂದಿತ್ತು.

'ಇಂದು ಒಂದು ಕಾರ್ಯಕ್ರಮವಿತ್ತು. ಉಮರ್ ಖಾಲಿದ್ ನಮ್ಮ ಜೊತೆ ಇದ್ದರು. ನಾವು ಟೀ ಸ್ಟಾಲ್‌ನಲ್ಲಿ ಇದ್ದೆವು. ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿ ಬಂದು ನಮ್ಮನ್ನು ತಳ್ಳಿ ಗುಂಡಿನ ದಾಳಿ ನಡೆಸಿದ. ಖಾಲಿದ್ ಕೆಳಗೆ ಬಿದ್ದರು. ನಾವು ವ್ಯಕ್ತಿಯನ್ನು ಹಿಡಿಯಲು ಪ್ರಯತ್ನ ನಡೆಸಿದಾಗ ಗಾಳಿಯಲ್ಲಿಯೂ ಒಮ್ಮೆ ಗುಂಡು ಹಾರಿಸಿದ' ಎಂದು ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾರೆ.
ಯಾರು ಉಮರ್ ಖಾಲಿದ್ ? : ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ 2016 ಫೆಬ್ರವರಿ 9ರಂದು ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪ ಹೊತ್ತಿರುವ ವಿದ್ಯಾರ್ಥಿಗಳಲ್ಲಿ ಉಮರ್ ಖಾಲಿದ್ ಅವರು ಒಬ್ಬರು.
ಜೆಎನ್‌ಯುದ ಇತಿಹಾಸ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದ ಖಾಲಿದ್, ಜಾರ್ಖಂಡ್ ಆದಿವಾಸಿಗಳ ಸ್ಥಿತಿಗಳ ಕುರಿತು ಪಿಎಚ್‌ಡಿ ಮಾಡುತ್ತಿದ್ದರು. ದೇಶ ದ್ರೋಹದ ಆರೋಪದಡಿ ಅವರನ್ನು ಬಂಧಿಸಲಾಗಿತ್ತು, ನ್ಯಾಯಾಂಗ ಬಂಧನದಲ್ಲೂ ಅವರಿದ್ದರು.











Click it and Unblock the Notifications