ಮೋದಿ ಕೈಗೆ 29 ಅಂಶಗಳ 94 ಪುಟಗಳ ಬೇಡಿಕೆ ಪಟ್ಟಿ ಕೊಟ್ಟ ಜಯಲಲಿತಾ

Posted By:
Subscribe to Oneindia Kannada

ನವದೆಹಲಿ, ಜೂನ್ 14: ಕರ್ನಾಟಕ ಸರ್ಕಾರದ ಉದ್ದೇಶಿತ ಮೇಕೆದಾಟು ಯೋಜನೆ, ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ 29 ಅಂಶಗಳುಳ್ಳ 92 ಪುಟಗಳ ಮನವಿ ಪತ್ರವನ್ನು ಪ್ರಧಾನಿ ಮೋದಿ ಅವರ ಕೈಗೆ ತಮಿಳುನಾಡಿನ ಸಿಎಂ ಜಯಲಲಿತಾ ಅವರು ಮಂಗಳವಾರ ರಾತ್ರಿ ನೀಡಿದ್ದಾರೆ.

ಪ್ರಧಾನಿ ಮೋದಿಯವರನ್ನು ನವದೆಹೆಲಿಯಲ್ಲಿ ಮಂಗಳವಾರ ಭೇಟಿ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್​ಟಿ) ಮಸೂದೆಗೆ ಎಐಎಡಿಎಂಕೆ ಪಕ್ಷವು ಸೂಚಿಸಿರುವ ತಿದ್ದುಪಡಿಗಳನ್ನು ಅಂಗೀಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಏಕರೂಪ ಜಿಎಸ್​ಟಿ ಮಸೂದೆಗೆ ಎಲ್ಲಾ ರಾಜ್ಯಗಳು ಬೆಂಬಲ ವ್ಯಕ್ತ ಪಡಿಸಿದ್ದರೂ, ತಮಿಳುನಾಡು ಆಕ್ಷೇಪ ವ್ಯಕ್ತ ಪಡಿಸಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ತಮಿಳುನಾಡು ಬಿಟ್ಟು ಎಲ್ಲಾ ರಾಜ್ಯಗಳಿಂದ ಜಿಎಸ್ ಟಿಗೆ ಬೆಂಬಲ]

Jayalalithaa submits 94-page memorandum to Modi

ಜಯಾ ಅವರ ಬೇಡಿಕೆಗಳು: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಜಯಲಲಿತಾ ಅವರು ಮೊದಲ ಭೇಟಿಯಲ್ಲೇ ಬೇಡಿಕೆಗಳ ದೊಡ್ಡ ಮನವಿ ಪತ್ರವನ್ನು ನೀಡಿದ್ದಾರೆ.

-
ಮೇಕೆದಾಟಿಗೆ ಅಡ್ಡಗಾಲು ಹಾಕಿದ ಜಯಾರಿಂದ ಮೋದಿಗೆ ಮನವಿ!

ಮೇಕೆದಾಟಿಗೆ ಅಡ್ಡಗಾಲು ಹಾಕಿದ ಜಯಾರಿಂದ ಮೋದಿಗೆ ಮನವಿ!

-
-
-
-
-

* ತಮಿಳು ಭಾಷೆಯನ್ನು ರಾಷ್ಟ್ರದ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕು.
* ಕಾವೇರಿ ನದಿ ನೀರಿನ ಬಿಕ್ಕಟ್ಟು ಪರಿಹರಿಸಲು ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು.
* ಕರ್ನಾಟಕ ಕಾವೇರಿ ನದಿ ಮೇಲೆ ಮೇಕೆದಾಟಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟಿಗೆ ಅನುಮತಿ ನೀಡಬಾರದು.
* ಶ್ರೀಲಂಕಾ ಸ್ವಾಮ್ಯದಲ್ಲಿರುವ ದ್ವೀಪ ಕಟ್ಚಥೀವು ಮುಕ್ತಗೊಳಿಸುವುದು.
* ಬಂಧಿತ ತಮಿಳುನಾಡಿನ ಬೆಸ್ತರ ಬಿಡುಗಡೆ ಪ್ರಕ್ರಿಯೆ ತ್ವರಿತಗೊಳಿಸುವುದು.
* ಮುಲ್ಲಾಪೆರಿಯಾರ್ ಅಣೆಕಟ್ಟಿನ ನೀರಿನ ಶೇಖರಣಾ ಮಟ್ಟ 152 ಅಡಿಗೇರಿಸುವುದು
* ಕುಡಂಕುಳಂನಲ್ಲಿ 1,000 ಮೆಗಾ ವ್ಯಾಟ್ ಸಾಮರ್ಥ್ಯದ ಅಣುಶಕ್ತಿ ಸ್ಥಾವರ ಸ್ಥಾಪನೆಗೆ ಬೇಡಿಕೆ.
* ಸರಕು ಮತ್ತು ಸೇವಾ ತೆರಿಗೆ ಮಸೂದೆಯಿಂದ ಪೆಟ್ರೋಲಿಯಂ ಉತ್ಪನ್ನಗಳಿಗೆ ವಿನಾಯಿತಿ ನೀಡುವುದು.
* ಚೆನ್ನೈನಲ್ಲಿರುವ ನೋಕಿಯಾ ಘಟಕವನ್ನು ತೈವಾನಿನ ಫಾಕ್ಸ್ ಕಾನ್ ಕಂಪನಿಗೆ ವಹಿಸಿಕೊಡಲು ಅನುಮತಿ.
* ಏಕರೂಪ ಸಾಮಾನ್ಯ ವೈದ್ಯಕೀಯ ಪರೀಕ್ಷೆಯಿಂದ ತಮಿಳುನಾಡಿಗೆ ಮುಕ್ತಿ ನೀಡುವುದು, ನೀಟ್ ಗೊಂದಲಕ್ಕೆ ಪರಿಹಾರ ನೀಡಲು ಮನವಿ
* ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಮನವಿ.
* ಚೆನೈ ಹಾಗು ಇನ್ನಿತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಹ ಪರಿಹಾರ ನಿಧಿ.
* ಪಡಿತರ ವಿತರಣೆ ವ್ಯವಸ್ಥೆಯಡಿಯಲ್ಲಿ ಸೀಮೆಎಣ್ಣೆ ಪೂರೈಕೆಗೆ ಮನವಿ.

(ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Forming a Cauvery Management Board, stopping Karanataka from building a new dam across Cauvery river and accepting Tamil Nadu's suggestions on GST figure in the wishlist submitted by Chief Minister J. Jayalalithaa to Prime Minister Narendra Modi here on Tuesday (Jun 14).
Please Wait while comments are loading...