ಜಾಮಾ ಮಸೀದಿ ಜಮುನಾ ದೇವಿ ಮಂದಿರವಾಗಿತ್ತು: ಬಿಜೆಪಿ ಮುಖಂಡ
ನವದೆಹಲಿ, ಡಿಸೆಂಬರ್ 07: ದೆಹಲಿಯ ಜಾಮಾ ಮಸೀದಿ, ಮೂಲವಾಗಿ ಜಮುನಾ ದೇವಿ ದೇವಾಲಯವಾಗಿತ್ತು, ಹಾಗೆಯೇ ಈಗಿನ ತಾಜ್ ಮಹಲ್ ತೇಜೋಮಹಾಲಯವಾಗಿತ್ತು ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಹೇಳಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟಿಯಾರ್, "ಮೊಘಲರ ಕಾಲದಲ್ಲಿ 6000 ಕ್ಕೂ ಹೆಚ್ಚು ಪ್ರಮುಖ ಹಿಂದುತಾಣಗಳ ಮೇಲೆ ದಾಳಿ ನಡೆದಿತ್ತು. ಆ ಸಮಯದಲ್ಲಿ ಹಲವು ದೇವಾಲಯಗಳು ಮಸೀದಿಗಳಾದವು" ಎಂದರು.

ನಮ್ಮ ಧಾರ್ಮಿಕ ತಾಣಗಳನ್ನು ಮುಸ್ಲಿಮರು ಸದಾ ಗುರಿಯಾಗಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ನಮಗೆ ಬೇಕಾಗಿರುವುದು ರಾಮ ಮಂದಿರ ನಿರ್ಮಾಣ ಮಾತ್ರ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ಕಪಿಲ್ ಸೀಬಲ್ ಸುನ್ನಿ ವಕ್ಫ್ ಬೋರ್ಡ್ ಅನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. "ಆ ಜಾಗದಲ್ಲಿ ಮಸೀದಿಯನ್ನು ಕಟ್ಟಲು ಕಾಂಗ್ರೆಸ್ ಹವಣಿಸುತ್ತಿದೆ. ಆದರ ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ" ಎಂದು ಅವರು ಹೇಳಿದರು.












Click it and Unblock the Notifications