ಸೊಮಾಲಿಯಾದಲ್ಲಿ ಸಿಲುಕಿರುವ 33 ಭಾರತೀಯರನ್ನು ಕರೆತರಲು ಪ್ರಯತ್ನ: ಜೈಶಂಕರ್

ನವದೆಹಲಿ, ಅಕ್ಟೋಬರ್ 23:ಸೊಮಾಲಿಯಾದಲ್ಲಿ ಸಿಲುಕಿರುವ 33 ಮಂದಿ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಸೊಮಾಲಿಯಾದ ಮೊಗದಿಶುವಿನಲ್ಲಿ ಸಿಲುಕಿರುವ 33 ಭಾರತೀಯ ಕಾರ್ಮಿಕರಿಗೆ ಪರಿಹಾರ ಒದಗಿಸಲು ಹಾಗೂ ಅವರನ್ನು ಭಾರತಕ್ಕೆ ವಾಪಸ್‌ ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನೈರೊಬಿಯಲ್ಲಿನ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಭಾರತದಲ್ಲಿರುವ ಸೊಮಾಲಿಯಾದ ರಾಯಭಾರ ಕಚೇರಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ' ಎಂದು ಜೈಶಂಕರ್ ಮಾಹಿತಿ ನೀಡಿದ್ದಾರೆ.

Jaishankar Says India Working On Relief, Return Of 33 Indians Stuck In Somalia

ಕಳೆದ ಎಂಟು ತಿಂಗಳಿನಿಂದ ಉತ್ತರ ಪ್ರದೇಶದ 25 ಕಾರ್ಮಿಕರು ಸೇರಿದಂತೆ 33 ಭಾರತೀಯರನ್ನು ಸೊಮಾಲಿಯಾದ ಕಂಪನಿಯೊಂದು ಒತ್ತೆಯಾಗಿರಿಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.

ಮೊದಲ ಎರಡು ತಿಂಗಳು ಅವರೊಂದಿಗೆ ಉತ್ತಮವಾಗಿ ವ್ಯವಹರಿಸಲಾಗುತ್ತಿತ್ತು. ಎರಡು ತಿಂಗಳ ಬಳಿಕ ವೇತನವನ್ನೂ ನೀಡದೆ ತೊಂದರೆ ಕೊಡುತ್ತಿದ್ದಾರೆ ಎನ್ನಲಾಗಿದೆ. 10 ತಿಂಗಳ ಹಿಂದೆ 33 ಭಾರತೀಯ ಕಾರ್ಮಿಕರು ಈ ಕಂಪನಿಗೆ ಸೇರ್ಪಡೆಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+