ಐಎಸ್ಐಎಸ್ ಉಗ್ರರ ಕಣ್ಣು ಭಾರತದ ಯುವತಿಯರ ಮೇಲೂ ಬಿತ್ತೆ?
ನವದೆಹಲಿ, ಡಿಸೆಂಬರ್, 18: ಐಎಸ್ಐಎಸ್ ಉಗ್ರ ಸಂಘಟನೆ ಕಣ್ಣು ಇದೀಗ ಭಾರತದ ಯುವತಿಯರ ಮೇಲೆ ನೆಟ್ಟಿದೆ ಎಂಬ ಅಂಶ ಬಹಿರಂಗವಾಗಿದೆ. 14 ರಿಂದ 20 ವರ್ಷದ ಯುವತಿಯರನ್ನು ಉಗ್ರ ಚಟುವಟಿಕೆಗೆ ಬಳಸಿಕೊಳ್ಳಲು ಆರಂಭ ಮಾಡಿದ್ದರ ಬಗೆಗಿನ ಆತಂಕಕಾರಿ ಮಾಹಿತಿಗಳು ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.
ಯುವತಿಯರನ್ನು ಉಗ್ರ ಸಂಘಟನೆಗೆ ಸೇರಿಸುವ ಉದ್ದೇಶ ಹೊಂದಿದ್ದ ಭಾರತೀಯ ತೈಲ ಕಂಪನಿಯ ಅಧಿಕಾರಿ ಸಿರಾಜುದ್ದೀನ್ ನನ್ನು ರಾಜಸ್ಥಾನದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈತನ ಕುರಿತಾಗಿ ಗುಪ್ತಚರ ಇಲಾಖೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದೆ.[ಉಗ್ರವಾದ ಬಿತ್ತುತ್ತಿದ್ದವನಿಗೆ ಸುರತ್ಕಲ್ ನಂಟಿತ್ತೆ?]

ಸಿರಾಜುದ್ದೀನ್ ನನ್ನು ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಿದಾಗ, 'ಈತ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದ ಯುವತಿಯರನ್ನು ಉಗ್ರ ಚಟುವಟಿಕೆಯಲ್ಲಿ ತೊಡಗಿಸುವ ಯೋಜನೆ ರೂಪಿಸಿದ್ದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾನೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಐಎಸ್ಐಎಸ್ ಉಗ್ರ ಸಂಘಟನೆಯಲ್ಲಿ 14 ರಿಂದ 20 ವಯಸ್ಸಿನ ಯುವತಿಯರು ಇದ್ದಾರೆಯೆ? ಎಂದು ತನಿಖೆ ಕೈಗೊಂಡಾಗ ಹೈದರಾಬಾದಿನ ಒಂದು ಗುಂಪು ಉಗ್ರ ಸಂಘಟನೆಗೆ ಸೇರಲು ಒಪ್ಪಿಕೊಂಡಿರುವುದು ಗೊತ್ತಾಗಿದೆ. ಅಲ್ಲದೇ ಐಎಸ್ ಐಎಸ್ ಸೇರಲು ಪ್ರಯತ್ನ ಪಟ್ಟ 16 ವರ್ಷದ ಮುಸ್ಲಿಂ ಬಾಲಕಿಯನ್ನು ಈಗಾಗಲೇ ಉಗ್ರ ನಿಗ್ರಹ ಪಡೆ ರಕ್ಷಣೆ ಮಾಡಿದೆ.[ಪುಣೆಯ ಬಾಲಕಿ ಉಗ್ರ ಸಂಘಟನೆ ಸೇರಲು ಹೊರಟಿದ್ದಳೆ?]
ಗುಪ್ತಚರ ಇಲಾಖೆ ಅಧಿಕಾರಿಗಳು ಪುಣೆ ಬಾಲಕಿ, ಸಿರಾಜುದ್ದೀನ್ ಉಗ್ರ ಸಂಘಟನೆ ಜೊತೆ ಕೈಜೋಡಿಸಿರುವುದನ್ನು ಪತ್ತೆಹಚ್ಚಲಾಗಿದೆ. ಈ ವಿಚಾರವಾಗಿ ಇನ್ನಷ್ಟು ತನಿಖೆ ಕೈಗೊಳ್ಳಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications