ಆನ್ ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ನಲ್ಲಿ ಸೇವಾ ತೆರಿಗೆ ಕಡಿತ

Posted By:
Subscribe to Oneindia Kannada

ನವದೆಹಲಿ, ನವೆಂಬರ್, 23: ಆನ್ ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವವರಿಗೆ ಸೇವಾ ತೆರೆಗಿಯೆನ್ನು ಕಡಿತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಘೋಷಿಸಿದೆ.

ನವೆಂಬರ್ 23ರಿಂದ ಡಿಸೆಂಬರ್ 31 ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ರೈಲ್ವೆ ಇಲಾಖೆ ಹಾಗು ಪ್ರವಾಸೋದ್ಯಮ ನಿಗಮ ಸ್ಪಷ್ಟಪಡಿಸಿವೆ.

IRCTC asked to scrap online booking charge till Dec.31

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ರೈಲ್ವೆ ಇಲಾಖೆ ವಕ್ತಾರ ಅನಿಲ್ ಕುಮಾರ್ ಸಕ್ಸೇನಾ ಅವರು IRCTC ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಬುಕ್ ಮಾಡುವವರಿಗೆ ಸೇವಾ ತೆರಿಗೆ ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ರೈಲ್ವೆ ಇಲಾಖೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ನ ಹಿರಿಯ ಅಧಿಕಾರಿಗಳು ಮಂಗಳವಾರ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ರೂ.500 ಹಾಗು, ರೂ.1000 ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ನಂತರ ನಗದರು ರಹಿತ ವ್ಯವಾಹರಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಜನಧನ ಯೋಜನೆ, ಆಧಾರ್, ನೋಟು ನಿಷೇಧ ಈ ಎಲ್ಲಾ ಕ್ರಮಗಳನ್ನು ನಗದುರಹಿತ ವಹಿವಾಟಿಗಾಗಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Railways on Tuesday waived the service tax on e-tickets and i-tickets booked via IRCTC's online website from November 23 to December 31 this year
Please Wait while comments are loading...