• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್‌ನಿಂದ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಕೇಂದ್ರ ವಿಫಲ: ರಾಹುಲ್

|

ನವದೆಹಲಿ, ಜೂನ್ 13: ಲಾಕ್‌ಡೌನ್‌ನಿಂದ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

   60 ಮೇಲ್ಪಟ್ಟವರನ್ನು ಮಾತ್ರವಲ್ಲ ಯುವಕರ ಸಾವಿಗೂ ಕಾರಣವಾಗ್ತಿದೆ ಕೊರೋನಾ | Oneindia Kannada

   ದೇಶಾದ್ಯಂತ ಒಟ್ಟು ನಾಲ್ಕು ಹಂತದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು.ಲಾಕ್‌ಡೌನ್ ಸಂದರ್ಭದಲ್ಲೂ ಸೋಂಕು ಹೆಚ್ಚಾಗುತ್ತಲೇ ಇತ್ತು, ಇದೀಗ ಲಾಕ್‌ಡೌನ್ ತೆರವುಗೊಳಿಸಿದ ಮೇಲಂತೂ ವಿಪರೀತವಾಗುತ್ತದೆ. ಕೊರೊನಾ ಸೋಂಕಿತ ಪ್ರಕರಣಗಳ ಹೆಚ್ಚಳ ಕುರಿತು ನಕ್ಷೆಯೊಂದನ್ನು ಚಿತ್ರಿಸಿ ವಿವರ ನೀಡಿದ್ದಾರೆ.

   'ಲಾಕ್‌ಡೌನ್ ವಿಫಲ': ಸಾಕ್ಷಿ ಮುಂದಿಟ್ಟು ಸರ್ಕಾರಕ್ಕೆ ಚಾಟಿ ಬೀಸಿದ ರಾಹುಲ್ ಗಾಂಧಿ

   ಕೊವಿಡ್ 19 ರೋಗ ತಡಗಟ್ಟುವಲ್ಲಿ ತಡೆಗಟ್ಟುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಶುಕ್ರವಾರ ಟೀಕಿಸಿದ್ದ ರಾಹುಲ್ ಗಾಂಧಿ, ಕೊವಿಡ್-19 ಕೇಸ್ ಗಳು ದೇಶದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ನಕ್ಷೆಯ ಮೂಲಕ ತೋರಿಸಿದ್ದರು. ಕೊರೊನಾವೈರಸ್ ನಿರ್ವಹಣೆಯಲ್ಲಿ ಕೇಂದ್ರಸರ್ಕಾರದ ಪಾತ್ರವನ್ನು ರಾಹುಲ್ ಗಾಂಧಿ ಪ್ರಶ್ನಿಸುತ್ತಿದ್ದಾರೆ.

   ಹುಂಭತನ ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡಿಸುತ್ತಿದ್ದು, ವಿಭಿನ್ನ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

   ನಿನ್ನೆ ಒಂದೇ ದಿನ 386 ಸಾವಿನೊಂದಿಗೆ 11, 455 ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 308, 993ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 8, 884 ಆದ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

   English summary
   Congress leader Rahul Gandhi on Saturday used a quote, often misattributed to Albert Einstein, to hit out at the government over its lockdown strategy to point out that the spread of the coronavirus disease (Covid-19) has not been halted because of the restrictions.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X