ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾ ಗಾಂಧಿ ಪ್ರಶಸ್ತಿಗೆ ಇಸ್ರೋ ಆಯ್ಕೆ

By Kiran B Hegde
|
Google Oneindia Kannada News

ನವದೆಹಲಿ, ನ. 19: ಪ್ರಸಕ್ತ ವರ್ಷದ ಶಾಂತಿ, ನಿಶ್ಯಸ್ತ್ರೀಕರಣ ಹಾಗೂ ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಪ್ರಶಸ್ತಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಆಯ್ಕೆಯಾಗಿದೆ.

ಪ್ರಶಸ್ತಿ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಈ ಕುರಿತು ಬುಧವಾರ ಮಾಹಿತಿ ನೀಡಿದ್ದಾರೆ. [ಮಂಗಳಯಾನದ ಯಶಸ್ಸಿನಲ್ಲಿ ಮಹಿಳೆ]

ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಇಸ್ರೋಗೆ ನೀಡಲಾಗುವುದು. ಮಂಗಳ ಗ್ರಹಕ್ಕೆ ಉಪಗ್ರಹ ರವಾನೆ ಹಾಗೂ ಬಾಹ್ಯಾಕಾಶ ಬಳಕೆಯಲ್ಲಿ ಅಂತಾರಾಷ್ಟ್ರೀಯ ಸಹಕಾರ ವೃದ್ಧಿಗೆ ಇಸ್ರೋ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. [ಮಂಗಳನಿಂದ ಬಂದ ವಿಡಿಯೋ ನೋಡಿದ್ದೀರಾ]

isro

ಭಾರತೀಯ ವಿಜ್ಞಾನಿಗಳು ಮತ್ತು ಪ್ರತಿಭಾನ್ವಿತರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವ ರೀತಿ, ತಾಂತ್ರಿಕತೆ ಹಾಗೂ ಆಧುನೀಕರಣ ಕ್ಷೇತ್ರದಲ್ಲಿ ಅತ್ಯಂತ ಮುಂದುವರಿದ ರಾಷ್ಟ್ರಗಳೊಂದಿಗೆ ಸಾಗುವ ಬಗೆಯನ್ನು ಇಸ್ರೋ ತಿಳಿಸಿಕೊಟ್ಟಿದೆ. [ಮಂಗಳಯಾನದಿಂದ ಮತ್ತೊಂದು ಚಿತ್ರ ಬಂತು]

ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಇತರ ದೇಶಗಳಿಂದ ನಮಗೆ ಪ್ರವೇಶ ನಿರಾಕರಿಸಲ್ಪಟ್ಟ ಪ್ರತಿಕೂಲ ಸನ್ನಿವೇಶಗಳಲ್ಲಿ ಸ್ವಾವಲಂಬನೆಯ ಮಾರ್ಗ ಹೇಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಇಸ್ರೋ ಸಾಬೀತುಪಡಿಸಿದೆ ಎಂದು ಹಮೀದ್ ಅನ್ಸಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. [ಅಮೆರಿಕ-ಭಾರತ ಜಂಟಿ ಮಂಗಳಯಾನ]

English summary
ISRO is selected for Indira Gandhi award for peace, disarmament and development for 2014. ISRO awarded for recognition of its path-breaking achievement, culminating in the Mars orbiter mission, its significant contribution in strengthening international cooperation in peaceful use of outer space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X