• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೇ 25ರಿಂದ ಹೊಸ ಮಾರ್ಗಸೂಚಿ: ಬೆಂಗಳೂರು ಟು ದೆಹಲಿ ವಿಮಾನದ ಟಿಕೆಟ್ ಬೆಲೆ ಎಷ್ಟು?

|

ದೆಹಲಿ, ಮೇ 22: ಸುಮಾರು ಎರಡು ತಿಂಗಳ ಬಳಿಕ ದೇಶಿಯ ವಿಮಾನ ಸಂಚಾರ ಆರಂಭವಾಗುತ್ತಿದೆ. ಮೇ 25 ರಿಂದ ಭಾರತದಲ್ಲಿ ದೇಶಿಯ ವಿಮಾನ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

   ದುಬೈನಿಂದ‌ ಬಂದವರ ವಿರುದ್ಧ ಮಂಗಳೂರು ನಿವಾಸಿಗಳ ಆಕ್ರೋಶ | Quarantine for Dubai returns | Mangalore

   ಸರ್ಕಾರಿ ಸ್ವಾಮ್ಯದ ಹಾಗು ಎಲ್ಲ ಖಾಸಗಿ ವಿಮಾನಯಾನ ಸಂಸ್ಥೆಗಳಿಗೂ ಈ ಸಂದೇಶ ರವಾನಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ಕೇಂದ್ರ ಪ್ರಕಟ ಮಾಡಲಿದ್ದು, ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಮಾಡಲಾಗುತ್ತಿದೆ.

   ದೇಶೀಯ ವಿಮಾನಗಳ ಹಾರಾಟ ಮೇ 25ರಿಂದ ಆರಂಭ: ಮಾರ್ಗಸೂಚಿ ಶೀಘ್ರ ಪ್ರಕಟದೇಶೀಯ ವಿಮಾನಗಳ ಹಾರಾಟ ಮೇ 25ರಿಂದ ಆರಂಭ: ಮಾರ್ಗಸೂಚಿ ಶೀಘ್ರ ಪ್ರಕಟ

   ವಿಮಾನ ಸಂಚರಿಸಲು ತೆಗೆದುಕೊಳ್ಳುವ ಕಾಲಾವಧಿ ಆಧಾರದ ಮೇಲೆ ಏಳು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಅದಕ್ಕೆ ತಕ್ಕಂತೆ ಟಿಕೆಟ್ ಬೆಲೆ ಮಾರಾಟ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

   ಏಳು ವಿಭಾಗಗಳ ಮಾಹಿತಿ ಹೀಗಿವೆ

   ಏಳು ವಿಭಾಗಗಳ ಮಾಹಿತಿ ಹೀಗಿವೆ

   ಮೊದಲ ವಿಭಾಗ: 40 ನಿಮಿಷಗಳಿಗಿಂತ ಕಡಿಮೆ ಅವಧಿ

   ಎರಡನೆಯ ವಿಭಾಗ: 40-60 ನಿಮಿಷಗಳ ನಡುವಿನ ಅವಧಿ

   ಮೂರನೇ ವಿಭಾಗ: 60-90 ನಿಮಿಷಗಳ ಅವಧಿ

   ನಾಲ್ಕನೇ ವಿಭಾಗ: 90-120 ನಿಮಿಷಗಳ ಅವಧಿ

   ಐದನೇ ವಿಭಾಗ: 120-150 ನಿಮಿಷಗಳ ಅವಧಿ

   ಆರನೇ ವಿಭಾಗ: 150-180 ನಿಮಿಷಗಳ ಅವಧಿ

   ಏಳನೇ ವಿಭಾಗ: 180-210 ನಿಮಿಷಗಳ ಅವಧಿ

   ಈ ಆಧಾರದ ಮೇಲೆ ಟಿಕೆಟ್ ಬೆಲೆ ನಿಗದಿ ಮಾಡಲಾಗುವುದು

   ಬೆಂಗಳೂರು ಟು ದೆಹಲಿ ಬೆಲೆ ಎಷ್ಟಿರಬಹುದು?

   ಬೆಂಗಳೂರು ಟು ದೆಹಲಿ ಬೆಲೆ ಎಷ್ಟಿರಬಹುದು?

   ಬೆಂಗಳೂರಿನಿಂದ ದೆಹಲಿ ವಿಮಾನ ಪ್ರಯಾಣ ಐದನೇ ವಿಭಾಗದ ಅಡಿಯಲ್ಲಿ ಇರುತ್ತೆ. ದೆಹಲಿಯಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ದೆಹಲಿ ಪ್ರಯಾಣ ಮಾಡಲು 120-150 ನಿಮಿಷಗಳು ಸಮಯ ತೆಗೆದುಕೊಳ್ಳುತ್ತೆ. ಈ ವಿಭಾಗದಲ್ಲಿ ಟಿಕೆಟ್ ಬೆಲೆ ಕನಿಷ್ಠ 4500 ರೂಪಾಯಿ ಆಗಿದ್ದು, ಗರಿಷ್ಠ 13000 ರೂ ನಿಗದಿಯಾಗಿದೆ. ಇದಕ್ಕಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ.

   ದೆಹಲಿಯಿಂದ ಮುಂಬೈ

   ದೆಹಲಿಯಿಂದ ಮುಂಬೈ

   ದೆಹಲಿಯಿಂದ ಮುಂಬೈ ತೆರಳುವ ವಿಮಾನ ನಾಲ್ಕನೇ ವಿಭಾಗದ ಅಡಿಯಲ್ಲಿ ಬರುತ್ತೆ. ಈ ಎರಡು ಪ್ರಮುಖ ನಗರಗಳಿಗೆ ತಲುಪಲು 90-120 ನಿಮಿಷಗಳ ಅವಧಿ ಬೇಕು. ಈ ಆಧಾರದಲ್ಲಿ ಟಿಕೆಟ್ ಬೆಲೆ ಕನಿಷ್ಠ 3,500 ರೂಗಳಿಂದ ಗರಿಷ್ಠ 10000 ಸಾವಿರವರೆಗೂ ನಿಗದಿ ಪಡಿಸಲಾಗಿದೆ. ಈ ಮಾರ್ಗದಲ್ಲಿ ಅತಿ ಹೆಚ್ಚು ಜನರು ಸಂಚರಿಸುತ್ತಾರೆ.

   ಅವಧಿಗೆ ತಕ್ಕಂತೆ ಟಿಕೆಟ್ ಬೆಲೆ

   ಅವಧಿಗೆ ತಕ್ಕಂತೆ ಟಿಕೆಟ್ ಬೆಲೆ

   ಮೇ 25 ರಿಂದ ಆಗಸ್ಟ್ 24ರವರೆಗೂ ಈ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಕೇಂದ್ರದ ಮುಂದಿನ ಆದೇಶದವರೆಗೂ ಎಲ್ಲ ವಿಮಾನಯಾನ ಸಂಸ್ಥೆಗಳುಅವುಗಳ ಅವಧಿಯ ಆಧಾರದ ಮೇಲೆ ಟಿಕೆಟ್ ಬೆಲೆಗಳನ್ನು ನಿಗದಿಪಡಿಸಬೇಕು ಎಂದು ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಹೇಳಿದ್ದಾರೆ.

   English summary
   After Two month Lockdown India to start domestic flight operations from May 25 all over country. civil aviation ministry fixed ticket prices based on duration.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X