ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸಲು ಅಣಿಯಾದ ಭಾರತ

|
Google Oneindia Kannada News

ನವದೆಹಲಿ, ಮೇ.02: ವಿಶ್ವವನ್ನೇ ವ್ಯಾಪಿಸಿರುವ ನೊವೆಲ್ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ಭಾರತೀಯ ವೈದ್ಯರು, ಪೊಲೀಸರು ಹಾಗೂ ಕಾರ್ಮಿಕರು ವಾರಿಯರ್ಸ್ ರೀತಿಯಲ್ಲಿ ಹೋರಾಡುತ್ತಿದ್ದಾರೆ.
ದೇಶವನ್ನು ಕೊರೊನಾ ವೈರಸ್ ಎಂಬ ಮಹಾಮಾರಿಯಿಂದ ರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ವಾರಿಯರ್ಸ್ ಗೆ ವಿಶೇಷ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಭಾರತೀಯ ನೌಕಾ ಸೇನೆ ಮತ್ತು ವಾಯುಸೇನೆಗಳು ಸನ್ನದ್ಧವಾಗಿವೆ.

ನಿಟ್ಟುಸಿರುವ ಬಿಡುವ ಸುದ್ದಿ: ಭಾರತದಲ್ಲಿ 10,000 ಸೋಂಕಿತರು ಗುಣಮುಖ!ನಿಟ್ಟುಸಿರುವ ಬಿಡುವ ಸುದ್ದಿ: ಭಾರತದಲ್ಲಿ 10,000 ಸೋಂಕಿತರು ಗುಣಮುಖ!

ಮೇ.03ರ ಭಾನುವಾರ ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೆ ಹೆಲಿಕಾಪ್ಟರ್ ಗಳ ಮೂಲಕ ಹೂವಿನ ಮಳೆಗರೆಯಲು ಸೇನೆ ಅಣಿಯಾಗಿದೆ. ಹಾಗಾದರೆ ಭಾನುವಾರ ವಿಶೇಷ ಗೌರವ ಸಲ್ಲಿಸಲು ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಭಾನುವಾರ ಕೊರೊನಾ ವಾರಿಯರ್ಸ್ ಗೆ ವಿಶೇಷ ಗೌರವ:
- ದೇಶಾದ್ಯಂತ ಭದ್ರತೆಗೆ ಶ್ರಮಿಸುತ್ತಿರುವ ಪೊಲೀಸರ ಮೇಲೆ ಹೂವಿನ ಮಳೆಗರೆಯುವುದು
- ನವದೆಹಲಿಯಿಂದ ಆರಂಭವಾಗಿ ದೇಶಾದ ಹಲವೆಡೆ ಸಂಚರಿಸಲಿರುವ ಸೇನಾ ಹೆಲಿಕಾಪ್ಟರ್ ಗಳ ಮೂಲಕ ಹೂವಿನ ದಳಗಳನ್ನು ಹಾಕುವುದು

Indian Armed Forces Planned For Salute Corona Virus warriors
- ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೂ ದೇಶದ ಪ್ರಮುಖ ನಗರದಲ್ಲಿ ವಾಯುಸೇನಾ ವಿಮಾನಗಳು ಹಾರಾಟ ನಡೆಸಲಿವೆ
- ಪೂರ್ವದಲ್ಲಿ ಶ್ರೀನಗರದಿಂದ ಆರಂಭಿಸಿ ದಕ್ಷಿಣ ಭಾಗದಲ್ಲಿರುವ ಕೇರಳ ತಿರುವನಂತಪುರಂವರೆಗೂ ಸೇನಾ ವಿಮಾನಗಳು ಹಾರಾಟ ನಡೆಸಲಿವೆ
- ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೂ ವಾಯುಸೇನಾ ಹೆಲಿಕಾಪ್ಟರ್ ಗಳ ಮೂಲಕ ಹೂವಿನ ಮಳೆಗರೆಯಲಾಗುತ್ತದೆ
Indian Armed Forces Planned For Salute Corona Virus warriors
- ನವದೆಹಲಿಯ ಏಮ್ಸ್, ದೀನ್ ದಯಾಳ್ ಉಪಾದ್ಯಾಯ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಲೋಕನಾಯಕ್ ಆಸ್ಪತ್ರೆ, ಆರ್ಎಂಎಲ್ ಆಸ್ಪತ್ರೆ, ಸಫ್ದರ್ ಜಂಗ್ ಆಸ್ಪತ್ರೆ, ಗಂಗಾ ರಾಮ್ ಆಸ್ಪತ್ರೆ, ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ, ಮ್ಯಾಕ್ಸ್ ಸಕೇತ್ ಆಸ್ಪತ್ರೆ, ರೋಹಿಣಿ ಆಸ್ಪತ್ರೆ, ಅಪೋಲೋ ಇಂದ್ರಪ್ರಸ್ಥ ಆಸ್ಪತ್ರೆ ಹಾಗೂ ಸೇನಾ ಆಸ್ಪತ್ರೆಗಳ ಮೇಲೆ ಹೂವಿನ ಮಳೆಗರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
- ನವದೆಹಲಿಯ ರಾಜಪಥ್ ನಲ್ಲಿ Sukhoi-30 MKI, MiG-29 ಹಾಗೂ ಜಾಗೂರ್ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ
- ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಎದುರಿನಲ್ಲಿ ದೇಶಭಕ್ತಿಯ ಹಾಡುಗಳನ್ನು ಹಾಡಲಾಗುತ್ತದೆ
Indian Armed Forces Planned For Salute Corona Virus warriors
- ದೇಶದ 46 ನೌಕಾ ಸೇನೆಯ ಹಡಗುಗಳಲ್ಲಿ ಪ್ರಕಾಶಮಾನ ಜ್ಯೋತಿ ಬೆಳಕಿಸುವುದು, ಹಸಿರು ಬೆಂಕಿ ಜ್ವಾಲೆ ಪ್ರದರ್ಶಿಸಲಿವೆ. 25 ಪ್ರದೇಶಗಳಲ್ಲಿ ಸೈರನ್ ಸದ್ದು ಮೊಳಗಲಿದೆ.
- ಮುಂಬೈನ ಇಂಡಿಯಾ ಗೇಟ್ ವೇ ಬಳಿ ಪಶ್ಚಿಮ ನೌಕಾ ಸೇನೆಯ ಐದು ಹಡಗುಗಳಲ್ಲಿ ರಾತ್ರಿ 7.30 ರಿಂದ ರಾತ್ರಿ 11.59ರವರೆಗೂ ಜ್ಯೋತಿ ಬೆಳಗಲಿದೆ
- ವಿಶಾಖಪಟ್ಟಣಂನಲ್ಲಿ ಲಂಗರು ಹಾಕಿದ ಎರಡು ನೌಕಾ ಸೇನೆ ಹಡಗುಗಳಲ್ಲಿ ರಾತ್ರಿ 7.30 ರಿಂದ ಮಧ್ಯರಾತ್ರಿವರೆಗೂ ಜ್ಯೋತಿ ಬೆಳಗಲಿದೆ
English summary
Indian Armed Forces Planned For Salute Corona Virus warriors. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X