• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯೂರೋಪ್, ಇರಾನ್‌ಗಿಂತ ಭಾರತದಲ್ಲಿ ವೇಗವಾಗಿ ಸೋಂಕು ಹರಡುವಿಕೆ

|

ನವ ದೆಹಲಿ, ಮೇ 30: ಲಾಕ್‌ಡೌನ್ ಪೂರ ಸಡಿಲಿಕೆಯಾಗಿದೆ. ಎಂದಿನಂತೆ ಜನರ ಓಡಾಟ ಮತ್ತೆ ಶುರುವಾಗಿದೆ. ಬಸ್, ರೈಲು ವಿಮಾನಗಳ ಸಂಚಾರ ಪ್ರಾರಂಭವಾಗಿದೆ. ಆದರೆ, ಕೊರೊನಾವೈರಸ್ ಹರಡುವಿಕೆ ಪ್ರಮಾಣ ಮಾತ್ರ ಕಡಿಮೆಯಾಗುತ್ತಲೇ ಇಲ್ಲ.

ಭಾರತದಲ್ಲಿ ಕೊರೊನಾ ವೈರಸ್‌ ಯಾವ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದರೆ, ಅದು ಇರಾನ್, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿ ದೇಶಗಳಿಂತ ಹೆಚ್ಚಿದೆ. ಕೇವಲ 10 ದಿನದಲ್ಲಿ 65 ಸಾವಿರ ಹೊಸ ಕೇಸ್‌ಗಳು ದೇಶಾದ್ಯಂತ ದಾಖಲಾಗಿವೆ.

ಜರ್ಮನಿ, ಇರಾನ್, ಫ್ರಾನ್ಸ್, ಸ್ಪೇನ್ ಮತ್ತು ಭಾರತದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ದೃಢವಾಗಿವೆ. ಈ ದೇಶಗಳಲ್ಲಿ ಭಾರತದಲ್ಲಿಯೇ ಅತಿ ವೇಗವಾಗಿ ಕೊರೊನಾ ವೈರಸ್ ಪ್ರಕರಣಗಳು ಕಂಡು ಬರುತ್ತಿವೆ. ಆದರೆ, ರಷ್ಯಾ, ಬ್ರೆಜಿಲ್ ಹಾಗೂ ಅಮೇರಿಕ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಕೊರೊನಾ ವೈರಸ್ ವೇಗ ನಿಧಾನವಾಗಿದೆ.

ಕೊರೊನಾ ವೈರಸ್‌ ಆರ್ಭಟದ ನಡುವೆಯೂ ಒಂದು ಶುಭ ಸುದ್ದಿ

10 ದಿನಕ್ಕೆ 65,000 ಕೇಸ್‌ಗಳು

10 ದಿನಕ್ಕೆ 65,000 ಕೇಸ್‌ಗಳು

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ವೇಗ ಹೆಚ್ಚಾಗಿದೆ. ಅದರಲ್ಲಿಯೂ ಒಂದು ಲಕ್ಷ ಗಡಿ ದಾಟಿದ ಮೇಲೆ ಕೊರೊನಾ ವೈರಸ್ ವೇಗ ಇನ್ನಷ್ಟು ಜಾಸ್ತಿಯಾಗಿದೆ. ಮೇ 18ಕ್ಕೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,00,328 ಇತ್ತು. ಆದರೆ, 10 ದಿನಕ್ಕೆ 65,000 ಪ್ರಕರಣಗಳು ಹೊಸದಾಗಿ ಬಂದಿವೆ. ನಿನ್ನೆ ಒಂದೇ ದಿನ 7,300 ಕೇಸ್‌ಗಳು ಕಂಡು ಬಂದಿವೆ.

ಭಾರತ ದೇಶದಲ್ಲಿ 6.5%

ಭಾರತ ದೇಶದಲ್ಲಿ 6.5%

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ಒಂದು ಲಕ್ಷ ಗಡಿ ದಾಡಿದ ದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ವೇಗ ಯಾವ ಪ್ರಮಾಣದಲ್ಲಿದೆ ಎಂದು ಅಧ್ಯಯನ ನಡೆಸಲಾಗಿದೆ. ಈ ಪೈಕಿ ಭಾರತದ ಪ್ರಮಾಣ ಶೇಕಡ 6.5 ಇದು. ಇದು ಒಂದು ಲಕ್ಷದ ನಂತರ ಕೊರೊನಾ ವೈರಸ್ ಹರಡುತ್ತಿರುವ ಪ್ರಮಾಣವಾಗಿದೆ.

ಈ ಪಟ್ಟಿಯಲ್ಲಿ ಇರಾನ್, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿಗಿಂತ ಭಾರತ ಮೇಲಿದೆ.

ಯಾವ ಯಾವ ದೇಶದಲ್ಲಿ ಎಷ್ಟು ಪ್ರಮಾಣ

ಯಾವ ಯಾವ ದೇಶದಲ್ಲಿ ಎಷ್ಟು ಪ್ರಮಾಣ

ಇರಾನ್ 1.91%, ಜರ್ಮನಿ 1.54%, ಫ್ರಾನ್ಸ್ 1.54%, ಸ್ಪೈನ್‌ 1.72%, ಇಟಲಿ 2.22%, ಯುಎಸ್‌ಎ 17.7% , ಬ್ರಜಿಲ್ 13.52%, ರಷ್ಯಾ 10.25%, ಭಾರತ 6.5% ರಷ್ಟು ಪ್ರಮಾಣದಲ್ಲಿ ಕೊರೊನಾ ವೈರಸ್‌ ಒಂದು ಲಕ್ಷ ದಾಟಿದ ನಂತರ ಹಬ್ಬುತ್ತಿದೆ. ಈ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ. ಅಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಕೇಸ್‌ಗಳು ಪತ್ತೆಯಾಗಿವೆ.

ಆರ್ಭಟದ ನಡುವೆ ಸಂತಸದ ಸುದ್ದಿ

ಆರ್ಭಟದ ನಡುವೆ ಸಂತಸದ ಸುದ್ದಿ

ಭಾರತದಲ್ಲಿ ಕೊರೊನಾ ವೈರಸ್‌ ತನ್ನ ಆಕ್ರಮಣವನ್ನು ಇನ್ನೂ ಕಡಿಮೆ ಮಾಡಿಲ್ಲ. ಆದರೆ, ಅದರ ನಡುವೆಯೂ ಭಾರತೀಯರಿಗೆ ಒಂದು ಶುಭ ಸುದ್ದಿ ಬಂದಿದೆ. 24 ಗಂಟೆಗಳಲ್ಲಿ 11,264 ಸೋಂಕಿತರು ಗುಣಮುಖರಾಗಿದ್ದಾರೆ. ಇದು ನಿಜಕ್ಕೂ ಸಮಾಧಾನದ ಸಂಗತಿಯಾಗಿದೆ. ಒಂದು ದಿನದಲ್ಲಿ 7,964 ಹೊಸ ಪ್ರಕರಣಗಳು ಬಂದಿದ್ದು, ಗುಣಮುಖವಾದವರ ಸಂಖ್ಯೆ ಬಹಳ ಹೆಚ್ಚಿದೆ.

English summary
Coronavirus in India: India's average daily growth rate is 6.5 percent after reaching 1 lakh a latest study says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X