Breaking: ಅಮೆರಿಕ-ಬ್ರೆಜಿಲ್ ಹಿಂದಿಕ್ಕಿದ ಭಾರತದಲ್ಲಿ ಮತ್ತೆ 62,538 ಕೇಸ್

ದೆಹಲಿ, ಆಗಸ್ಟ್ 7: ಭಾರತದಲ್ಲಿ ಒಂದೇ ದಿನ 62 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 62,538 ಹೊಸ ಕೇಸ್ ಪತ್ತೆಯಾಗಿದ್ದು, ಅಮೆರಿಕ ಮತ್ತು ಬ್ರೆಜಿಲ್ ದೇಶವನ್ನು ಮತ್ತೆ ಹಿಂದಿಕ್ಕಿದೆ.

ಅಮೆರಿಕದಲ್ಲಿ ನಿನ್ನೆ 58,611 ಹೊಸ ಕೇಸ್ ವರದಿಯಾಗಿದ್ದರೆ 1,203 ಜನರು ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನಲ್ಲಿ 54,801 ಮಂದಿಗೆ ಕೊವಿಡ್ ದೃಢವಾಗಿದ್ದು, 1,226 ಮಂದಿ ಮೃತಪಟ್ಟಿದ್ದಾರೆ.

ಇಂದಿನ ವರದಿ ಬಳಿಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20,27,075ಕ್ಕೆ ತಲುಪಿದೆ. ಅದರಲ್ಲಿ 13,78,106 ಜನರು ಸೋಂಕಿನಿಂದ ಚಿಕಿತ್ಸೆ ಚೇತರಿಕೆ ಕಂಡಿದ್ದಾರೆ. 6,07,384 ಮಂದಿ ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 41,585 ಜನರು ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

India Reports 62,538 new coronavirus in the last 24 hours

ಇನ್ನು ಆಗಸ್ಟ್ 6 ರಂದು 5,74,783 ಜನರ ಮಾದರಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಕೊವಿಡ್ ಪರೀಕ್ಷೆಗಳ ಸಂಖ್ಯೆ 2,27,24,134 ತಲುಪಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್ ಪ್ರಕರಣ ಹೊಂದಿರುವ ಟಾಪ್ 5 ದೇಶ

- ಅಮೆರಿಕದಲ್ಲಿ 5,032,179 ಕೇಸ್, 162,804 ಸಾವು

- ಬ್ರೆಜಿಲ್‌ನಲ್ಲಿ 2,917,562 ಸೋಂಕು, 98,644 ಸಾವು

- ಭಾರತದಲ್ಲಿ 2,025,409 ಸೋಂಕು, 41,638 ಸಾವು

- ರಷ್ಯಾದಲ್ಲಿ 871,894 ಕೇಸ್, 14,606 ಸಾವು

- ದಕ್ಷಿಣ ಆಫ್ರಿಕಾದಲ್ಲಿ 538,184 ಕೇಸ್, 9,604 ಸಾವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+