ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತಂಕ ಹೆಚ್ಚಿಸಿದ ಅಂಕಿ-ಅಂಶ: ಜಗತ್ತಿನ ಮುಂದೆ ನಿಜವಾದ ಸವಾಲಿಗೆ ಸಜ್ಜಾಗಬೇಕಿದೆ ಭಾರತ

|
Google Oneindia Kannada News

ದೆಹಲಿ, ಮೇ 12: ಜಗತ್ತಿನಾದ್ಯಂತ 42 ಲಕ್ಷ ಕೊರೊನಾ ವೈರಸ್ ಕೇಸ್ ದಾಖಲಾಗಿದೆ. 2.8 ಲಕ್ಷ ಮಂದಿ ಸೋಂಕಿನಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 1.5 ಲಕ್ಷ ಜನರು ಮಾತ್ರ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 42 ಲಕ್ಷಗಳ ಪೈಕಿ ಯೂರೋಪ್ ಮತ್ತು ಉತ್ತರ ಅಮೆರಿಕ ರಾಷ್ಟ್ರಗಳಲ್ಲಿಯೇ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.

Recommended Video

ತುಮಕೂರಿನ ಗಾರ್ಮೆಂಟ್ಸ್‌ ಕಾರ್ಖಾನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ಹಲ್ಲೆ | Tumkur | Oneindia Kannada

ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತ ಕೊರೊನಾ ವಿಚಾರದಲ್ಲಿ ನಿಯಂತ್ರಣದಲ್ಲಿದೆ. ಯುಎಸ್‌ನಲ್ಲಿ ಮಾತ್ರ 13 ಲಕ್ಷ ಕೇಸ್ ವರದಿಯಾಗಿದ್ದರೆ, ಸ್ಪೇನ್, ಯುಕೆ, ರಷ್ಯಾ, ಇಟಲಿ ದೇಶಗಳಲ್ಲಿ ತಲಾ 2 ಲಕ್ಷಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದೆ.

24 ಗಂಟೆಯಲ್ಲಿ 3604 ಕೇಸ್ ಪತ್ತೆ, ಟಾಪ್ ಐದು ರಾಜ್ಯಗಳ ವಿವರ24 ಗಂಟೆಯಲ್ಲಿ 3604 ಕೇಸ್ ಪತ್ತೆ, ಟಾಪ್ ಐದು ರಾಜ್ಯಗಳ ವಿವರ

ಈ ಪಟ್ಟಿಯಲ್ಲಿ ಭಾರತ 12ನೇ ಸ್ಥಾನದಲ್ಲಿದೆ. ಇನ್ನು ಸೋಂಕಿನಿಂದ ಸತ್ತವರ ಸಂಖ್ಯೆಯಲ್ಲಿಯೂ ಭಾರತ ಬಹಳ ಹಿಂದೆ ಬಿದ್ದಿದೆ. ಇದು ಸಮಾಧಾನಕರ ಸಂಗತಿ. ಆದರೆ, ಭಾರತದ ಪಾಲಿಗೆ ಈಗ ಆತಂಕ ಪಡುವ ವಿಚಾರವೂ ಒಂದಿದೆ. ಅದೇನಪ್ಪಾ ಅಂದ್ರೆ ಹೊಸ ಕೇಸ್‌ಗಳ ಪಟ್ಟಿಯಲ್ಲಿ ಭಾರತ ಡೇಂಜರ್ ಎನಿಸಿಕೊಳ್ಳುತ್ತಿದೆ. ಮುಂದೆ ಓದಿ...

ಅಮೆರಿಕದಲ್ಲಿ ಅತಿ ಹೆಚ್ಚು ಹೊಸ ಕೇಸ್

ಅಮೆರಿಕದಲ್ಲಿ ಅತಿ ಹೆಚ್ಚು ಹೊಸ ಕೇಸ್

ಹೊಸ ಕೇಸ್‌ಗಳ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ ಸಿಕ್ಕಿದೆ. ಯುಎಸ್‌ನಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿದೆ. ಅಮೆರಿಕದಲ್ಲಿ ದಿನವೊಂದರಲ್ಲಿ ಈಗ 20 ಸಾವಿರವರೆಗೂ ಕೇಸ್‌ಗಳು ವರದಿಯಾಗುತ್ತಿದೆ. ಈ ಹಿಂದೆ ಒಂದೇ ದಿನದಲ್ಲಿ 38 ಸಾವಿರ ಪ್ರಕರಣವೂ ದಾಖಲಾಗಿತ್ತು. ಮೊದಲಿಗೆ ಹೋಲಿಸಿಕೊಂಡರೆ ಯುಎಸ್‌ನಲ್ಲಿ ಈಗ ಕಡಿಮೆಯಾಗಿದೆ.

ಬ್ರೆಜಿಲ್ ನಂತರ ಭಾರತ

ಬ್ರೆಜಿಲ್ ನಂತರ ಭಾರತ

ಯುಎಸ್‌ ಬಿಟ್ಟರೆ ರಷ್ಯಾ ಮತ್ತು ಬ್ರೆಜಿಲ್‌ನಲ್ಲಿ ಹೆಚ್ಚು ಹೊಸ ಕೇಸ್ ವರದಿಯಾಗುತ್ತಿದೆ. ರಷ್ಯಾದಲ್ಲಿ 10 ರಿಂದ 12 ಸಾವಿರವರೆಗೂ ಕೇಸ್ ಪತ್ತೆಯಾಗುತ್ತಿದೆ. ಬ್ರೆಜಿಲ್‌ನಲ್ಲಿ 6.5 ಸಾವಿರವರೆಗೂ ಕೇಸ್ ಕಾಣಿಸಿಕೊಳ್ಳುತ್ತಿದೆ. ನಂತರದ ಸ್ಥಾನ ಭಾರತಕ್ಕೆ. ಭಾರತದಲ್ಲಿ ಸರಾಸರಿ 4 ಸಾವಿವರೆಗೂ ಹೊಸ ಕೇಸ್ ದಾಖಲಾಗುತ್ತಿದೆ.

ದೇಶದಲ್ಲೀಗ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರ ಅಲ್ಲ, ತಮಿಳುನಾಡುದೇಶದಲ್ಲೀಗ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರ ಅಲ್ಲ, ತಮಿಳುನಾಡು

ಬೇರೆ ದೇಶಗಳು ಇಳಿಕೆ

ಬೇರೆ ದೇಶಗಳು ಇಳಿಕೆ

ಕೊರೊನಾ ವೈರಸ್‌ ದಾಳಿ ಹೆಚ್ಚು ಆಹುತಿಯಾಗಿರುವ ದೇಶಗಳು ಈಗ ಹೊಸ ಕೇಸ್ ಪತ್ತೆಯಲ್ಲಿ ಇಳಿಕೆ ಕಂಡಿದೆ. ಆದರೆ, ಭಾರತ ಮಾತ್ರ ಈಗ ಏರಿಕೆ ಕಾಣುತ್ತಿದೆ. ಸ್ಪೇನ್, ಯುಕೆ, ಇಟಲಿ, ಯುಕೆ, ಜರ್ಮನಿಯಲ್ಲಿ ಹೊಸ ಕೇಸ್‌ಗಳು ಭಾರತಕ್ಕಿಂತ ಕಡಿಮೆಯಾಗುತ್ತಿದೆ.

ಕೊರೊನಾ ಎದುರಿಸಲು ಭಾರತ ಸಜ್ಜಾಗಬೇಕಿದೆ

ಕೊರೊನಾ ಎದುರಿಸಲು ಭಾರತ ಸಜ್ಜಾಗಬೇಕಿದೆ

ಉಳಿದ ದೇಶಗಳಿಗೆ ಹೋಲಿಸಿಕೊಂಡರೆ ಭಾರತ ಇಲ್ಲಿಯವರೆಗೂ ಕೊರೊನಾ ಕೇಸ್‌ಗಳಲ್ಲಿ ನಿಯಂತ್ರಣದಲ್ಲಿದೆ. ಆದರೆ, ಈಗಿನ ಅಂಕಿ ಅಂಶ ನೋಡಿದ್ರೆ, ಭಾರತಕ್ಕೆ ನಿಜವಾದ ಸವಾಲು ಎನಿಸುತ್ತಿದೆ. ಹೊಸ ಕೇಸ್‌ಗಳ ಸಂಖ್ಯೆಯಲ್ಲಿ ಇಳಿಮುಖ ಕಾಣದೇ ಹೋದರೆ, ನಿಜಕ್ಕೂ ಅಪಾಯ ಎದುರಿಸಬೇಕಾಗುತ್ತೆ. ಸೋಂಕಿತರ ಸಂಖ್ಯೆಯಲ್ಲೂ ಬೇರೆ ದೇಶಗಳನ್ನು ಮೀರಿ ಹೋಗಲಿದೆ.

English summary
US, Russia, Brazil only three countries that have more coronavirus new cases. now india stand at 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X