ಭಾರತ-ಚೀನಾ ಗಡಿ ವಿವಾದದ ಮಧ್ಯೆ, LACಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆ

ಲಡಾಖ್, ಡಿಸೆಂಬರ್ 23: ಪೂರ್ವ ಲಡಾಕ್‌ನಲ್ಲಿನ ಇಂಡೋ-ಚೀನಾ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ನಡುವಿನ ಉದ್ವಿಗ್ನತೆ ಕಳೆದ ಹಲವು ತಿಂಗಳುಗಳಿಂದ ಮುಂದುವರೆದಿದೆ. ಇದರ ನಡುವೆ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಎಲ್‌ಎಸಿಗೆ ಭೇಟಿ ನೀಡಿದ್ದಾರೆ.

ಲೇಹ್‌ನ ವಾಯುನೆಲೆಗೆ ಬಂದಿಳಿದ ಸೇನಾ ಮುಖ್ಯಸ್ಥರನ್ನು, ಎಲ್.ಟಿ. ಜನರಲ್ ಮೆನನ್ ಮತ್ತು ಇತರ ಸೇನಾಧಿಕಾರಿಗಳು ಸ್ವಾಗತಿಸಿದರು. ಬಳಿಕ ಭಾರತೀಯ ಸೇನೆಯು ಆಕ್ರಮಿಸಿಕೊಂಡಿರುವ ರೆಚಿನ್ ಲಾ ಸ್ಥಳಕ್ಕೆ ಭೇಟಿ ಮಾಡಿದರು. 'ಫೈರ್ ಅಂಡ್ ಫ್ಯೂರಿ ಕಾರ್ಪ್ಸ್' ನ ಒಂದು ದಿನದ ಭೇಟಿಯಲ್ಲಿ ಎಂ.ಎಂ. ನರವಾಣೆ ಲೇಹ್ ತಲುಪಿದ್ದಾರೆ. ಭಾರತೀಯ ಸೇನೆಯು ಮಾಹಿತಿಯ ಪ್ರಕಾರ, ಸೇನಾ ಮುಖ್ಯಸ್ಥರು ಬುಧವಾರ ಚೀನಾದ ಗಡಿಯಲ್ಲಿರುವ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದರು.

ರೆಚಿನ್ ಲಾದಲ್ಲಿ ಗಡಿಯಲ್ಲಿ ನಿಯೋಜಿಸಲಾಗಿರುವ ಮುಂಚೂಣಿಯಲ್ಲಿರುವ ಸೈನಿಕರ ನಿವಾಸದ ಸ್ಥಳವನ್ನು ಭಾರತೀಯ ಸೇನೆಯ ಮುಖ್ಯಸ್ಥರು ಪರಿಶೀಲಿಸಿದರು ಎಂದು ಸೇನೆಯು ತಿಳಿಸಿದೆ. ಸೈನಿಕರನ್ನು ಎಲ್‌ಎಸಿಗೆ ಅನುಕೂಲಕರವಾಗಿಸಲು ಭಾರತೀಯ ಸೇನೆಯು ಮಾಡಿದ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಇದರ ಜೊತೆಗೆ ಸ್ಥಳೀಯ ಕಮಾಂಡರ್‌ಗಳು ಮತ್ತು ಸೈನಿಕರೊಂದಿಗೆ ಮಾತುಕತೆ ನಡೆಸಿ ಭಾರತೀಯ ಸೈನಿಕರ ಉನ್ನತ ಸ್ಥೈರ್ಯ ಮತ್ತು ಸನ್ನದ್ಧತೆಯ ಸ್ಥಿತಿಯನ್ನು ಶ್ಲಾಘಿಸಿದರು.

India-China Standoff : Army Chief MM Naravane Visits Leh, Interacts with Fire & Fury Corps

ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸೇನಾ ಮುಖ್ಯಸ್ಥರು ಎಲ್ಲಾ ಶ್ರೇಣಿಯನ್ನು ಒಂದೇ ಹುರುಪಿನಿಂದ ಮತ್ತು ಉತ್ಸಾಹದಿಂದ ಕೆಲಸ ಮಾಡಲು ಕರೆ ನೀಡಿದರು. ಜೊತೆಗೆ ಕ್ರಿಸ್‌ಮಸ್ ಹಬ್ಬಕ್ಕೆ ಸೈನಿಕರಿಗೆ ಸಿಹಿತಿಂಡಿ ಮತ್ತು ಕೇಕ್ ವಿತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+