ಭಾರತ-ಚೀನಾ ಗಡಿ ಉದ್ವಿಗ್ನ: ಸರ್ವಪಕ್ಷಗಳ ಸಭೆ ಕರೆದ ಪ್ರಧಾನಿ ಮೋದಿ

ನವದೆಹಲಿ, ಜೂನ್ 17: ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 19 ರಂದು ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಭಾಗವಹಿಸುತ್ತಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.

Recommended Video

      Rahul Gandhi wants Modi to speak up about Indo China issue | Oneindia Kannada

      ಲಡಾಖ್‌ನ ಗಾಲ್ವಾನ್ ವ್ಯಾಲಿ ಪ್ರದೇಶದ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದೆ. ಈ ಗಲಾಟೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾದ 40 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

      ಭಾರತ-ಚೀನಾ ಯೋಧರ ನಡುವಿನ ಕಾಳಗದಲ್ಲಿ ಕಲ್ಲುಗಳ ಮೂಲಕ ಸೈನಿಕರು ಕಾದಾಡಿದ್ದಾರೆ ಮತ್ತು ಲೋಹದ ಮೂಲಕ ಘರ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಘಟನೆಯಲ್ಲಿ ಪರಸ್ಪರ ರಾಷ್ಟ್ರಗಳ ನಡುವೆ ಗುಂಡಿನ ದಾಳಿ ಆಗಿಲ್ಲ ಎಂದು ಭಾರತೀಯ ಸೇನೆಯ ಮೂಲಗಳು ಖಚಿತಪಡಿಸಿದೆ.

      India-China Border Dispute: PM Narendra Modi Has Called For All Party Meeting At 5PM

      ಲಡಾಖ್ ಗಡಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಇತರೆ ಮೂರು ಸೇನೆಗಳ ಮುಖ್ಯಸ್ಥರ ಜೊತೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಚೀನಾ ವಿಚಾರದಲ್ಲಿ ಭಾರತ ಹೇಗೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಮುಂದಿನ ಹೆಜ್ಜೆ ಯಾವ ರೀತಿ ಇಡಬೇಕು ಎಂಬುದನ್ನು ಚರ್ಚಿಸಿದ್ದಾರೆ.

      ಇದರ ಮುಂದಿನ ಹಂತವಾಗಿ ಪ್ರಧಾನಿ ಮೋದಿ ಗಡಿ ಉದ್ವಿಗ್ನತೆ ಕುರಿತು ಚರ್ಚಿಸಲು ಸಂಜೆ ಗಂಟೆಗೆ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+