• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಭಿನಂದನ್ ಸಾಹಸದ ವಿಡಿಯೋ ಗೇಮ್ ಹೊರತಂದ ವಾಯುಸೇನೆ

|

ನವದೆಹಲಿ, ಜುಲೈ 23: ಭಾರತೀಯ ವಾಯುಸೇನೆ ಶೀಘ್ರದಲ್ಲಿ ಐಎಎಫ್ ಅಭಿನಂದನ್ ಕುರಿತು ಮೊಬೈಲ್ ವಿಡಿಯೋ ಗೇಮ್ ಬಿಡುಗಡೆಗೊಳಿಸಲಿದ್ದು, ಇದರ ಟೀಸರ್ ಬಿಡುಗಡೆ ಮಾಡಿದೆ.

ಜುಲೈ 31ರಂದು ಇದು ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯ ಒಬ್ಬನೇ ಆಡುವಂತಹ ಗೇಮ್ ವಿನ್ಯಾಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಲ್ಟಿಪ್ಲೇಯರ್ ಗೆ ಅಪ್‌ಗ್ರೇಡ್ ಮಾಡಲಾಗುತ್ತದೆ ಎಂದು ವಾಯುಸೇನೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಟೀಸರ್‌ನಲ್ಲಿ ವಾಯುಸೇನೆಯ ಮಿಗ್-21 ಯುದ್ಧ ವಿಮಾನ ಹಾಗೂ ಪಕ್ಕವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಹೋಲುವ ಪೈಲಟ್‌ನಂತಿರುವ ದೃಶ್ಯವಿದೆ.

ವಾಯು ಸೇನೆಯ ಯುದ್ಧ ವಿಮಾನಗಳು ಶತ್ರು ದೇಶದ ಕ್ಯಾಂಪ್‌ಗಳು, ವಿಮಾನಗಳು ಮತ್ತು ಅಡಗುತಾಣಗಳನ್ನು ಧ್ವಂಸ ಮಾಡುವ ದೃಶ್ಯಗಳು ಈ ಟೀಸರ್‌ನಲ್ಲಿದೆ.

ಮಿಗ್ 21 ವಿಮಾನದ ಮೂಲಕ ಶತ್ರುಪಡೆಯ ವಿಮಾನಗಳನ್ನು ಹಿಮ್ಮೆಟ್ಟಿಸಿಕೊಂಡು ಹೋಗಿ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದು ಉರುಳಿಸಿರುವ ರೋಚಕ ಕ್ಷಣಗಳು ಇರಲಿವೆ.

ಈ ಸಾಹಸವನ್ನು ಮೆರೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂತಹ ಹೆಮ್ಮೆಯನ್ನು ದೇಶದ ಜನರಲ್ಲಿ ಜೀವಂತವಾಗಿರುವುದ ಉದ್ದೇಶದಿಂದ ಭಾರತೀಯ ವಾಯುಸೇನೆ ಇಂತಹದೊಂದು ಪ್ರಯೋಗಕ್ಕೆ ಮುಂದಾಗಿದೆ.

ಸದ್ಯಕ್ಕೆ ಒಂದು ಆಟಗಾರರ ಗೇಮ್ ಇದಾಗಿದ್ದು ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸುವ ಸಾಧ್ಯತೆ ಇದೆ. ಭಾರತೀಯ ವಾಯುಸೇನೆಯ ಈ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ವಿಂಗ್ ಕಮಾಂಡರ್ ಅಭಿನಂದರ್ ಸಾಹಸವನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ.

ಆದಷ್ಟು ಬೇಗ ವಿಡಿಯೋ ಗೇಮ್ ಬಿಡುಗಡೆಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

English summary
India Air Force releases the teaser of Video game which showcases the bravery act of Wing commander Abhinandan Varthaman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X