ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕ ಬಳಕೆ ಪ್ಲಾಸ್ಟಿಕ್‌ಗೆ ಪರ್ಯಾಯ ಕಂಡುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ: ಪ್ರಕಾಶ್ ಜಾವಡೇಕರ್

|
Google Oneindia Kannada News

ನವದೆಹಲಿ, ಡಿಸೆಂಬರ್ 05: ಭಾರತದಲ್ಲಿ ಏಕ ಪ್ಲಾಸ್ಟಿಕ್ ಬಳಕೆಯು ಘಣನೀಯವಾಗಿ ಕಡಿಮೆಯಾಗಿದೆ. ಹಾಗೆಯೇ ಏಕ ಬಳಕೆಯ ಪ್ಲಾಸ್ಟಿಕ್‌ಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ದೀರ್ಘಾವಧಿಯ ಗುರಿಯಿಂದಲೂ ಈಗಲೇ ಕ್ರಮ ಕೈಗೊಳ್ಳಬೇಕಾಗಿರುವುದು ಅಗತ್ಯ. ಭಾರತ ಮತ್ತು ಫ್ರಾನ್ಸ್ ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆಯ ಬಗ್ಗೆ ಜಂಟಿ ಪ್ರಯತ್ನಗಳನ್ನು ಮಾಡುವ ಪ್ರಸ್ತಾಪವನ್ನು ನಾನು ಸ್ವಾಗತಿಸುತ್ತೇನೆ. ವಿಶೇಷವಾಗಿ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ಕಡೆಗೆ ನಮ್ಮ ಪ್ರಯತ್ನ ಸಾಗಬೇಕಿದೆ ಎಂದು ಜಾವಡೇಕರ್ ಹೇಳಿದರು.

ಕಪಿಲ್ ಮಿಶ್ರಾ ಬಗ್ಗೆ ಮಾತನಾಡದೆ ಪ್ರಶ್ನೆಯಿಂದ ನುಣುಚಿಕೊಂಡ ಜಾವಡೇಕರ್ಕಪಿಲ್ ಮಿಶ್ರಾ ಬಗ್ಗೆ ಮಾತನಾಡದೆ ಪ್ರಶ್ನೆಯಿಂದ ನುಣುಚಿಕೊಂಡ ಜಾವಡೇಕರ್

ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ ಅನ್ನು ಈಗಾಗಲೇ ನಿಷೇಧಿಸಲಾಗಿದ್ದು, ಇದರ ಬಳಕೆ ನಿಲ್ಲಿಸುವ ಬಗ್ಗೆ ತಿಳಿವಳಿಕೆ ಮೂಡಿಸಲು ಅಭಿಯಾನಗಳನ್ನು ನಡೆಸಲಾಗುತ್ತಿದೆ.

India Achieved Replacement, Adopting Alternative Methods For Single-Use Plastic

ಅಂತೆಯೇ ಏಕ ಬಳಿಕಯ ಪ್ಲಾಸ್ಟಿಕ್ ಗೆ ಪರ್ಯಾಯ ಕಂಡುಕೊಳ್ಳುವ ವಿಚಾರದಲ್ಲಿ ನಾವು ಅದ್ಭುತ ಯಶಸ್ಸು ಸಾಧಿಸಿದ್ದು, ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲಾಗುವುದು ಎಂದು ಹೇಳಿದರು.

ಹವಾಮಾನ ಬದಲಾವಣೆಗೆ ಸಂಬಂಧಿಸಿ ವಿಶ್ವಸಂಸ್ಥೆಯು ರೂಪಿಸಿರುವ ಚೌಕಟ್ಟಿಗೆ ಸಂಬಂಧಿಸಿ ಯುಎನ್‌ಎಫ್‌ಸಿಸಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಪೆಟ್ರೀಷಿಯಾ ಎಸ್ಪಿನೋಜ ಜತೆ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಅನೇಕ ದೇಶಗಳು ಹವಾಮಾನ ಬದಲಾವಣೆ ಕಾರ್ಯಸೂಚಿ ಸಾಕಾರಗೊಳಿಸುವ ಗಡುವನ್ನು 2050ಕ್ಕೆ ಮುಂದೂಡುತ್ತಿವೆ.

English summary
Replacement of single-use plastic items is important and India has practically achieved replacement and is adopting alternative methods, said Prakash Javadekar, Union Minister of Environment on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X