ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ: ಮೊದಲ ಬಾರಿಗೆ ಬಾಂಗ್ಲಾದೇಶ ಮಾರ್ಚಿಂಗ್ ತಂಡ ಭಾಗಿ

|
Google Oneindia Kannada News

ನವದೆಹಲಿ, ಜನವರಿ 26: ಮೊದಲ ಬಾರಿಗೆ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಬಾಂಗ್ಲಾದೇಶದ ಮಾರ್ಚಿಂಗ್ ತಂಡ ಭಾಗಿಯಾಗಿದೆ.

ಬಾಂಗ್ಲಾದೇಶದ ಸೇನಾ ಪಡೆ, ನೌಕಾಪಡೆ, ವಾಯುಪಡೆಗಳಿಂದ 122 ಸದಸ್ಯರನ್ನೊಳಗೊಂಡ ಪಡೆಯನ್ನು ಕಂಟಿಂಜೆಂಟ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಅಬು ಮೊಹಮ್ಮದ್ ಶಹನೂರ್ ಶಾವೊನ್, ಲೆಫ್ಟಿನೆಂಟ್ ಫರ್ಹಾನ್ ಇಶ್ರಕ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಸಿಬತ್ ರಹಮಾನ್ ಮುನ್ನಡೆಸಿದರು.

ಗಣರಾಜ್ಯೋತ್ಸವ ದಿನದ ಫ್ಲೈಪಾಸ್ಟ್ ನೇತೃತ್ವ ವಹಿಸಲಿದ್ದಾರೆ ಸ್ವಾತಿ ರಾಥೋಡ್ಗಣರಾಜ್ಯೋತ್ಸವ ದಿನದ ಫ್ಲೈಪಾಸ್ಟ್ ನೇತೃತ್ವ ವಹಿಸಲಿದ್ದಾರೆ ಸ್ವಾತಿ ರಾಥೋಡ್

ಬಾಂಗ್ಲಾ ವಿಮೋಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪೂರ್ವ ಬಂಗಾಳ ರೆಜಿಮೆಂಟ್ ನ 1,2,3,4,8,9,10 ಹಾಗೂ 11 ನೇ ಬೆಟಾಲಿಯನ್ ಹಾಗೂ ಫೀಲ್ಡ್ ರೆಜಿಮೆಂಟ್ ಆರ್ಟಿಲರಿಯ 1,2 ಹಾಗೂ ಮೂರನೇ ಬೆಟಾಲಿಯನ್ ಇಂದಿನ ಪರೇಡ್ ನಲ್ಲಿ ಭಾಗಿಯಾಗಿತ್ತು.

In A first, Bangladesh Tri-Service Contingent Takes Part In Indias Republic Day Parade

ಬಾಂಗ್ಲಾ ದೇಶದ ವಿಮೋಚನೆಯ 50 ನೇ ವರ್ಷದ ನೆನಪಿಗಾಗಿ ಟ್ರೈ ಸರ್ವೀಸಸ್ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗಿಯಾಗಿದೆ. ರಫೇಲ್ ಯುದ್ಧವಿಮಾನ, ದೇಶದ ಮಹಿಳಾ ಫೈಟರ್ ಪೈಲಟ್, ಅಯೋಧ್ಯೆ ರಾಮಮಂದಿರ ಮೊದಲಾದವುಗಳು ಈ ಬಾರಿಯ ಪರೇಡ್ ಮತ್ತು ಸ್ತಬ್ದಚಿತ್ರ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ಆಗಿದ್ದವು.

ಈ ಬಾರಿಯ 72ನೇ ಗಣರಾಜ್ಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಮೊದಲ ಬಾರಿಗೆ ಮುಖ್ಯ ಅತಿಥಿ ಇಲ್ಲದೆಯೇ ಗಣರಾಜ್ಯೋತ್ಸವ ನಡೆಯಿತು. ಆದರೆ, ಗಣರಾಜ್ಯೋತ್ಸವದ ಶಿಸ್ತು ಮತ್ತು ವೈಭವ ಎಂದಿನಂತೆ ಈ ವರ್ಷವೂ ಇತ್ತು.

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಪೆರೇಡ್​ನಲ್ಲಿ ಭಾಗಿಯಾದರು. ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್​ಗಳಲ್ಲಿ ಭಾವನಾ ಒಬ್ಬರು. ರಿಪಬ್ಲಿಕ್ ಪೆರೇಡ್​ನಲ್ಲಿ ಮಹಿಳಾ ಫೈಟರ್ ಪೈಲಟ್ ಭಾಗಿಯಾಗಿದ್ದು ಇದೇ ಮೊದಲು. ವಿವಿಧ ಫೈಟರ್ ವಿಮಾನ, ಕಾಪ್ಟರ್​ಗಳ ಪ್ರತಿಕೃತಿಗಳನ್ನ ತೋರಿಸುವ ಸ್ತಬ್ದಚಿತ್ರಗಳ ವ್ಯವಸ್ಥೆಯ ಭಾಗವಾಗಿ ಅವರು ಪಾಲ್ಗೊಂಡರು.

English summary
For the first time, amarching contingent and band of Bagladesh tri service participated in the Republic Day Parade to Commemorate 50 years of its historic liberation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X