• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

1,000 ಉದ್ಯೋಗವನ್ನು ದಕ್ಕಿಸಿಕೊಂಡ ಖರಗ್‌ಪುರ ಐಐಟಿ

|
Google Oneindia Kannada News

ನವದೆಹಲಿ, ಡಿಸೆಂಬರ್ 09: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ತೇರ್ಗಡೆಯಾಗಿ ಹೋಗಲಿರುವ 1000 ಪದವೀಧರರಿಗೆ ಉದ್ಯೋಗ ಸಿಕ್ಕಿದೆ ಎಂದು ಖರಗ್‌ಪುರ್‌ ಐಐಟಿ ಘೋಷಿಸಿದೆ. ಡಿಸೆಂಬರ್ 1ರಿಂದ ಆರಂಭಗೊಂಡ ನೇಮಕಾತಿ ಕಾರ್ಯಕ್ರಮದಡಿಯಲ್ಲಿ 30 ಅಂತರಾಷ್ಟ್ರೀಯ ಆಫರ್ ಸೇರಿದಂತೆ 1000 ಪದವೀಧರರಿಗೆ ಕೆಲಸ ಸಿಕ್ಕಿದೆ.

"ಐಐಟಿ ಖರಗ್‌ಪುರವು 2020-21ನೇ ಸಾಲಿನಲ್ಲಿ ನಡೆಯುತ್ತಿರುವ ನೇಮಕಾತಿ ಅಧಿವೇಶನದ 8 ನೇ ದಿನದವರೆಗೆ ಹಂತ -1 ಉದ್ಯೋಗಗಳಲ್ಲಿ 1000 ಕ್ಕೂ ಹೆಚ್ಚು ಆಫರ್ ಪಡೆದುಕೊಂಡಿದೆ. ಮೊದಲೇ ದಿನದ ಮುಕ್ತಾಯದಂದು ನಾವು 400ಕ್ಕೂ ಹೆಚ್ಚು ಆಫರ್ ಸ್ವೀಕರಿಸಿದ್ದೇವೆ, ಅದು ಐದನೇ ದಿನದ ಹೊತ್ತಿಗೆ 900ಕ್ಕೆ ತಲುಪಿದ್ದು, ಸಾಂಕ್ರಾಮಿಕ ರೋಗವು ಕೆಲವು ಕಂಪನಿಗಳಿಗೆ ಹೆಚ್ಚಿನ ನೇಮಕಾತಿ ಮಾಡಿಕೊಳ್ಳಲು ನಿರ್ಬಂಧಿಸಿದೆ "ಎಂದು ಖರಗ್‌ಪುರ್ ಐಐಟಿ ಬುಧವಾರ ಹೇಳಿದೆ. ಇದರ ಹೊರತಾಗಿಯೂ ಖರಗ್‌ಪುರ್ ಐಐಟಿ ಗಮನಾರ್ಹ ಸಾಧನೆ ಮಾಡಿದೆ ಎಂದು ಹೇಳಲಾಗಿದೆ.

ಆತ್ಮನಿರ್ಭರ್ ಭಾರತ: ಹೊಸ ಉದ್ಯೋಗಗಳಿಗೆ ಪ್ರೋತ್ಸಾಹ; 2023 ರ ವೇಳೆಗೆ 22,810 ಕೋಟಿ ರೂ. ವೆಚ್ಚಆತ್ಮನಿರ್ಭರ್ ಭಾರತ: ಹೊಸ ಉದ್ಯೋಗಗಳಿಗೆ ಪ್ರೋತ್ಸಾಹ; 2023 ರ ವೇಳೆಗೆ 22,810 ಕೋಟಿ ರೂ. ವೆಚ್ಚ

ಗೂಗಲ್, ಮೈಕ್ರೋಸಾಫ್ಟ್, ಆಪಲ್, ಕ್ವಾಲ್ಕಾಮ್, ಗೋಲ್ಡ್ಮನ್ ಸ್ಯಾಚ್ಸ್, ಜೆಪಿ ಮಾರ್ಗನ್, ಅಮೆರಿಕನ್ ಎಕ್ಸ್ ಪ್ರೆಸ್, ಸೋನಿ ಜಪಾನ್, ಇಎಕ್ಸ್ಎಲ್ ಸರ್ವಿಸ್, ಒರಾಕಲ್, ಹನಿವೆಲ್, ಕೋಹೆಸಿಟಿ, ಅಮೆಜಾನ್, ಏರ್‌ಬಸ್‌, ಪಿಡಬ್ಲ್ಯೂಸಿ , ಎಲ್ & ಟಿ, ವಿಪ್ರೊ, ಟಾಟಾ ಸ್ಟೀಲ್ ಕಂಪನಿಗಳಿಂದ ಆಫರ್ ಬಂದಿದೆ. ಈ ಕಂಪನಿಗಳು ಸಾಫ್ಟ್‌ವೇರ್, ಹಾರ್ಡ್‌ವೇರ್, ಅನಾಲಿಟಿಕ್ಸ್, ಕನ್ಸಲ್ಟಿಂಗ್, ಕೋರ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉದ್ಯೋಗವನ್ನು ನೀಡಿವೆ.

ನೇಮಕಾತಿ ಪ್ರಕ್ರಿಯೆಯ ಮೊದಲ ಹಂತದಲ್ಲಿ ಸುಮಾರು 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಅದರಲ್ಲಿ ಶೇಕಡಾ 25ರಷ್ಟು ಕಂಪನಿಗಳು ಕೋರ್ ಎಂಜಿನಿಯರಿಂಗ್ ಕಂಪನಿಗಳಾಗಿವೆ.

English summary
The Indian Institute of Technology in Kharagpur Wednesday said over 1000 of its outgoing graduates have bagged jobs including 30 international offers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X