ನಾನು ಭಯೋತ್ಪಾದಕನಾಗಿದ್ದರೆ ಇನ್ನೂ ಏಕೆ ಬಂಧಿಸಿಲ್ಲ: ಕೇಜ್ರಿವಾಲ್

ನವದೆಹಲಿ, ಫೆಬ್ರವರಿ 18: ನಾನು ಭಯೋತ್ಪಾದಕನಾಗಿದ್ದರೆ ಇನ್ನೂ ಏಕೆ ಬಂಧಿಸಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, "ಪ್ರಧಾನಿ ಮೋದಿಯವರಿಗೆ ನಾನು ಪ್ರತ್ಯೇಕತಾವಾದಿಗಳ ಪರ ಎಂದು ತಿಳಿದಿದ್ದರೆ, ಅವರು ಈ ಆರೋಪಗಳನ್ನು ಏಕೆ ಸಾಬೀತುಪಡಿಸಲಿಲ್ಲ ಅಥವಾ ತನಿಖೆ ಮಾಡಲಿಲ್ಲ" ಎಂದು ಪ್ರಶ್ನಿಸಿ ಅವರು ಇಲ್ಲಿಯವರೆಗೆ ನನ್ನನ್ನು ಏಕೆ ಬಂಧಿಸಿಲ್ಲ ಎಂದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ವಿರುದ್ಧ ಎಎಪಿ ಮಾಜಿ ನಾಯಕ ಕುಮಾರ್ ವಿಶ್ವಾಸ್ ಮಾಡಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.

If I Am a Terrorist, Why Not Arrested – Kejriwal’s Counterattack On PM Modi And Rahul Gandhi

ಅವರೆಲ್ಲರೂ ಒಂದೇ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ರಾತ್ರಿಯಲ್ಲಿ ಅವರು ವೀಡಿಯೊ ಕರೆ ಅಥವಾ ಕಾನ್ಫರೆನ್ಸ್ ಕರೆಯಲ್ಲಿ ಚಾಟ್ ಮಾಡುತ್ತಿರುವಂತೆ ತೋರುತ್ತಿದೆ. ನಮ್ಮ ತಪ್ಪೇನು" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

ಎಲ್ಲಾ ಪಕ್ಷಗಳನ್ನು ಭ್ರಷ್ಟ ಎಂದು ಕರೆದ ಅರವಿಂದ್ ಕೇಜ್ರಿವಾಲ್, "ಎಲ್ಲಾ ಪಕ್ಷಗಳು ಅಕಾಲಿದಳ, ಬಿಜೆಪಿ, ಕಾಂಗ್ರೆಸ್ -ಒಟ್ಟಾಗಿವೆ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ನರೇಂದ್ರ ಮೋದಿ, ಸುಖಬೀರ್ ಬಾದಲ್, ಚರಣ್ಜಿತ್ ಸಿಂಗ್ ಚನ್ನಿ ಮತ್ತು ಕ್ಯಾಪ್ಟನ್ ಅಮರಿಂದರ್ ಸೇರಿದಂತೆ ಎಲ್ಲಾ ನಾಯಕರು ಎಎಪಿಯನ್ನು ಸೋಲಿಸಲು ಒಟ್ಟಾಗಿ ಬನ್ನಿ, ಭಗವಂತ್ ಮಾನ್ ಪ್ರಾಮಾಣಿಕ ವ್ಯಕ್ತಿ ಎಂದು ಹೇಳಿದ್ದಾರೆ

ಪಂಜಾಬ್ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಧುಮುಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಬರ್ನಾಲಾದಲ್ಲಿ ನಡೆದ ಪ್ರಚಾರದಲ್ಲಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಪಕ್ಷದ ನಾಯಕರು ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದ್ದು, ರಾಷ್ಟ್ರೀಯತೆ ಬಗ್ಗೆ ವಿಶ್ವಾಸವಿಲ್ಲ ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.

ಕಪ್ಪುಹಣ, ನಿರುದ್ಯೋಗದ ಬಗ್ಗೆ ಮೋದಿ ಮೌನ: ರಾಹುಲ್ ಗಾಂಧಿ ಸಿಡಿಮಿಡಿಕಪ್ಪುಹಣ, ನಿರುದ್ಯೋಗದ ಬಗ್ಗೆ ಮೋದಿ ಮೌನ: ರಾಹುಲ್ ಗಾಂಧಿ ಸಿಡಿಮಿಡಿ

ಕಾಂಗ್ರೆಸ್ ನಾಯಕರು ಏನೇ ಆಗಿದ್ದರೂ, ಒಬ್ಬ ಭಯೋತ್ಪಾದಕನ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಜಾಡು ಚಿಹ್ನೆಯುಳ್ಳ(ಆಪ್ ಪಕ್ಷದ ಚಿಹ್ನೆ ಪೊರಕೆ) ಪಕ್ಷದ ನಾಯಕರು ಭಯೋತ್ಪಾದಕನ ಮನೆಯಲ್ಲಿ ಕಂಡು ಬಂದಿದ್ದಾರೆ, ಇದು ಸತ್ಯ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

2017ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪಂಜಾಬ್‌ನ ಮೋಗಾದಲ್ಲಿ ಮಾಜಿ ಖಲಿಸ್ತಾನಿ ಭಯೋತ್ಪಾದಕರ ನಿವಾಸದಲ್ಲಿ ತಂಗಿದ್ದ ಕೇಜ್ರಿವಾಲ್‌ಗೆ ವಿರುದ್ಧ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದರು. ಪಂಜಾಬಿನಲ್ಲಿ ಸರ್ಕಾರ ರಚಿಸುವುದಕ್ಕೆ ಒಂದು ಅವಕಾಶವನ್ನು ಕೇಳುತ್ತಿರುವವರು ರಾಜ್ಯವನ್ನೇ ನಾಶಪಡಿಸುತ್ತಾರೆ, ಸುಟ್ಟು ಹಾಕುತ್ತಾರೆ ಎಂದು ದೂಷಿಸಿದ್ದರು.

ಪಂಜಾಬ್ ಗಡಿ ಮತ್ತು ಸೂಕ್ಷ್ಮ ರಾಜ್ಯವಾಗಿದ್ದು, ಕಾಂಗ್ರೆಸ್ ಪಕ್ಷ ಮಾತ್ರ ಪಂಜಾಬ್ ಅನ್ನು ಅರ್ಥಮಾಡಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರವೇ ಶಾಂತಿಯನ್ನು ಕಾಪಾಡುವುದಕ್ಕೆ ಸಾಧ್ಯವಾಗುತ್ತದೆ. ಶಾಂತಿ ಹೋದರೆ ಏನೂ ಉಳಿಯುವುದಿಲ್ಲ ಎಂದು ನಮಗೆ ತಿಳಿದಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+