• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನವದೆಹಲಿ: ಔಷಧಿ ಕಂಡು ಹಿಡಿಯಲು ಹೊರಟ ವಿಜ್ಞಾನಿಗೆ ಕೊರೊನಾ ವೈರಸ್!

|

ನವದೆಹಲಿ, ಜೂನ್.01: ನೊವೆಲ್ ಕೊರೊನಾ ವೈರಸ್ ಮಹಾಮಾರಿ ಯಾರನ್ನೂ ಬಿಡುತ್ತಿಲ್ಲ. ಎರಡು ವಾರಗಳ ಹಿಂದೆಯಷ್ಟೇ ಮುಂಬೈನಿಂದ ನವದೆಹಲಿಗೆ ವಾಪಸ್ಸಾದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಹಿರಿಯ ವಿಜ್ಞಾನಿಯವರಲ್ಲಿ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ.

ಮುಂಬೈಗೆ ತೆರಳಿದ್ದ ಹಿರಿಯ ವಿಜ್ಞಾನಿಯೊಬ್ಬರು ಇತ್ತೀಚಿಗಷ್ಟೇ ನವದೆಹಲಿಗೆ ವಾಪಸ್ಸಾಗಿದ್ದರು. ಈ ವೇಳೆ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಸೋಂಕು ಪತ್ತೆಯಾಗಿದೆ.

ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ, ICMRನಿಂದ ಮಹತ್ವದ ಸ್ಪಷ್ಟನೆ

ನವದೆಹಲಿಯಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಕಟ್ಟಡವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಮುಂದಿನ ಎರಡು ದಿನಗಳ ಕಾಲ ಎಲ್ಲ ಸಿಬ್ಬಂದಿಗೆ ಪ್ರವೇಶಕ್ಕೆ ಅವಕಾಶವನ್ನು ನಿರ್ಬಂಧಿಸಲಾಗಿದೆ.

ಅಗತ್ಯ ಸಿಬ್ಬಂದಿಗೆ ಮಾತ್ರ ಐಸಿಎಂಆರ್ ಕಟ್ಟಡಕ್ಕೆ ಅವಕಾಶ:

ನವದೆಹಲಿಯ ಐಸಿಎಂಆರ್ ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗಿದ್ದು ಎಲ್ಲ ಸಿಬ್ಬಂದಿಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ವೈರಸ್ ಸಂಬಂಧಿತ ಔಷಧಿ ಸಂಶೋಧನೆಗೆ ಸಂಬಂಧಿಸಿದ ಕೆಲವು ಅಗತ್ಯ ಸಿಬ್ಬಂದಿಗೆ ಮಾತ್ರ ಸೋಮವಾರ ಐಸಿಎಂಆರ್ ಕಟ್ಟಡದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.

ಮಂಗಳವಾರ ಮತ್ತು ಬುಧವಾರ ಐಸಿಎಂಆರ್ ಕಚೇರಿಗೆ ತೆರಳದೇ ವರ್ಕ್ ಫ್ರಾಮ್ ಹೋಮ್ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಕೊರೊನಾ ವೈರಸ್ ಗೆ ಸಂಬಂಧಿತ ಸಂಶೋಧನಾ ಸಿಬ್ಬಂದಿಗೆ ಅನಿವಾರ್ಯವಿದ್ದಲ್ಲಿ ಮಾತ್ರ ಕಚೇರಿಗೆ ಆಗಮಿಸಬೇಕು. ಇಲ್ಲದಿದ್ದಲ್ಲಿ ಎಲ್ಲರೂ ಮನೆಯಿಂದಲೇ ವರ್ಕ್ ಮಾಡುವಂತೆ ಸೂಚಿಸಲಾಗಿದೆ.

English summary
ICMR Senior Scientist Tests Positive for Coronavirus. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X