ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಥುರಾದಲ್ಲಿ ಮಿರಾಜ್ 2000 ಸೂಪರ್ ಲ್ಯಾಂಡಿಂಗ್

By Mahesh
|
Google Oneindia Kannada News

ನವದೆಹಲಿ, ಮೇ.21: ಭಾರತೀಯ ವಾಯು ಸೇನೆ (IAF) ಗೆ ಸೇರಿರುವ ಮಿರಾಜ್ 2000 ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಲ್ಯಾಂಡ್ ಆಗಿದೆ. ತುರ್ತು ಭೂಸ್ಪರ್ಶ ಸಂದರ್ಭದಲ್ಲಿ ಈ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಲು ನಡೆದ ಪ್ರಾಯೋಗಿಕ ಪರೀಕ್ಷೆ ಗುರುವಾರ ಯಶಸ್ವಿಯಾಗಿದೆ.

ಇದೇ ಮೊದಲ ಬಾರಿಗೆ ರಸ್ತೆಯ ಮೇಲೆ ಮಿರಾಜ್ 200 ಲ್ಯಾಂಡ್ ಪರೀಕ್ಷಾರ್ಥ ಪ್ರಯತ್ನ ಯಶಸ್ವಿಯಾಗಿದೆ.ಆಗ್ರಾ ಹಾಗೂ ಲಕ್ನೋ ಎಕ್ಸ್ ಪ್ರೆಸ್ ವೇ ನಲ್ಲಿ ಇದೇ ಮೊದಲ ಬಾರಿಗೆ ಮಿಲಿಟರಿ ವಿಮಾನವೊಂದು ರಸ್ತೆ ಪಥವನ್ನು ರನ್ ವೇ ಮಾದರಿಯಲ್ಲಿ ಬಳಸಿಕೊಂಡಿದೆ.

IAF jet makes a successful effort on Yamuna Expressway

ಟ್ರಾಫಿಕ್ ಜಾಮ್ : ಹೆದ್ದಾರಿ ಮೇಲೆ ಮಿರಾಜ್ ಇಳಿಯುವುದನ್ನು ನೋಡಲು ಟ್ರಾಫಿಕ್ ನಿಲ್ಲಿಸಲಾಗಿತ್ತು. ಮೇ.25 ರಂದು ಬೃಹತ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಭಾಷಣ ಮಾಡಲಿದ್ದಾರೆ. ಇದಕ್ಕೂ ಮುನ್ನ ಈ ಪ್ರಯೋಗಾರ್ಥ ಹಾರಾಟ ನಡೆಸಲಾಗಿದೆ.

ಯಮುನಾ ಎಕ್ಸ್ ಪ್ರೆಸ್ ವೇನ 3 ಕಿ.ಮೀ ವಿಸ್ತ್ರೀರ್ಣವನ್ನು ರನ್ ವೇ ರೀತಿ ಬಳಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ಸಂಪೂರ್ಣ ವೆಚ್ಚವನ್ನು ಭಾರತೀಯ ವಾಯುಸೇನೆ ಭರಿಸಲಿದೆ.

ಚೀನಾ, ಪಾಕಿಸ್ತಾನ, ಸ್ವೀಡನ್, ಜರ್ಮನಿ ಹಾಗೂ ಸಿಂಗಪುರದಲ್ಲಿ ಇದೇ ರೀತಿ ಎಕ್ಸ್ ಪ್ರೆಸ್ ವೇಗಳನ್ನು ಮಿಲಿಟರಿ ವಿಮಾನ ಲ್ಯಾಂಡಿಂಗ್ ಮಾಡಲು ಬಳಸಿಕೊಳ್ಳಲಾಗುತ್ತಿದೆ.

ಕಳೆದ ತಿಂಗಳಷ್ಟೇ ಸುಧಾರಿತ ಮಿರಾಜ್ 200 ಏರ್ ಕ್ರಾಫ್ಟ್ ಗಳನ್ನು ಫ್ರಾನ್ಸ್ ನಿಂದ ಪಡೆದುಕೊಳ್ಳಲಾಯಿತು. 10,000 ಕೋಟಿ ಡೀಲ್ ಇದಾಗಿದೆ. 1980ರಲ್ಲಿ ಸುಮಾರು 49 ಮೀರಜ್ ಏರ್ ಕ್ರಾಫ್ಟ್ ಭಾರತೀಯ ವಾಯುಸೇನೆ ಸೇರಿದೆ.

(ಒನ್ ಇಂಡಿಯಾ ಸುದ್ದಿ)

English summary
IAF's Mirage 2000 made a successful landing on Yamuna Expressway near Mathura in Uttar Pradesh as part of trials to use the country's national highways for emergency landing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X