ಅರವಿಂದ್ ಕೇಜ್ರಿವಾಲ್ ಮೇಲೆ ಭ್ರಷ್ಟಾಚಾರದ ಬಾಂಬ್ ಸಿಡಿಸಿದ ಕಪಿಲ್ ಮಿಶ್ರಾ
ಕೇಜ್ರಿವಾಲ್ ಗೆ ಆರೋಗ್ಯ ಸಚಿವ ಸತ್ಯೇಂದರ್ ಜೈನ್ 2 ಕೋಟಿ ಹಣ ನೀಡುತ್ತಿದ್ದುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿ ಮಾಜಿ ನೀರಾವರಿ ಸಚಿವ ಕಪಿಲ್ ಮಿಶ್ರಾ ದೆಹಲಿ ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ನವದೆಹಲಿ, ಮೇ 7: ದೆಹಲಿ ಸಂಪುಟದಿಂದ ಕಿತ್ತುಹಾಕಲಾಗಿದ್ದ ನೀರಾವರಿ ಸಚಿವ ಕಪಿಲ್ ಮಿಶ್ರಾ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಭ್ರಷ್ಟಾಚಾರದ ಬಾಂಬ್ ಸಿಡಿಸಿದ್ದಾರೆ.
ಕೇಜ್ರಿವಾಲ್ ಗೆ ಆರೋಗ್ಯ ಸಚಿವ ಸತ್ಯೇಂದರ್ ಜೈನ್ 2 ಕೋಟಿ ಹಣ ನೀಡುತ್ತಿದ್ದುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿ ದೆಹಲಿ ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.[ಹಗರಣ ಬಯಲಿಗೆಳೆಯುತ್ತೇನೆ ಎಂದ ಸಚಿವನನ್ನು ಹೊರ ದಬ್ಬಿದ ಕೇಜ್ರಿ]
"ಆ ಹಣ ಎಲ್ಲಿಂದ ಬಂತು? ಆ ಹಣದಲ್ಲಿ ಏನು ಮಾಡಿದ್ರು ಅನ್ನುವುದನ್ನು ಅವರು ಬಹಿರಂಗಪಡಿಸಬೇಕು," ಎಂದೂ ಮಿಶ್ರಾ ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಈ ಹಿಂದೆ ಮಿಶ್ರಾ ತಾನು ಅಕ್ರಮ ಹಣ ಸ್ವೀಕರಿಸುತ್ತಿದುದನ್ನು ನೋಡಿದ್ದಾಗಿ ಟ್ವೀಟ್ ಮಾಡಿದ್ದರು.
ಒಂದೆಡೆ ಮಿಶ್ರಾ ಲಂಚ ಸ್ವೀಕಾರದ ಆರೋಪ ಹೊರಿಸಿದ್ದರೆ ಅವರನ್ನು ಸಂಪುಟದಿಂದ ಕಿತ್ತೆಸೆದ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮಾತ್ರ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. 'ಇದೆಲ್ಲಾ ಆಧಾರ ರಹಿತ' ಎಂದು ಅವರು ಹೇಳಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ಕಪಿಲ್ ಮಿಶ್ರಾ
ಇಂದು ಬೆಳಿಗ್ಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭೇಟಿಯಾಗಿರುವ ಮಿಶ್ರಾ, ಎಲ್ಲಾ ಮಾಹಿತಿಗಳನ್ನು ನೀಡಿರುವುದಾಗಿ ಹೇಳಿದ್ದಾರೆ. ಈ ಹಿಂದೆ ಮಿಶ್ರಾ ಟ್ಯಾಂಕರ್ ಸ್ಕಾಮ್ ಹೊರ ತರುವುದಾಗಿ ಟ್ವೀಟ್ ಮಾಡಿದ್ದರು. ಇದಾದ ನಂತರ 36 ವರ್ಷದ ಕಪಿಲ್ ಮಿಶ್ರಾರನ್ನು ಸಂಪುಟದಿಂದ ಕಿತ್ತು ಹಾಕಲಾಗಿತ್ತು.

ಎಎಪಿ ಬಿಡಲ್ಲ
"ನಾನು ಕೇಜ್ರಿವಾಲ್ ಲಂಚ ಸ್ವೀಕರಿಸುತ್ತಿರುವುದಕ್ಕೆ ಸಾಕ್ಷಿಯಾಗಿದ್ದೇನೆ. ಎಲ್ಲಾ ಮಾಹಿತಿಗಳನ್ನೂ ಲೆಫ್ಟಿನೆಂಟ್ ಗವರ್ನರ್ ಜತೆ ಹಂಚಿಕೊಂಡಿದ್ದೇನೆ. ಸುಮ್ಮನಿರಲು ಸಾಧ್ಯವಿಲ್ಲ. ಅಧಿಕಾರ ಕಳೆದುಕೊಳ್ಳುವುದು ದೊಡ್ಡದಲ್ಲ. ನನ್ನ ಜೀವ ಕಳೆದುಕೊಳ್ಳಲೂ ಸಿದ್ದವಾಗಿದ್ದೇನೆ ," ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ. ಮಾತ್ರವಲ್ಲ ತಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. "ಎಎಪಿ ನನ್ನ ಪಕ್ಷ" ಎಂದಿದ್ದಾರೆ.

ಕೇಜ್ರಿವಾಲ್ ಸಂಬಂಧಿಕರ ಡೀಲ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕಪಿಲ್ ಮಿಶ್ರಾ, "ತಾನು ಕೇಜ್ರಿವಾಲ್ ಸಂಬಂಧಿಕರ 50 ಕೋಟಿ ರೂಪಾಯಿಯ ಲ್ಯಾಂಡ್ ಡೀಲ್ ಒಂದನ್ನು ಮಾಡಿಕೊಟ್ಟಿದ್ದಾಗಿ ಸತ್ಯೇಂದರ್ ಜೈನ್ ನನ್ನ ಬಳಿ ಹೇಳಿದ್ದಾರೆ," ಎಂದಿದ್ದಾರೆ.
ನಾನು ಕೇಜ್ರಿವಾಲ್ ಕ್ಲೀನ್ ಎಂದುಕೊಂಡಿದ್ದೆ. ಅವರನ್ನು ನಂಬಿದ್ದೆ. ಆದರೆ ಪಂಜಾಬ್ ಚುನಾವಣೆಗೆ ಸಂಬಂಧಿಸಿದಂತೆ ಹಲವು ಫಂಡ್ ವಿವಾದಗಳಿವೆ. ಅದರ ಬಗ್ಗೆ ಕೇಜ್ರಿವಾಲ್ ಕ್ರಮ ಕೈಗೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ ಕೇಜ್ರಿವಾಲ್ ಎರಡು ಕೋಟಿ ರೂಪಾಯಿ ತೆಗೆದುಕೊಳ್ಳುವುದನ್ನು ಅವರ ಮನೆಯಲ್ಲೇ ನೋಡಿದೆ ಎಂದಿದ್ದಾರೆ.

ಕುಮಾರ್ ವಿಶ್ವಾಸ್ ಆಪ್ತ
ಕಪಿಲ್ ಮಿಶ್ರಾ ಎಎಪಿಯ ಜನಪ್ರಿಯ ನಾಯಕ ಕುಮಾರ್ ವಿಶ್ವಾಸ್ ಆಪ್ತರಾಗಿದ್ದಾರೆ. ಇತ್ತೀಚೆಗೆ ಎಎಪಿಯ ಆಂತರಿಕ ಕಚ್ಚಾಟದ ಕಾರಣಕ್ಕೆ ವಿಶ್ವಾಸ್ ಕೂಡಾ ಸುದ್ದಿ ಕೇಂದ್ರಕ್ಕೆ ಬಂದಿದ್ದರು. ಇದಾದ ಬೆನ್ನಿಗೆ, "ನಾನು ದೊಡ್ಡ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ. ಕಾರಣ ಈ ನಾಯಕರು ಅಂಥಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ," ಎಂದಿದ್ದರು ಮಿಶ್ರಾ.
ಇದಾದ ನಂತರ ಮತ್ತೆ ಟ್ವೀಟ್ ಮಾಡಿದ್ದ ಮಿಶ್ರಾ, "ಅರವಿಂದ್ ಕೇಜ್ರಿವಾಲ್ ನೇರವಾಗಿ ಹಲವು ಎಎಪಿ ನಾಯಕರು, ಶಾಸಕರು ಜತೆ ಮಾತನಾಡುತ್ತಿದ್ದಾರೆ. ನನ್ನ ಪತ್ರಿಕಾಗೋಷ್ಠಿಗೂ ಮುನ್ನ ದೊಡ್ಡ ಮಟ್ಟದ ಸಂಚು ನಡೆಯುತ್ತಿದೆ. ಆದರೆ ನಿಲ್ಲುವುದಿಲ್ಲ, ತಲೆ ಬಾಗುವುದಿಲ್ಲ," ಎಂದಿದ್ದರು ಮಿಶ್ರಾ. ಇದೀಗ ಅವರೇ ಹೇಳಿದಂತೆ ಪತ್ರಿಕಾಗೋಷ್ಠಿ ನಡೆಸಿ ಬಾಂಬ್ ಸಿಡಿಸಿದ್ದಾರೆ.

ನೀರಾವರಿ ಹಗರಣ
ಕಳೆದ ವರ್ಷ ಎಎಪಿ ಸರಕಾರ ಟ್ಯಾಂಕರ್ ಸ್ಕ್ಯಾಮ್ ತನಿಖೆಗೆ ಆದೇಶ ನೀಡಿತ್ತು. ತನಿಖೆಯ ನಂತರ ಟ್ಯಾಂಕರ್ ಹಗರಣ 400 ಕೋಟಿಯ ಸ್ಕ್ಯಾಮ್ ಎಂಬುದು ಬೆಳಕಿಗೆ ಬಂದಿತ್ತು. ಮಾತ್ರವಲ್ಲ ಟ್ಯಾಂಕರ್ ಮಾಫಿಯಾಗೆ ಲಾಭ ಮಾಡಲು ಬೇಕೆಂದೇ ನೀರಿನ ಕೊರತೆ ಸೃಷ್ಟಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮೇಲೆ ಆರೋಪವನ್ನೂ ಹೊರಿಸಲಾಗಿತ್ತು.
ಇನ್ನು ಕಪಿಲ್ ಮಿಶ್ರಾರನ್ನು ಸಂಪುಟದಿಂದ ಕೈ ಬಿಟ್ಟ ನಿರ್ಧಾರ ಪ್ರಕಟಿಸಿದ ಮನೀಷ್ ಸಿಸೋಡಿಯಾ ಕೂಡಾ ಇದೇ ನೀರಾವರಿ ವಿಷಯವನ್ನೇ ಎತ್ತಿದ್ದಾರೆ. "ನೀರಾವರಿ ನಿರ್ವಹಣೆ ಅಂದುಕೊಂಡ ಮಟ್ಟಕ್ಕೆ ನಡೆದಿಲ್ಲ. ಜನರಿಗೆ ನೀರು ತಲುಪುತ್ತಿಲ್ಲ ಎಂಬುದರ ಬಗ್ಗೆ ದೂರುಗಳಿವೆ. ಸಚಿವರು ಶ್ರಮಪಟ್ಟು ಕೆಲಸ ಮಾಡಿದರೂ ಸಮಸ್ಯೆಗಳು ಬಗೆ ಹರಿದಿಲ್ಲ," ಎಂದು ಹೇಳಿದ್ದರು.

ಮುಗಿಬಿದ್ದ ಬಿಜೆಪಿ, ಕಾಂಗ್ರೆಸ್
ಕೇಜ್ರಿವಾಲ್ ಮೇಲೆ ಆರೋಪ ಕೇಳಿ ಬಂದಿರುವುದೇ ತಡ ಎಎಪಿ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಮುಗಿ ಬಿದ್ದಿವೆ. "ಎಎಪಿ ಯಾವ ಸಿದ್ಧಾಂತದ ಮೇಲೆ ಸ್ಥಾಪನೆಯಾಗಿತ್ತೋ ಅದನ್ನೇ ಮರೆತಿದೆ," ಎಂದು ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಹೇಳಿದ್ದಾರೆ.
ಇನ್ನು ಈ ಆರೋಪದ ಬಗ್ಗೆ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications