ಪಿಎಂ ಕನಸಿಲ್ಲ, ಆರ್‌ಎಸ್‌ಎಸ್‌ಗೆ ಹಾಗೊಂದು ಯೋಜನೆಯೂ ಇಲ್ಲ: ಗಡ್ಕರಿ
ನವದೆಹಲಿ, ಮಾರ್ಚ್ 11: ನನಗೆ ಪ್ರಧಾನಮಂತ್ರಿ ಆಗುವ ಆಸೆ ಇಲ್ಲ, ನನ್ನನ್ನು ಪ್ರಧಾನಿ ಮಾಡುವ ಯೋಚನೆ ಕೂಡ ಆರ್‌ಎಸ್‌ಎಸ್ ಗೆ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಸ್ಪಷ್ಟಪಡಿಸಿದ ಅವರು, ಆರ್‌ಎಸ್‌ಎಸ್, ನಿತಿನ್ ಗಡ್ಕರಿಯನ್ನು ಪಿಎಂ ಮಾಡುವ ಯೋಜನೆ ಹಾಕಿದೆ ಎಂಬ ಸುದ್ದಿಗೆ ಅವರು ತೆರೆ ಎಳೆದರು.
ನಾನು ಆ ರೀತಿಯ ಯಾವುದೇ ಕನಸುಗಳನ್ನು ಕಂಡಿಲ್ಲ, ನಾನು ಪಿಎಂ ರೇಸಿನಲ್ಲೂ ಇಲ್ಲ, ಇದನ್ನು ನನ್ನ ಹೃದಯದಿಂದ ಹೇಳುತ್ತಿದ್ದೇನೆ, ನಾನು ಪಿಎಂ ರೇಸಿನಲ್ಲಿ ಇದ್ದೇನೆ ಎಂಬುದು ಸಂಪೂರ್ಣ ಸುಳ್ಳು ಎಂದು ಗಡ್ಕರಿ ಹೇಳಿದರು.

ಗಡ್ಕರಿ ಅವರ ಇತ್ತೀಚಿಗಿನ ಕೆಲವು ಹೇಳಿಕೆಗಳು ಮೋದಿ ವಿರುದ್ಧ ಇದ್ದವು, ಸರ್ಕಾರವನ್ನು ಟೀಕಿಸಿ, ನೆಹರು, ಇಂದಿರಾ ಗಾಂಧಿ ಅವರನ್ನು ಹೊಗಳಿದ್ದರು, ಹಾಗಾಗಿ ಗಡ್ಕರಿ ಅವರು ಮೋದಿ ಅವರ ಎದುರಾಳಿ ಎಂದು ಬಿಂಬಿಸಲಾಗಿತ್ತು. ಆದರೆ ಇದನ್ನು ತಳ್ಳಿ ಹಾಕಿದ ಅವರು, ನಾನು ಮತ್ತು ನನ್ನ ಪಕ್ಷ (ಬಿಜೆಪಿ) ಮೋದಿಗೆ ಬೆನ್ನಿಗೆ ಇದೆ ಎಂದು ಅವರು ಹೇಳಿದರು.
ಗಡ್ಕರಿ ಬಗ್ಗೆ ರಾಹುಲ್ ಗಾಂಧಿ ಸಹ ಮಾತನಾಡಿದ್ದರು. ಗಡ್ಕರಿಗೆ ಬಿಟ್ಟರೆ ಬಿಜೆಪಿಯಲ್ಲಿ ಇನ್ಯಾರಿಗೂ ಧೈರ್ಯವಿಲ್ಲ ಎಂದು ಹೇಳಿದ್ದರು. ಇದು ಸಹ ಸುದ್ದಿಗೆ ಗ್ರಾಸವಾಗಿತ್ತು.












Click it and Unblock the Notifications