• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಚೆ ತೊಟ್ಟು ವರ್ಕ್ ಫ್ರಮ್ ಹೋಮ್ ಮಾಡ್ತೀನಿ ಅಂದ್ರು ಆನಂದ್ ಮಹೇಂದ್ರ

|

ನವ ದೆಹಲಿ, ಏಪ್ರಿಲ್ 06: ಮಹೀಂದ್ರ ಗೂಪ್ ಚೇರ್ ಮನ್ ಆನಂದ್ ಮಹೀಂದ್ರ ತಮ್ಮ ವರ್ಕ್ ಹೋಮ್ ಅನುಭವವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಅನೇಕ ಇದೀಗ ಅನೇಕರ ಗಮನ ಸೆಳೆದಿದೆ.

ಅನೇಕ ಕಂಪನಿಗಳು ಈಗ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಿವೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೈರಸ್‌ ಕಾರಣದಿಂದ ಕಳೆದ ಒಂದು ತಿಂಗಳಿನಿಂದ ಈ ಪ್ರಕ್ರಿಯೆ ಹೆಚ್ಚಾಗಿ ನಡೆಯುತ್ತಿದೆ.

ಕೊರೊನಾ ಹತೋಟಿಗೆ ತರೋದು ಹೇಗೆ: ಆನಂದ್ ಮಹಿಂದ್ರಾ ಟಿಪ್ಸ್ ಇಲ್ಲಿದೆ

ನೂರಕ್ಕೆ 90 ರಷ್ಟು ಜನ ವರ್ಕ್ ಫ್ರಮ್ ಹೋಮ್ ಮಾಡುವಾಗ ಆಫೀಸ್‌ಗೆ ಹೋಗುವಾಗ ಧರಿಸುವ ಬಟ್ಟೆಗಳ ಹಾಗೆ ಹೆಚ್ಚು ಯೋಚನೆ ಮಾಡುವುದಿಲ್ಲ. ದಿನ ನಿತ್ಯ ಮನೆಯಲ್ಲಿ ಧರಿಸುವ ಯಾವುದೋ ಒಂದು ಟೀ ಶರ್ಟ್, ಶಾಟ್ಸ್, ಪಂಚೆ ಹಾಕಿಕೊಳ್ಳುತ್ತಾರೆ. ವಿಡಿಯೋ ಮೀಟಿಂಗ್ ಗಳು ಇದ್ದವರು ಮಾತ್ರ ಕೊಂಚ ಬಟ್ಟೆಯ ಬಗ್ಗೆ ಯೋಚನೆ ಮಾಡಬಹುದು.

ಈ ರೀತಿಯದ್ದೇ ತಮ್ಮ ವರ್ಕ್ ಫ್ರಮ್ ಹೋಮ್ ಅನುಭವವನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಒಂದು ಕಾಮಿಡಿ ಪೋಸ್ಟ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆನಂದ್ ಮಹೀಂದ್ರ ಶೇರ್ ಮಾಡಿದ್ದಾರೆ. ತಾವು ಎಷ್ಟೋ ಬಾರಿ ವರ್ಕ್ ಫ್ರಮ್ ಹೋಮ್‌ಗಳಲ್ಲಿ ಪಂಚೆ ತೊಟ್ಟು ವಿಡಿಯೋ ಕಾಲ್ ಮೀಟಿಂಗ್ ಮಾಡುತ್ತಿದೆ. ಆಗ ಮೇಲೆ ನಿಂತುಕೊಳ್ಳದೆ, ಯಾರಿಗೂ ತಿಳಿಯದಂತೆ ನೋಡಿಕೊಂಡಿಕೊಳ್ಳುತ್ತಿದೆ ಎಂದಿದ್ದಾರೆ.

ಈ ಟ್ವೀಟ್ ನಂತರ ನಾನು ಪಂಚೆ ತೊಟ್ಟು ವಿಡಿಯೋ ಮೀಟಿಂಗ್ ಮಾಡುವುದು ನನ್ನ ಸಹೋದ್ಯೋಗಿಗಳಿಗೆ ತಿಳಿಯುತ್ತದೆ. ಇನ್ನು ಮುಂದೆ ಅವರು ಮೇಲೆ ನನ್ನನ್ನು ಮೇಲೆ ನಿಂತುಕೊಳ್ಳಲು ಹೋಳಬಹುದು ಎಂದು ಹಾಸ್ಯ ಚಟಾಕಿಯನ್ನು ಆನಂದ್ ಮಹೀಂದ್ರ ಹಾರಿಸಿದ್ದಾರೆ.

ಆನಂದ್ ಮಹೀಂದ್ರರಿಗೆ ಪಂಚೆ ಬಹಳ ಇಷ್ಟವಂತೆ. ಶಾಲಾ ದಿನಗಳಿಂದ ಮನೆಯಲ್ಲಿ ಪಂಚೆ ತೊಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

English summary
I also wear lungi in work from home says Mahindra group chairman Anand Mahindra
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X