ಬಿಯರ್ ಕುಡುಕರ ಆಸೆಗೆ ಮೋದಿ ತಣ್ಣೀರೆರಚಿದ ಪ್ರಸಂಗ!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜನವರಿ 02 : ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಎಷ್ಟು ಭಾಷಣಗಳನ್ನು ಮಾಡಿದ್ದಾರೆ ಲೆಕ್ಕವಿಟ್ಟವರಾರು? ಹಾಗೆಯೆ ಭಾಷಣದುದ್ದಕ್ಕೂ ಅಲ್ಲಲ್ಲಿ ನುಸುಳಿ ಬರುವ 'ಭಾಯಿಯೋ ಔಟ್ ಬೆಹೆಣೋ', 'ಮಿತ್ರೋ' ಎಂಬ ಪದಪುಂಜಗಳನ್ನು ಲೆಕ್ಕವಿಡಲು ಸಾಧ್ಯವೆ?

ಅಸಲಿಗೆ ಈ ಪದಪುಂಜಗಳು ತಮಾಷೆಯ ವಸ್ತುವಾಗಿವೆ. ಹೊಸ ವರ್ಷದ ಮುನ್ನಾದಿನ ನರೇಂದ್ರ ಮೋದಿಯವರು ದೇಶದ ಜನತೆಯನ್ನುದ್ದೇಶಿಸಿ ಮಾಡಿದ ಭಾಷಣ ಅನೇಕರಿಗೆ ಇಷ್ಟವಾಗಿರಲಿಕ್ಕಿಲ್ಲ. ಆದರೆ, 'ಮಿತ್ರೋ' ಎಂಬ ಪದ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಆಗಿದ್ದು ಮತ್ತು ಭಾರೀ ಚರ್ಚೆಗೊಳಲಾಗಿತ್ತು.

ಯಾಕೆಂದ್ರೆ, 45 ನಿಮಿಷಗಳ ಕಾಲ ಮಾಡಿದ ಆ ಭಾಷಣದುದ್ದಕ್ಕೂ ನರೇಂದ್ರ ಮೋದಿಯವರು ಒಂದೇ ಒಂದು ಬಾರಿಯೂ 'ಮಿತ್ರೋ' ಎಂದು ಸಂಬೋಧಿಸಲಿಲ್ಲ. ಇದರ ಹಿಂದೆ ಒಂದು ತಮಾಷೆಯ ಸಂಗತಿಯೂ ಜರುಗಿದೆ. 'ಮಿತ್ರೋ' ಎಂಬ ಪದವನ್ನು ಬೇಕಂತಲೇ ಮೋದಿ ಬಿಟ್ಟರಾ ಎಂಬ ಸಂಶಯ ಕಾಡಿದರೂ ಅಚ್ಚರಿಯಿಲ್ಲ.[ಭಾಯಿಯೋ ಔರ್ ಬೆಹೆಣೋ... ಮೋದಿ ಭಾಷಣದ ಮುಖ್ಯಾಂಶಗಳು]

How Modi ruined a tippler's night in Delhi by not saying 'Mitron'

ಆಗಿದ್ದೇನೆಂದರೆ, ದೆಹಲಿಯಲ್ಲಿರುವ ಒಂದು ಪಬ್, ನರೇಂದ್ರ ಮೋದಿಯವರು ಪ್ರತಿಬಾರಿ ಬಳಸಿದಾಗಲೆಲ್ಲ ಬಿಯರ್ ಮೇಲೆ ಶೇ.200ರಷ್ಟು ರಿಯಾಯಿತಿ ನೀಡುತ್ತಿತ್ತು. ಬಿಯರ್ ಹೀರುವವರಿಗೆ ಅದೃಷ್ಟವೋ ಅದೃಷ್ಟ. ಆದರೆ, ಡಿಸೆಂಬರ್ 31ರಂದೇನಾಯಿತು? ಒಬ್ಬರಿಗೂ ಅದೃಷ್ಟ ಖುಲಾಯಿಸಲಿಲ್ಲ!

ಪಬ್ ಮಾಲಿಕರು ಬಿಯರ್ ಬಾಟಲನ್ನು 31ರು.ಗೆ ಕೊಡುತ್ತಾರೆಂದು ಯಾವ ಕುಡುಕ ಬಾಯಿ ಬಿಡಲ್ಲ ಹೇಳಿ? ನರೇಂದ್ರ ಮೋದಿ 'ಮಿತ್ರೋ' ಅಂತಾರೆ ಅಂತ ಆಸೆಯಿಂದ ಬಾಯಿಬಾಯಿ ಬಿಟ್ಟುಕೊಂಡು ಹಲವಾರು ಕುಡುಕರು ಕುಳಿತಿದ್ದರು. ಟ್ವಿಟ್ಟರ್ ನಲ್ಲಿಯೂ ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರೀ ಜೋಕುಗಳು ಹರಿದಾಡುತ್ತಿದ್ದವು, ಟ್ರೋಲ್ ಗಳಾದವು. [ಜಾಸ್ತಿ ಮದ್ಯ, ಕಮ್ಮಿ ಬೀರ್ ಹೀರಿ ಅಂತಾಯಿದೆ ಕರ್ನಾಟಕ!]

How Modi ruined a tippler's night in Delhi by not saying 'Mitron'

ಇದು ಮೋದಿ ಗಮನಕ್ಕೆ ಬಂತೋ ಏನೋ... ಒಂದೇ ಒಂದು ಬಾರಿಯೂ ಆ ಪದವನ್ನು ಅವರು ಉಚ್ಚರಿಸಲಿಲ್ಲ. ಮಿತ್ರೋನೂ ಇಲ್ಲ, ಭಾಯಿಯೋ ಔರ್ ಬೆಹೆಣೋನೂ ಇಲ್ಲ. ಹಲವರಿಗೆ ಮೋದಿ ಭಾಷಣ ನಿರಾಶೆ ತಂದಿದ್ದರೆ, ಭಾಷಣದಲ್ಲಿ ಮಿತ್ರೋ ಅನ್ನದಿರುವುದು ಪಬ್ ನಲ್ಲಿ ಕೂತವರಿಗೆ ತಣ್ಣೀರೆರಚಿತು.

ಮೋದಿಯವರು ತಮ್ಮ ಭಾಷಣದಲ್ಲಿ ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಹಲವಾರು ಯೋಜನೆಗಳನ್ನು ಘೋಷಿಸಿ ಭೇಷ್ ಅನ್ನಿಸಿಕೊಂಡರು. ದೇಶದ ಅಭಿವೃದ್ಧಿಗೆ ಜನರೆಲ್ಲ ಒಗ್ಗಟ್ಟಿನಿಂದ ಅಪನಗದೀಕರಣವನ್ನು ಬೆಂಬಲಿಸಬೇಕೆಂದು ಕೋರಿ, ಅಭಿಮಾನಿಗಳ ಮನ ಗೆದ್ದರು. ಆದರೆ, ಆ ದೆಹಲಿಯ ಪಬ್ ನಲ್ಲಿ ಕುಳಿತಿದ್ದ ಕುಡುಕರು ಮಾತ್ರ ಪೆಚ್ಚುಮೋರೆ ಹಾಕಿ ಕುಳಿತಿದ್ದರು. ["ಜೇಬಿಗೆ ಬೆಂಕಿ ಇಟ್ರು.. ಪ್ರೀತಿಗೂ ಕೊಳ್ಳಿ ಇಟ್ರು..!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There was a 200 per cent discount on beer offered by one pub in Delhi every time Prime Minister Narendra Modi used the word 'Mitron,' during his address on January 31. However the pub hoppers were in for a rude surprise and could not avail this very tempting discount as the PM refused to utter the word Mitron during his 45 minute address.
Please Wait while comments are loading...