Mother’s Day: ಅಮ್ಮನ ಜೊತೆ ಭೇಟಿ ನೀಡಬಹುದಾದ ಭಾರತದ 5 ಸುಂದರ ತಾಣಗಳು
ತಾಯಿಯೊಂದಿಗೆ ಕಳೆದ ಕ್ಷಣಗಳು ಜೀವನಪೂರ್ತಿ ಮಧುರ ನೆನಪುಗಳಾಗಿ ಉಳಿಯುತ್ತವೆ. ಈ ತಾಯಂದಿರ ದಿನ(ಮದರ್ಸ್ ಡೇ) ಸಂದರ್ಭದಲ್ಲಿ ಅಮ್ಮನ ಜೊತೆ ವಿಶೇಷ ಸಮಯ ಕಳೆಯಲು ಭಾರತದಲ್ಲಿನ ಕೆಲವು ಸುಂದರ ಪ್ರವಾಸಿ ತಾಣಗಳು ಅತ್ಯುತ್ತಮ ಆಯ್ಕೆಗಳಾಗಿವೆ. ಪ್ರಕೃತಿ ಸೌಂದರ್ಯ, ಆಧ್ಯಾತ್ಮ ಶಾಂತಿ, ಐತಿಹಾಸಿಕ ಮತ್ತು ವಿಶ್ರಾಂತಿ ಅನುಭವ ನೀಡುವ ಈ ಸ್ಥಳಗಳು ತಾಯಿ ಮಕ್ಕಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.
1.ಗೋವಾ ಬೀಚ್ ಪ್ರವಾಸ
ಗೋವಾ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಅತಿ ಸಣ್ಣ ಮತ್ತು ಸುಂದರವಾದ ರಾಜ್ಯ. ಗೋವಾದ ಸಮುದ್ರದ ಕಡಲತೀರದಲ್ಲಿ ವಿಶ್ರಾಂತಿ ಪಡೆಯುತ್ತಾ ಅಮ್ಮನ ಜೊತೆ ಸಂತಸದ ಕ್ಷಣಗಳನ್ನು ಕಳೆಯಬಹುದು. ಸಮುದ್ರ ತೀರದಲ್ಲಿ ಸೀಫುಡ್ ಆಹಾರವನ್ನು ಸವಿಯುವುದು ಮತ್ತು ಹಳೆಯ ಗೋವಾ (Old Goa) ದಲ್ಲಿನ ಚರ್ಚುಗಳು, ಪೋರ್ಚುಗೀಸ್ ಶೈಲಿಯ ಮನೆಗಳು ಮತ್ತು ಸಂಸ್ಕೃತಿ ವಿಶಿಷ್ಟವಾಗಿದೆ.

2.ಜೈಪುರ ಅರಮನೆಗಳ ಪ್ರವಾಸ, ರಾಜಸ್ಥಾನ
ಜೈಪುರ ರಾಜಸ್ಥಾನದ ರಾಜಧಾನಿ ಮತ್ತು ಅತಿದೊಡ್ಡ ನಗರವಾಗಿದೆ. 'ಪಿಂಕ್ ಸಿಟಿ' ಎಂದೇ ಪ್ರಸಿದ್ಧವಾಗಿದೆ. ಜೈಪುರದ ಭವ್ಯವಾದ ಅರಮನೆಗಳು, ಕೋಟೆಗಳು ಮತ್ತು ಸಾಂಪ್ರದಾಯಿಕ ಮಾರುಕಟ್ಟೆಗಳು ರಾಜಮನೆತನದ ವೈಭವವನ್ನು ಪರಿಚಯಿಸುತ್ತವೆ. ಅಂಬರ್ ಕೋಟೆ, ಹವಾ ಮಹಲ್, ಸಿಟಿ ಪ್ಯಾಲೆಸ್ ಹಾಗೂ ರಾಜಸ್ಥಾನಿ ಆಹಾರಗಳ ಸವಿಯನ್ನು ಅಮ್ಮನ ಜೊತೆ ಅನುಭವಿಸಬಹುದು.
3.ಅಲ್ಲೆಪ್ಪಿ ಹೌಸ್‌ಬೋಟ್, ಕೇರಳ
ಅಲ್ಲೆಪ್ಪಿಯ ಹಸಿರು ಹಿನ್ನೀರಿನ ವಿಶಿಷ್ಟವಾದ ಪರಿಸರ ನಡುವೆ ಸಾಂಪ್ರದಾಯಿಕ ಹೌಸ್‌ಬೋಟ್‌ನಲ್ಲಿ ಪ್ರಯಾಣಿಸುವ ಅನುಭವ ಒಂದು ವಿಭಿನ್ನವಾಗಿದೆ. ತೆಂಗಿನ ಮರಗಳು, ಪ್ರಶಾಂತವಾದ ನೀರು ಮತ್ತು ಸುಂದರ ಸೂರ್ಯಾಸ್ತದ ನಡುವೆ ಅಮ್ಮನ ಜೊತೆ ಸಮಯ ಕಳೆಯಬಹುದು. ಹೌಸ್‌ಬೋಟ್‌ನಲ್ಲೇ ಸಿಗುವ ಕೇರಳದ ಸಾಂಪ್ರದಾಯಿಕ ಊಟ ಈ ಅನುಭವಕ್ಕೆ ಮತ್ತಷ್ಟು ಮೆರಗು ನೀಡುತ್ತದೆ.

4.ತಾಜ್ ಮಹಲ್ ಸೂರ್ಯೋದಯ, ಆಗ್ರಾ
ಸೂರ್ಯೋದಯದ ಹೊತ್ತಿನಲ್ಲಿ ತಾಜ್ ಮಹಲ್ ನೋಡುವುದು ಒಂದು ಮರೆಯಲಾಗದ ಒಂದು ಅದ್ಬುತವಾದ ಅನುಭವ. ಬಿಳಿ ಮಾರ್ಬಲ್ ಮೇಲಿನ ಸೂರ್ಯಕಿರಣಗಳ ಹೊಳಪು ಮನಸೆಳೆಯುತ್ತದೆ. ಪ್ರೀತಿ ಮತ್ತು ಇತಿಹಾಸದ ಪ್ರತೀಕವಾಗಿರುವ ತಾಜ್ ಮಹಲ್ ಅನ್ನು ಅಮ್ಮನ ಜೊತೆ ಭೇಟಿ ನೀಡುವುದು ವಿಶೇಷ ನೆನಪಾಗಿ ಉಳಿಯುತ್ತದೆ.
5.ಡಾರ್ಜಿಲಿಂಗ್ ಟೀ ಗಾರ್ಡನ್, ಪಶ್ಚಿಮ ಬಂಗಾಳ
ಡಾರ್ಜಿಲಿಂಗ್ ಟೀ ಗಾರ್ಡನ್ ಪಶ್ಚಿಮ ಬಂಗಾಳದ ಹಿಮಾಲಯದ ತಪ್ಪಲಿನಲ್ಲಿರುವ ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಮಂಜಿನಿಂದ ಆವೃತವಾದ ಪರ್ವತಗಳ ನಡುವೆ ಹರಡಿರುವ ಚಹಾ ತೋಟಗಳಲ್ಲಿ ಅಮ್ಮನ ಜೊತೆ ಸಮಯವನ್ನು ಕಳೆಯಬಹುದು. ತಾಜಾ ಚಹಾ ಸವಿಯುತ್ತಾ ಶಾಂತವಾದ ವಾತಾವರಣದಲ್ಲಿ ವಿಶ್ರಾಂತಿ ಪಡೆಯಬಹುದು. ಟಾಯ್ ಟ್ರೈನ್ ಪ್ರಯಾಣವೂ ಡಾರ್ಜಿಲಿಂಗ್‌ನಿಂದ ಘುಮ್ (Ghoom) ವರೆಗಿನ 2 ಗಂಟೆಗಳ 'ಜಾಯ್ ರೈಡ್' (Joy Ride) ಅತ್ಯಂತ ಜನಪ್ರಿಯವಾಗಿದೆ.














Click it and Unblock the Notifications