Viral Video: ಬೆಂಗಳೂರಿನಲ್ಲಿ ಬರೀ 15 ಸಾವಿರ ರೂ.ಗೆ ಜೀವನ: ಯುವತಿಯ ಬಜೆಟ್ ಪ್ಲಾನ್ ನೋಡಿ ನೆಟ್ಟಿಗರು ಫಿದಾ

ಬೆಂಗಳೂರಿನಂತಹ ಐಟಿ ಸಿಟಿಯಲ್ಲಿ ಜೀವನ ಮಾಡುವುದು ಎಂದರೆ ಸುಲಭದ ಮಾತಲ್ಲ. ಇಲ್ಲಿನ ಮನೆ ಬಾಡಿಗೆ, ದಿನಸಿ, ಓಡಾಟ ಸೇರಿದಂತೆ ಪ್ರತಿಯೊಂದಕ್ಕೂ ಸಾಕಷ್ಟು ಹಣ ಬೇಕಾಗುತ್ತದೆ. ತಿಂಗಳಿಗೆ ಲಕ್ಷ ರೂಪಾಯಿ ಸಂಪಾದನೆ ಮಾಡಿದರೂ ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಕಷ್ಟ ಎನ್ನುವವರಿದ್ದಾರೆ. ಆದರೆ, ಇಲ್ಲೊಬ್ಬ ಯುವತಿ ಕೇವಲ 15,000 ರೂಪಾಯಿಗಳಲ್ಲಿ ಬೆಂಗಳೂರಿನಲ್ಲಿ ತನ್ನ ಇಡೀ ತಿಂಗಳ ಖರ್ಚನ್ನು ನಿಭಾಯಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದು, ನೆಟ್ಟಿಗರು ಅಕ್ಷರಶಃ ದಂಗಾಗಿದ್ದಾರೆ.

ದರ್ಶಿನಿ ಎಂಬ ಯುವತಿಯೇ ಈ ಬಜೆಟ್ ಲೆಕ್ಕಾಚಾರ ನೀಡಿದವರು. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾ, ಬೆಂಗಳೂರಿನಲ್ಲಿ ತಾವು ಹೇಗೆ ಹಣಕಾಸು ನಿರ್ವಹಣೆ ಮಾಡುತ್ತಾರೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಹಲವರ ಹುಬ್ಬೇರುವಂತೆ ಮಾಡಿದೆ.

Bengaluru

'ಇತರರೊಂದಿಗೆ ಹೋಲಿಕೆ ಬೇಡ'

ವಿಡಿಯೋದ ಆರಂಭದಲ್ಲಿಯೇ ಸ್ಪಷ್ಟನೆ ನೀಡಿರುವ ದರ್ಶಿನಿ, "ಈ ವಿಡಿಯೋದಲ್ಲಿ ನಾನು ಬೆಂಗಳೂರಿನಲ್ಲಿರುವ ನನ್ನ ಮಾಸಿಕ ಖರ್ಚುಗಳ ಬಗ್ಗೆ ಹಂಚಿಕೊಳ್ಳುತ್ತಿದ್ದೇನೆ. ಇದು ಎಲ್ಲರಿಗೂ ಅನ್ವಯಿಸುವುದಿಲ್ಲ, ಕೆಲವರಿಗೆ ಇದಕ್ಕಿಂತ ಹೆಚ್ಚು ಖರ್ಚಾಗಬಹುದು, ಇನ್ನು ಕೆಲವರಿಗೆ ಕಡಿಮೆ ಕೂಡ ಆಗಬಹುದು. ಆದ್ದರಿಂದ, ದಯವಿಟ್ಟು ಯಾರು ಕೂಡ ಹೋಲಿಕೆ ಮಾಡಬೇಡಿ; ನಾನು ಕೇವಲ ಒಂದು ಅಂದಾಜು ಚಿತ್ರಣವನ್ನು ನೀಡಲು ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ," ಎಂದು ಹೇಳಿದ್ದಾರೆ.

ಬಾಡಿಗೆ ಮತ್ತು ಊಟದ ಖರ್ಚು ಎಷ್ಟು?

ಬೆಂಗಳೂರಿನಲ್ಲಿ ಬಹುತೇಕರ ಅತಿದೊಡ್ಡ ಖರ್ಚು ಎಂದರೆ ಅದು ಪಿಜಿ ಅಥವಾ ಮನೆ ಬಾಡಿಗೆ. ದರ್ಶಿನಿ ಅವರ ಪ್ರಕಾರ, ಅವರ ಅತಿ ದೊಡ್ಡ ಖರ್ಚು ಕೂಡ ಪಿಜಿ ಬಾಡಿಗೆಯೇ ಆಗಿದೆ. "ನಾನು ಟು ಶೇರಿಂಗ್ ಪಿಜಿ ಕೋಣೆಯಲ್ಲಿದ್ದೇನೆ. ಹೀಗಾಗಿ ತಿಂಗಳಿಗೆ 9,500 ರೂ. ಬಾಡಿಗೆ ಕಟ್ಟುತ್ತೇನೆ. ಬೆಂಗಳೂರಿನ ಬಹುತೇಕ ಪಿಜಿಗಳು ಇದೇ ಬಾಡಿಗೆಯನ್ನು ಹೊಂದಿರುತ್ತವೆ," ಎಂದಿದ್ದಾರೆ.

ಆಹಾರದ ಬಗ್ಗೆ ಮಾತನಾಡಿದ ಅವರು, "ಮಧ್ಯಾಹ್ನದ ಊಟವನ್ನು ನಾನು ಹೆಚ್ಚಾಗಿ ಕಚೇರಿಯಲ್ಲಿಯೇ ಮಾಡುತ್ತೇನೆ. ಪಿಜಿಯಲ್ಲಿ ಊಟ ಅಷ್ಟೊಂದು ಚೆನ್ನಾಗಿರದ ಕಾರಣ ಅಲ್ಲಿಂದ ಒಯ್ಯುವುದಿಲ್ಲ. ಇದಲ್ಲದೆ, ಸಂಜೆ ತಿನ್ನಲು ಸ್ನ್ಯಾಕ್ಸ್ ಮತ್ತು ಕೆಲವೊಮ್ಮೆ ಬೇಯಿಸಿದ ಮೊಟ್ಟೆಗಳನ್ನು ಖರೀದಿಸುತ್ತೇನೆ; ಅದಕ್ಕೆ ಸುಮಾರು 1,000 ರೂ. ಆಗಬಹುದು. ಕಚೇರಿಯ ಊಟ ಮತ್ತು ಹೊರಗಿನ ಊಟ ಎಲ್ಲಾ ಸೇರಿ ತಿಂಗಳಿಗೆ ಸರಿಸುಮಾರು 2,000 ರೂ. ಖರ್ಚಾಗುತ್ತದೆ," ಎಂದು ವಿವರಿಸಿದ್ದಾರೆ.

ವಾರಾಂತ್ಯದ ಪ್ರವಾಸಗಳು ಹಾಗೂ ತಿಂಗಳಿಗೊಮ್ಮೆ ತಮ್ಮ ಊರಿಗೆ ಹೋಗುವ ಖರ್ಚುಗಳನ್ನು ಕೂಡ ದರ್ಶಿನಿ ತಮ್ಮ 15 ಸಾವಿರದ ಬಜೆಟ್‌ನಲ್ಲಿಯೇ ಸೇರಿಸಿದ್ದಾರೆ. "ವೀಕೆಂಡ್‌ಗಳಲ್ಲಿ ಹೊರಗೆ ಸುತ್ತಾಡುವುದು ಮತ್ತು ತಿಂಗಳಿಗೊಮ್ಮೆ ಊರಿಗೆ ಹೋಗುವುದು ಸೇರಿ 3,000 ರೂ. ನಿಂದ ಗರಿಷ್ಠ 4,000 ರೂ. ಬೇಕಾಗಬಹುದು. ಎಲ್ಲವನ್ನೂ ಒಟ್ಟುಗೂಡಿಸಿದರೆ ತಿಂಗಳ ಖರ್ಚು ಗರಿಷ್ಠ 15,000 ರೂ. ತಲುಪುತ್ತದೆ," ಎಂದು ಅವರು ಹೇಳಿದ್ದಾರೆ. ಪ್ರತ್ಯೇಕ ಮನೆ ಮಾಡಿಕೊಂಡವರಿಗೆ ಹಾಗೂ ಬೇರೆ ಬೇರೆ ಜೀವನಶೈಲಿ ಹೊಂದಿರುವವರಿಗೆ ಈ ಖರ್ಚುಗಳು ಹೆಚ್ಚಾಗುತ್ತವೆ ಎಂದೂ ಅವರು ವಾಸ್ತವವನ್ನು ಒಪ್ಪಿಕೊಂಡಿದ್ದಾರೆ.

ಇಂಟರ್ನೆಟ್ ಪ್ರತಿಕ್ರಿಯೆ ಹೇಗಿದೆ?

ಈ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಯುವತಿಯ ಕಡಿಮೆ ಖರ್ಚಿನ ಜೀವನಶೈಲಿಯನ್ನು ನೋಡಿ ಹಲವು ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು "ಇದು ಹೇಗೆ ಸಾಧ್ಯ? ಇದು ತುಂಬಾ ಅಗ್ಗವಾಗಿದೆ," ಎಂದು ಬರೆದುಕೊಂಡಿದ್ದರೆ, ಮತ್ತೊಬ್ಬರು "ವಾಹ್ ಸೂಪರ್ ಬಜೆಟ್," ಎಂದಿದ್ದಾರೆ. ಮೂರನೆಯವರೊಬ್ಬರು, "ಇಂದು ಬಿಜಿಎಂಐ (BGMI) ಗೇಮ್‌ಗೆ 20 ಸಾವಿರ ಖರ್ಚು ಮಾಡಿದ ನಾನು ಮೂಲೆಯಲ್ಲಿ ಕುಳಿತು ನಗುತ್ತಿದ್ದೇನೆ" ಎಂದು ತಮಾಷೆ ಮಾಡಿದ್ದಾರೆ. "ಬೆಂಗಳೂರಿನಲ್ಲಿ 15,000 ರೂ.ನಲ್ಲಿ ಜೀವನ ನಿರ್ವಹಿಸುವುದು ನಿಜಕ್ಕೂ ಪ್ರಭಾವಶಾಲಿ ಸಾಧನೆ" ಎಂದು ಇನ್ನೊಬ್ಬರು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಬೆಂಗಳೂರಿನ ಜೀವನ ವೆಚ್ಚದ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+