ನಮ್ಮ ಮೆಟ್ರೋ ಗುಡ್‌ನ್ಯೂಸ್: ಸಂಚಾರ ವ್ಯತ್ಯಯ ನಿರ್ಧಾರ ವಾಪಾಸ್, ಮೇ 10ಕ್ಕೆ ಬೆಳಗ್ಗೆ 5ರಿಂದಲೇ ರೈಲು ಸೇವೆ

ಬೆಂಗಳೂರು: ಬಹುದಿನಗಳಿಂದ ಭಾನುವಾರ ಬೆಳಗ್ಗೆ 5 ಗಂಟೆಗೆ ಎಲ್ಲ ಮಾರ್ಗಗಳಿಂದಲೂ ನಮ್ಮ ಮೆಟ್ರೋ ಸಂಚಾರ ಆರಂಭವಾಗಬೇಕು ಎಂಬ ಕೂಗು ಕೇಳಿ ಬಂದಿತ್ತು. ಆ ಬೇಡಿಕೆಯು ನಾಳೆ ಮೇ 10ರಂದು ಭಾನುವಾರ ಒಂದು ದಿನ ಈಡೇರಿರುತ್ತಿದೆ. ಮೊದಲು ಇದೇ ಭಾನುವಾರ ಬೆಳಗ್ಗೆ 7ಗಂಟೆಯಿಂದ ತಾತ್ಕಾಲಿಕವಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿತ್ತು. ಅದನ್ನೀಗ ಹಿಂತೆಗೆದುಕೊಂಡ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಬೆಳ್ಳಂಬೆಳಗ್ಗೆ ಮೆಟ್ರೋ ಓಡಿಸಲು ನಿರ್ಧರಿಸಿದೆ.

ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 10ನೇ ಮೇ 2026 ರಂದು ಬೆಳಗ್ಗೆ 5 ಗಂಟೆಯಿಂದಲೇ ಮೂರು ಮಾರ್ಗಗಳಲ್ಲಿ ಮೊದಲ ಮೆಟ್ರೋ ಪ್ರಯಾಣ ಆರಂಭವಾಗಲಿದೆ. ನೇರಳೆ ಮಾರ್ಗದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್‌ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಕುರಿತು ಮೇ 08 ರಂದು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Bengaluru Metro

ನಗರದಲ್ಲಿ ವಿವಿಧ ಕಾರ್ಯಕ್ರಮಗಳು; ಜನ ಸಂಚಾರ ಹೆಚ್ಚಳ

ಭಾನುವಾರ ಮೇ 10ರಂದು ನಗರದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಮತ್ತು ಅನುಕೂಲಕರ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ನಾಳೆ ಭಾನುವಾರ ಬೆಳಿಗ್ಗೆ 05 ಗಂಟೆಯಿಂದಲೇ ಮೆಟ್ರೋ ರೈಲು ಸೇವೆಗಳನ್ನು ಪ್ರಾರಂಭಿಸಲು ತೀರ್ಮಾನಿಸಿದೆ ಎಂದರು.

Namma Metro: ನಾಳೆ ಭಾನುವಾರ ಬೆಳಗ್ಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ, ಎಲ್ಲೆಲ್ಲಿ?
Namma Metro: ನಾಳೆ ಭಾನುವಾರ ಬೆಳಗ್ಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ವ್ಯತ್ಯಯ, ಎಲ್ಲೆಲ್ಲಿ?

ಈ ನಿರ್ಧಾರದಂತೆ ನೇರಳೆ, ಹಸಿರು ಹಾಗೂ ಹಳದಿ ಮೆಟ್ರೋ ಮಾರ್ಗಗಳ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಮೆಟ್ರೋ ಸೇವೆಗಳು ಬೆಳಿಗ್ಗೆ 05 ಗಂಟೆಯಿಂದ ಸಾಮಾನ್ಯ ವೇಳಾಪಟ್ಟಿಯಂತೆ ಕಾರ್ಯ ನಿರ್ವಹಿಸಲಿವೆ. ಪ್ರಯಾಣಿಕರು ಪರಿಷ್ಕೃತ ಕಾರ್ಯಾಚರಣೆ ವೇಳೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್‍‌ಸಿಎಲ್ ತಿಳಿಸಿದೆ.

ಪ್ರಧಾನಿ ಮೋದಿ ಆಗಮನ: ಪ್ರಯಾಣಿಕರಿಗೆ 5ಕ್ಕೆ ಮೆಟ್ರೋ ಸೇವೆ

ತುರ್ತು ನಿರ್ವಹಣೆ ಕೈಗೊಳ್ಳಲಿರುವ ಪ್ರಯುಕ್ತ ನೇರಳೆ ಮಾರ್ಗದ ಹೊಸಹಳ್ಳಿ-ಕಬ್ಬನ್ ಪಾರ್ಕ್ ನಿಲ್ದಾಣ ಮಧ್ಯೆ ಮೆಟ್ರೋ ತಾತ್ಕಾಲಿಕವಾಗಿ ಸಂಚರಿಸುವುದಿಲ್ಲ. 9 ಗಂಟೆ ಬಳಿಕ ಎಂದಿನಂತೆ ಪುನಃ ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿತ್ತು. ಅಲ್ಲದೇ ಪ್ರತಿ ಭಾನುವಾರ ಬೆಳಗ್ಗೆ ಬೇಗ ಮೆಟ್ರೋ ಆರಂಭಿಸುವಂತೆ ಸಾಕಷ್ಟು ಬೇಡಿಕೆ ಇತ್ತು. ಈ ಬಗ್ಗೆ ಬಿಎಂಆರ್‍‌ಸಿಎಲ್ ತಲೆ ಕೆಡಿಸಿಕೊಂಡಿಲ್ಲ. ಇನ್ನೂ ಮೇ 10ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಇದು ಸೇರಿದಂತೆ ವಿವಿಧೆಡೆ ಕೆಲವು ಕಾರ್ಯಕ್ರಮಗಳಿದ್ದು, ಜನ ಸಂಚಾರ ಹೆಚ್ಚಿರಲಿದೆ. ಈ ವೇಳೆ ಸಂಚಾರ ಸ್ಥಗಿತವಾದರೆ ಜನರಿಗೆ ತೊಂದರೆ ಆಗುವ ಜೊತೆಗೆ ಆದಾಯಕ್ಕೂ ಹೊಡೆತ ಬೀಳಲಿದೆ. ಈ ಸಂಬಂಧ ತುರ್ತು ನಿರ್ವಹಣೆ ಕೆಲಸ ಮುಂದೂಡಿ ಮೆಟ್ರೋ ಸಂಚಾರ ಬೇಗ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+