• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಆರ್ಥಿಕತೆ ಯಥಾಸ್ಥಿತಿಗೆ ಮರುಳಲು ಕಾರಣ ತಿಳಿಸಿದ ಮೋದಿ

|

ನವದೆಹಲಿ, ಜೂನ್.16: ನೊವೆಲ್ ಕೊರೊನಾ ವೈರಸ್ ಭೀತಿ ನಡುವೆಯೂ ಭಾರತದಲ್ಲಿ ಆರ್ಥಿಕ ಚಟುವಟಿಕೆ ಚುರುಕುಗೊಂಡಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. 21 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ ನಂತರ ದೇಶವನ್ನು ಉದ್ದೇಶಿಸಿ ಮೋದಿ ಮಾತನಾಡಿದರು.

   ಕೆ ಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು | KL Rahul | Oneindia Kanada

   ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಒಬ್ಬರೇ ಒಬ್ಬರು ಪ್ರಾಣ ಬಿಟ್ಟರೂ ಅದು ದುಃಖದಾಯಕವಾಗಿದೆ. ವಿದೇಶಗಳಿಗೆ ಹೋಲಿಸಿ ನೋಡಿದಾಗ ದೇಶದಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟವರ ಪ್ರಮಾಣ ತೀರಾ ಕಡಿಮೆಯಾಗಿದೆ.

   ಕೊವಿಡ್-19 ಕಂಟಕ: ಕುತೂಹಲ ಕೆರಳಿಸಿದ ಪ್ರಧಾನಿ ವಿಡಿಯೋ ಸಂವಾದ

   ಕೊರೊನಾ ವೈರಸ್ ವಿರುದ್ಧ ಭಾರತವು ಸಮರ್ಥವಾಗಿ ಹೋರಾಡುತ್ತಿದೆ. ಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಪ್ರತಿಯೊಬ್ಬ ಭಾರತೀಯರೂ ಕೈಜೋಡಿಸಬೇಕು. ಮನೆಯಿಂದ ಹೊರಡುವಾಗಲೇ ಮಾಸ್ಕ್ ಧರಿಸದೇ ಹೊರಗಡೆ ಓಡಾಡುವ ಕಲ್ಪನೆಯನ್ನೂ ಮಾಡಿಕೊಳ್ಳಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

   ಭಾರತದ ಆರ್ಥಿಕತೆ ಪುನಶ್ಚೇತನ:

   ಕೊರೊನಾ ವೈರಸ್ ಭೀತಿ ನಡುವೆ ಭಾರತದ ಆರ್ಥಿಕತೆ ಪುನಶ್ಚೇತನಗೊಂಡಿದೆ. ದೇಶದಲ್ಲಿನ ಕೃಷಿ, ಹೈನುಗಾರಿಕೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ದೇಶದ ರಫ್ತು ಪ್ರಮಾಣ ಮೊದಲಿನಂತಾಗಿದ್ದು, ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿರುವುದಕ್ಕೆ ಇದೊಂದು ಸಾಕ್ಷಿಯಾಗುತ್ತದೆ. ಅಲ್ಲದೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ಸಿಕ್ಕರೆ ಉದ್ಯೋಗ ಸೃಷ್ಟಿಯಾಗಲಿದೆ. ಡಿಜಿಟಲ್ ಪೇಮೆಂಟ್ ವ್ಯವಸ್ಥೆಯು ಯಥಾಸ್ಥಿತಿಯತ್ತ ಮರಳುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

   ಮೊದಲ ಹಂತದಲ್ಲಿ ಜೂನ್.16ರ ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್, ಜಾರ್ಖಂಡ್, ಛತ್ತೀಸ್ ಗಢ್, ತ್ರಿಪುರಾ, ಹಿಮಾಚಲ ಪ್ರದೇಶ, ಚಂಡೀಗರ್, ಗೋವಾ, ಅಸ್ಸಾಂ, ಕೇರಳ, ಉತ್ತರಾಖಂಡ್, ಮಣಿಪುರ, ಲಡಾಖ್, ಪುದುಚೇರಿ, ಅರುಣಾಚಲ ಪ್ರದೇಶ, ಮೇಘಾಲಯ, ಮೀಜೋರಾಂ, ದಾದರ್ ನಗರ್, ಹವೇಲಿ ದಿಯು ಮತ್ತು ದಮನ್, ಸಿಕ್ಕಿಂ, ಲಕ್ಷದ್ವೀಪ ರಾಜ್ಯಗಳ ಸಿಎಂ ಹಾಗೂ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಚರ್ಚೆ ನಡೆಸಲಿದ್ದಾರೆ.

   English summary
   How India Recovered From Coronavirus And Lockdown; PM Modi Says.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X