ಮುಸ್ಲೀಮರಿಗೆ ಏಕೆ ಜಮೀನು? ಅಯೋಧ್ಯೆ ತೀರ್ಪು ಪ್ರಶ್ನಿಸಿ ಹಿಂದೂ ಮಹಾಸಭಾ ಅರ್ಜಿ

ನವದೆಹಲಿ, ಡಿಸೆಂಬರ್ 06: ಅಯೋಧ್ಯೆ ತೀರ್ಪಿನ ಬಗ್ಗೆ ಬಹುತೇಕ ಹಿಂದೂ ಸಂಘಟನೆಗಳು ಸಂತಸ ವ್ಯಕ್ತಪಡಿಸಿವೆ. ಆದರೆ ಹಿಂದೂ ಮಹಾಸಭಾ ಅಯೋಧ್ಯೆ ತೀರ್ಪಿನ ಕುರಿತು ಪುನರ್‌ವಿಮರ್ಶನಾ ಅರ್ಜಿಯನ್ನು ಸಲ್ಲಿಸಲಿದೆ.

ಮುಂದಿನ ವಾರ ಈ ಅರ್ಜಿಯನ್ನು ಸಲ್ಲಿಸಲಿದ್ದು, ಮುಸ್ಲೀಮರಿಗೆ ಐದು ಎಕರೆ ಜಮೀನು ಕೊಟ್ಟ ವಿಚಾರವನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗುತ್ತಿದೆ.

ಹಿಂದೂ ಮಹಾಸಭಾನಲ್ಲಿ ಎರಡು ಗುಂಪುಗಳಿದ್ದು, ಒಂದನ್ನು ಸ್ವಾಮಿ ಚಕ್ರಪಾಣಿ ಮತ್ತೊಂದನ್ನು ಶಿಶಿರ್ ಚತುರ್ವೇದಿ ಮುನ್ನಡೆಸುತ್ತಿದ್ದಾರೆ. ತೀರ್ಪು ಪ್ರಶ್ನಿಸಿ ಅರ್ಜಿಯನ್ನು ಶಿಶಿರ್ ಚತುರ್ವೇದಿ ಸಲ್ಲಿಸಲು ಮುಂದಾಗಿದ್ದಾರೆ. ಹಿಂದೂ ಸಂಘಟನೆ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಮಂಗಳವಾರ ಅರ್ಜಿ ಸಲ್ಲಿಸಲಿದ್ದಾರೆ.

Hindu Mahasabha To Be File Review Plea About Ayodhya Verdict

ಹಿಂದೂಗಳಿಗೆ ಅಯೋಧ್ಯೆ ಭೂಮಿ ಸಿಗಬೇಕು ಎಂಬುದು ತೀರ್ಪಾಗಿದ್ದಾಗ, ಮುಸ್ಲೀಮರಿಗೆ ಐದು ಎಕರೆ ಜಮೀನು ಕೊಟ್ಟಿದ್ದು ಏಕೆ ಎಂಬುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.

ಮಸೀದಿಯ ಭಾಗವನ್ನು ಕೆಡವಿರುವ ಬಗ್ಗೆ ವಿಚಾರಣೆ ಮುಂದುವರೆಸಿರುವ ಬಗ್ಗೆ ತಕರಾರು ತೆಗೆದಿರುವ ಹಿಂದೂಮಹಾಸಭಾ ಈ ಬಗ್ಗೆಯೂ ಅರ್ಜಿಯಲ್ಲಿ ಪ್ರಶ್ನೆ ಮಾಡಲಿದೆ.

ಸುಪ್ರೀಂತೀರ್ಪಿನ ಪ್ರಕಾರ ಅಯೋಧ್ಯೆಯು ರಾಮನ ಜನ್ಮ ಭೂಮಿ ಎಂದು ತೀರ್ಮಾನಿಸಿ ಭೂಮಿಯನ್ನು ಮಂದಿರವನ್ನು ನೀಡಲಾಗಿದೆ. ಇದನ್ನು ಐತಿಹಾಸಿಕ ತೀರ್ಪು ಎಂದು ಬಣ್ಣಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+