• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಮ್ಮ ಶ್ವಾಸಕೋಶದ ಸಾಮರ್ಥ್ಯ ಪರೀಕ್ಷಿಸಲು ಸುಲಭ ಮಾರ್ಗ ಇಲ್ಲಿದೆ

|

ನವದೆಹಲಿ, ಮೇ 17: ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಪರೀಕ್ಷಿಸಲು ತ್ವರಿತ ಹಾಗೂ ಸುಲಭದ ಮಾರ್ಗ ಇಲ್ಲಿದೆ.

ಜೈಡಸ್ ಆಸ್ಪತ್ರೆಯು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನೀವು ಸ್ಪಿನ್‌ಗಳ ಸಂಖ್ಯೆಯನ್ನು ಎಣಿಸುವಾಗ ನಿಮ್ಮ ಉಸಿರನ್ನು ಬಿಗಿಹಿಡಿದುಕೊಳ್ಳಬೇಕು.

ಹಾಗೂ ಕೆಂಪು ಬಾಲ್ ಸ್ಪಿನ್ ಆಗುವುದನ್ನು ನೋಡಿ, ನಿಮ್ಮ ಉಸಿರಾಟವನ್ನು ಎಷ್ಟು ಸಮಯದವರೆಗೆ ಹಿಡಿದಿಟ್ಟುಕೊಳ್ಳುತ್ತೀರೋ ನಿಮ್ಮ ಶ್ವಾಸಕೋಶದ ಆರೋಗ್ಯ ಅಷ್ಟು ಉತ್ತಮವಾಗಿದೆ ಎಂದರ್ಥ.

ಜೈಡಸ್ ಆಸ್ಪತ್ರೆಯಲ್ಲಿ ವರ್ಲ್ಡ್ ಕ್ಲಾಸ್ ಲಿವರ್ ಕೇರ್ ಫೆಸಿಲಿಟಿಯೂ ಕೂಡ ಇದೆ. ಕೊರೊನಾ ಸೋಂಕಿಗೆ ಒಳಗಾದವರಿಗೆ ಮೊದಲು ಕಾಡುವುದೇ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೀಗಾಗಿ ಈ ವಿಡಿಯೋ ನಿಮಗೆ ಸಹಾಯಕವೆನಿಸಬಹುದು.

ಕೋವಿಡ್ 2ನೇ ಅಲೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಒಂದು ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಒಂದು ವಾರದಲ್ಲಿ 28 ಸಾವಿರ ಜನರು ಮೃತಪಟ್ಟಿದ್ದಾರೆ.

ಭಾನುವಾರದ ತನಕ ದೇಶದಲ್ಲಿ 24 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಹೊಸ ಪ್ರಕರಣಗಳಲ್ಲಿ ಶೇ 16ರಷ್ಟು ಕಡಿಮೆಯಾಗಿದೆ. ಕಳೆದ ವಾರ ಹೊಸ ಪ್ರಕರಣಗಳ ಸಂಖ್ಯೆ 27.4 ಲಕ್ಷ ಆಗಿತ್ತು.

ಭಾರತ; ಒಂದು ವಾರದಲ್ಲಿ ಹೊಸ ಪ್ರಕರಣ ಇಳಿಕೆ, ಸಾವು ಹೆಚ್ಚಳಭಾರತ; ಒಂದು ವಾರದಲ್ಲಿ ಹೊಸ ಪ್ರಕರಣ ಇಳಿಕೆ, ಸಾವು ಹೆಚ್ಚಳ

ಆದರೆ ಪ್ರತಿದಿನ ಸುಮಾರು 4048 ಜನರು ಮೃತಪಟ್ಟಿದ್ದು ಒಂದು ವಾರದಲ್ಲಿ 28,334 ಜನರು ಸಾವನ್ನಪ್ಪಿದ್ದಾರೆ. ಕಳೆದ ವಾರ 27,243 ಜನರು ಮೃತಪಟ್ಟಿದ್ದರು. ಇದಕ್ಕೆ ಹೋಲಿಕೆ ಮಾಡಿದರೆ ಸಾವಿನ ಸಂಖ್ಯೆ ಹೆಚ್ಚಳವಾಗಿದೆ.

English summary
Here is a quick and easy way to test the capacity of your lungs. Hold your breath and watch the red ball spin while you count the number of spins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X