ಪತಿ ಸೋಮನಾಥ್ ಕಿರುಕುಳದ ಕಥೆ ಬಿಚ್ಚಿಟ್ಟ ಲಿಪಿಕಾ
ನವದೆಹಲಿ, ಜೂ.16: ಎಎಪಿ ಶಾಸಕ, ಮಾಜಿ ಕಾನೂನು ಸಚಿವ ಸೋಮನಾಥ ಭಾರ್ತಿ ಅವರು ಹೇಗೆಲ್ಲಾ ಹಿಂಸೆ ನೀಡುತ್ತಿದ್ದರು ಎಂಬ ವಿವರಗಳನ್ನು ಅವರ ಪತ್ನಿ ಲಿಪಿಕಾ ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಜೂ.10ರಂದು ದೆಹಲಿಯ ಮಹಿಳಾ ಆಯೋಗಕ್ಕೆ ನೀಡಿದ್ದ ದೂರಿನಲ್ಲಿ ಪತಿ ನೀಡಿದ ಕಿರುಕುಳದ ಜೊತೆಗೆ ಅತ್ತೆ ನೀಡುತ್ತಿದ್ದ ದೌರ್ಜನ್ಯವನ್ನೂ ಅವರು ಉಲ್ಲೇಖಿಸಿದ್ದಾರೆ. ಮಕ್ಕಳ ಮುಂದೆ ನನಗೆ ಸಾಯುವಂತೆ ಹೊಡೆಯುತ್ತಿದ್ದ ಎಂದು ಭಾರ್ತಿ ವಿರುದ್ಧ ಲಿಪಿಕಾ ಮಿತ್ರ ಆರೋಪಿಸಿದ್ದಾರೆ.

ಲಿಪಿಕಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರ್ತಿ ಅವರ ತಾಯಿ, ನನ್ನಿಂದಾಗಿ ನನ್ನ ಸೊಸೆಯು ಪುತ್ರನ ಜೊತೆ ದಾಂಪತ್ಯ ಜೀವನ ನಡೆಸುತ್ತಿಲ್ಲ ಎಂಬ ವಿಚಾರ ತಿಳಿದು ನನಗೆ ನೋವಾಗಿದೆ. ನನ್ನ ಪುತ್ರನ ಜೊತೆ ಸೊಸೆಯು ಸಂತೋಷದಿಂದ ಬದುಕುವುದಾದರೆ ನಾನು ವೃದ್ಧಾಶ್ರಮಕ್ಕೆ ಹೋಗಲು ಸಿದ್ಧ ಎಂದು 70 ವರ್ಷದ ಮನೋರಮಾ ರಾಣಿ ಭಾರ್ತಿ ಹೇಳಿದ್ದಾರೆ.
Why Barkha Singh didn't meet old helpless mother of Somnath Bharti? Is she paid to harass those with AAP?
#ModiGate pic.twitter.com/mM9qUsN6ni
— Kiran Kumar (@Yr_Conscience) June 16, 2015 ಭಾರ್ತಿ ತಾಯಿಯನ್ನು ತಾನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ ಎಂಬ ಆರೋಪಗಳನ್ನು ಅಲ್ಲಗೆಳೆದ ಲಿಪಿಕಾ, ಅವರ(ಭಾರ್ತಿ) ತಾಯಿಯು ಆಕೆಯ ಮನೆಗೆ ನಾನು ಪ್ರವೇಶಿಸುವುದನ್ನೇ ನಿರಾಕರಿಸಿರುವಾಗ ತಾಯಿಯ ಜೊತೆಗೆ ಬದುಕಲು ನಾನು ಬಯಸಿರಲಿಲ್ಲ ಎಂಬ ಟೀಕೆಯಾದರೂ ಎಲ್ಲಿಂದ ಬರುತ್ತದೆ? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications