ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಜೊತೆ ದೇವೇಗೌಡರ ಚಾಯ್ ಪೇ ಚರ್ಚಾ

|
Google Oneindia Kannada News

ಬೆಂಗಳೂರು, ಜೂ. 04 : ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬುಧವಾರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೃಷಿಕರನ್ನು ಕಡೆಗಣಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಭರವಸೆ ನೀಡಿದ್ದಾರೆ.

ಬುಧವಾರ ಸಂಜೆ ನವದೆಹಲಿಯ 7 ರೇಸ್‌ಕೋರ್ಸ್ ರಸ್ತೆಯ ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿದ ದೇವೇಗೌಡರು ಮೋದಿ ಅವರನ್ನು ಭೇಟಿ ಮಾಡಿದರು. ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಗೆ ಆಹ್ವಾನಿಸಿದ್ದ ಮೋದಿ, ದೇವೇಗೌಡರನ್ನು ಆಹ್ವಾನಿಸಿದ್ದರು. [ದೇವೇಗೌಡರನ್ನು ಮಾತುಕತೆಗೆ ಆಹ್ವಾನಿಸಿದ ಮೋದಿ]

deve gowda, narendra modi

ಭೇಟಿಯ ಸಂದರ್ಭದಲ್ಲಿ 'ಕೃಷಿ ಕ್ಷೇತ್ರ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಪ್ರಸ್ತಾಪಿಸಿದ್ದೇನೆ. ರೈತರ ಬಗ್ಗೆ ಕಾಳಜಿಯಿರುವುದಾಗಿ ಕೃಷಿಕರನ್ನು ಕಡೆಗಣಿಸುವುದಿಲ್ಲ ಎಂದು ಮೋದಿ ಭರವಸೆ ನೀಡಿದ್ದಾರೆ' ಎಂದು ಭೇಟಿಯ ನಂತರ ದೇವೇಗೌಡರು ಮಾಧ್ಯಮಗಳಿಗೆ ತಿಳಿಸಿದ್ದಾರೆ. [ಮೋದಿ ಮೋಡಿ: ದೊಡ್ಡಗೌಡ್ರ ಹೃದಯ ಗೆದ್ದ ಮೋದಿ]

ಮೋದಿ ಅವರ ಜೊತೆ ದೇವೇಗೌಡರು ಭೂಸ್ವಾಧೀನ ಕಾಯ್ದೆಯ ಬಗ್ಗೆ, ಕರ್ನಾಟಕದಲ್ಲಿ ನೈಸ್ ರಸ್ತೆ ನಿರ್ಮಾಣಕ್ಕೆ ರೈತರ ಭೂಮಿ ಕಬಳಿಕೆ ಮಾಡಿದ ಹಗರಣದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. [ಮೋದಿಗೆ ದೇವೇಗೌಡರು ಪತ್ರ ಬರೆದಿದ್ದೇಕೆ?]

ಭೂಸ್ವಾಧೀನ ಕಾಯ್ದೆ ಬಗ್ಗೆ ಸದ್ಯಕ್ಕೆ ಜೆಡಿಎಸ್ ಪಕ್ಷ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಸಂಸತ್ ಜಂಟಿ ಸದನದ ತಿರ್ಮಾನದ ನಂತರ ಜೆಡಿಎಸ್ ಪಕ್ಷದ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಪ್ರಧಾನಿ ಮೋದಿ ಭೇಟಿ ತೃಪಿಕರವಾಗಿತ್ತು ಎಂದು ದೇವೇಗೌಡರು ತಿಳಿಸಿದ್ದಾರೆ.

English summary
Former prime minister HD Deve Gowda met Prime Minister Narendra Modi at his official residence 7 Race Course Road in New Delhi on Wednesday, June 3, 2015 evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X