ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ 50 ವರ್ಷ ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಿರಲಿ ಎಂದ ಬಿಜೆಪಿ ನಾಯಕ

By ಅನಿಲ್ ಆಚಾರ್
|
Google Oneindia Kannada News

Recommended Video

ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತು ಅಚ್ಚರಿ ಮೂಡಿಸಿದ ಬಿಜೆಪಿ..? | Oneindia kannada

ನವದೆಹಲಿ, ಮೇ 28: ರಾಹುಲ್ ಗಾಂಧಿ ಅಧಿಕಾರದಲ್ಲಿ ಮುಂದುವರಿಯುವುದು ಒಳ್ಳೆಯದು ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ಸಲ ಒಳ್ಳೆಯದು ಅಂತ ಹೇಳಿರುವುದು ಬಿಜೆಪಿಗೆ ಹಾಗೂ ಆ ಹೇಳಿಕೆ ನೀಡಿರುವುದು ಬಿಜೆಪಿಯ ಹಿಮಂತ ಬಿಸ್ವಾ ಸರ್ಮಾ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆಟ್ಟ ಪ್ರದರ್ಶನದ ನಂತರ ಸ್ವತಃ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಅದಕ್ಕೆ ಯುಪಿಎ ಮಿತ್ರ ಪಕ್ಷಗಳು ಒಪ್ಪುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಸರ್ಮಾ ವ್ಯಂಗ್ಯವಾಡಿದ್ದಾರೆ. ಇನ್ನೂ ಮುಂದುವರಿದು, ಸಕ್ರಿಯವಾಗಿರುವ ವಿರೋಧ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯ ಅಗತ್ಯ ಎಂದು ಕೂಡ ಹೇಳಿದ್ದಾರೆ.

ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷ, CWC ಸಭೆ ಇಲ್ಲ ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷ, CWC ಸಭೆ ಇಲ್ಲ

ಒಂದು ವೇಳೆ ರಾಹುಲ್ ಗಾಂಧಿಯೇ ಮುಂದುವರಿದರೆ ವಿರೋಧ ಪಕ್ಷಗಳಿಗೆ ಯಾವ ಭರವಸೆಯೂ ಉಳಿಯುವುದಿಲ್ಲ. ಬಿಜೆಪಿ ದೃಷ್ಟಿಕೋನದಿಂದ ಹೇಳಬೇಕು ಅಂದರೆ, ಇನ್ನೂ ಐವತ್ತು ವರ್ಷ ರಾಹುಲ್ ಗಾಂಧಿ ಅಧ್ಯಕ್ಷರಾಗಿ ಮುಂದುವರಿದರೆ ನಾವು ಖುಷಿಯಾಗಿರುತ್ತೇವೆ ಎಂದು ಹೇಳಿದ್ದಾರೆ. ಸರ್ಮಾ ಹದಿನಾಲ್ಕು ವರ್ಷ ಕಾಂಗ್ರೆಸ್ ನಲ್ಲೇ ಇದ್ದು, ನಾಲ್ಕು ವರ್ಷದ ಹಿಂದಷ್ಟೇ ಬಿಜೆಪಿ ಸೇರಿದ್ದಾರೆ.

ಅಂದಹಾಗೆ ಹಿಮಂತ್ ಈಶಾನ್ಯದ ಏಳು ರಾಜ್ಯಗಳಲ್ಲಿ ಬಿಜೆಪಿಗೆ ನೆಲೆಯೂರಲು ತಂತ್ರ ಹೆಣೆದವರು. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಕೂಟ ವಿಪಕ್ಷ ಕಾಂಗ್ರೆಸ್ ಗಿಂತ ಮುಂದಿದೆ. ಜೂನ್ ನಲ್ಲಿ ರಾಜ್ಯಸಭೆಗೆ ಎರಡು ಸ್ಥಾನಗಳು ಇಲ್ಲಿಂದ ತೆರವಾಗಲಿದೆ. ಅದರಲ್ಲಿ ಒಂದು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರದು. ಇಲ್ಲಿ ಎರಡೂ ಸ್ಥಾನವನ್ನು ಗೆಲ್ಲುವ ಭರವಸೆಯಲ್ಲಿ ಬಿಜೆಪಿ ಇದೆ. ಅಗತ್ಯ ಸಂಖ್ಯೆ ಇಲ್ಲದ ಕಾರಣ ಕಾಂಗ್ರೆಸ್ ನಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ಅನುಮಾನ.

English summary
Happy to see Rahul Gandhi as Congress president next 50 years also, said BJP leader Himanta Biswa Sarma on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X