• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಷ್ಮಾರನ್ನು ಭೇಟಿಯಾದ ಪಾಕ್ ರಿಟರ್ನ್ಡ್ ಹಮೀದ್ ಅನ್ಸಾರಿ

|

ನವದೆಹಲಿ, ಡಿಸೆಂಬರ್ 19: ಪಾಕಿಸ್ತಾನ ಜೈಲಿಂದ ಬಿಡುಗಡೆಯಾಗಿ ಮಂಗಳವಾರ ಭಾರತಕ್ಕೆ ಹಿಂತಿರುಗಿದ ಮುಂಬೈ ಮೂಲದ ಹಮೀದ್ ಅನ್ಸಾರಿ, ಬುಧವಾರದಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ದೆಹಲಿಯಲ್ಲಿ ಭೇಟಿ ಆಗಿದ್ದಾರೆ. ಈ ವೇಳೆ ಅನ್ಸಾರಿಯ ತಾಯಿ ಫೌಜಿಯಾ, ತಂದೆ ನೆಹಾಲ್ ಕೂಡ ಇದ್ದರು.

ಈ ಸಂದರ್ಭದಲ್ಲಿ ಅನ್ಸಾರಿ ತಾಯಿ ಫೌಜಿಯಾ ಮಾತನಾಡಿ, ಮೇರಾ ಭಾರತ್ ಮಹಾನ್, ಮೇರಿ ಮೇಡಮ್ ಮಹಾನ್, ಸಬ್ ಮೇಡಮ್ ನೇ ಹಿ ಕಿಯಾ ಹೇ" (ನನ್ನ ಭಾರತ ಮಹಾನ್, ನನ್ನ ಮೇಡಂ ಮಹಾನ್, ಎಲ್ಲವೂ ಮೇಡಮ್ ರೇ ಮಾಡಿದ್ದಾರೆ) ಎಂದು ಹೇಳಿದ್ದಾರೆ.

6 ವರ್ಷಗಳ ನಂತರ ಪಾಕ್ ಜೈಲಿಂದ ಬಿಡುಗಡೆಯಾದ ಮುಂಬೈ ಎಂಜಿನಿಯರ್

ಆರು ವರ್ಷಗಳ ಹಿಂದೆ ತನ್ನ ಗೆಳತಿಯ ಮದುವೆ ತಪ್ಪಿಸುವ ಸಲುವಾಗಿ ಅಫ್ಘಾನಿಸ್ತಾನ ಮಾರ್ಗವಾಗಿ ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದ್ದರು ಅನ್ಸಾರಿ. ಅವರ ಬಳಿ ನಕಲಿ ಗುರುತಿನ ಚೀಟಿ ಪತ್ತೆಯಾಗಿತ್ತು. ಗೂಢಚಾರಿಕೆ ಸೇರಿದಂತೆ ಇತರ ಆರೋಪಗಳನ್ನು ಹೊರಿಸಿ, ಬಂಧಿಸಿ, ಮೂರು ವರ್ಷದ ಶಿಕ್ಷೆ ವಿಧಿಸಲಾಗಿತ್ತು.

ಆ ಶಿಕ್ಷೆಯನ್ನು ಪೂರೈಸಿದ ನಂತರ ಡಿಸೆಂಬರ್ ಹದಿನೈದನೇ ತಾರೀಕು ಅನ್ಸಾರಿಯನ್ನು ಬಿಡುಗಡೆ ಮಾಡಲಾಗಿತ್ತು. ಆ ನಂತರ ಕಾನೂನು ಪ್ರಕ್ರಿಯೆ ಪೂರೈಸಲು ಸಮಯ ಹಿಡಿದಿತ್ತು. ಮಂಗಳವಾರದಂದು ವಾಘಾ ಗಡಿ ಮೂಲಕ ಅನ್ಸಾರಿ ಭಾರತಕ್ಕೆ ವಾಪಸಾಗಿದ್ದರು. ಇಂದು ದೆಹಲಿಯಲ್ಲಿ ಸುಷ್ಮಾ ಸ್ವರಾಜ್ ರನ್ನು ಭೇಟಿ ಆದರು.

English summary
Indian National Hamid Ansari who came to India after being released from a Pakistan jail Tuesday, meets External Affairs Minister Sushma Swaraj in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X