ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Election Result 2022 : ಪಟಾಕಿ, ಸಿಹಿ ತಿನಿಸು ಜೊತೆ ಸಂಭ್ರಮಾಚರಣೆಗೆ ಸಿದ್ಧವಾದ ಬಿಜೆಪಿ

|
Google Oneindia Kannada News

ಗಾಂಧಿನಗರ, ಡಿಸೆಂಬರ್ 8: ಗುಜರಾತ್ ವಿಧಾನಸಭೆ ಮತೆಎಣಿಕೆ ಬೆನ್ನಲ್ಲೇ ಭಾರಿ ಜಯದತ್ತ ಮುನ್ನುಗ್ಗುತ್ತಿರುವ ಬಿಜೆಪಿ ಸಂಭ್ರಮಾಚರಣೆಯನ್ನು ಆರಂಭಿಸಿದ್ದು, ಈಗಾಗಲೇ ಸಿಹಿ ತಿಂಡಿ ಮತ್ತು ಪಟಾಕಿಗಳೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ನಡೆಸಿದೆ.

Recommended Video

Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia

188 ಕ್ಷೇತ್ರಗಳಲ್ಲಿ ಬಿಜೆಪಿ ದಾಖಲೆಯ 152 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ದಾಖಲೆಯ ಜಯ ಸಾಧಿಸುವತ್ತ ಮುನ್ನಡೆದಿದೆ. ಸತತವಾಗಿ 6 ಬಾರಿ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿರುವ ಬಿಜೆಪಿ 7ನೇ ಬಾರಿಗೆ ಗುಜರಾತ್‌ನಲ್ಲಿ ಸರ್ಕಾರ ರಚನೆ ಮಾಡುವುದು ಖಚಿತವಾಗಿದೆ.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ಗುಜರಾತ್ ಬಾರಿ ಮುನ್ನಡೆ ಸಾಧಿಸುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಈಗಾಗಲೇ ಬಿಜೆಪಿ ಕಚೇರಿಗಳ ಮುಂದೆ ನೃತ್ಯ ಮಾಡುವ ಮೂಲಕ ಕಾರ್ಯಕರ್ತರು ಜಯವನ್ನು ಸಂಭ್ರಮಿಸುತ್ತಿದ್ದಾರೆ.

Gujarat Election Result 2022 : BJP Preparing For Celebration With Crackers And Sweets

ಫಲಿತಾಂಶ ಹೊರಬೀಳುತ್ತಿದ್ದಂತೆ ವಿಜಯೋತ್ಸವ ಆಚರಣೆ ಮಾಡಲು ಈಗಾಗಲೇ ಪಟಾಕಿ ಮತ್ತು ಸಿಹಿತಿಂಡಿಗಳನ್ನು ಸಿದ್ಧತೆ ಮಾಡಿಕೊಂಡಿದೆ. ಸಿಎಂ ಭೂಪೇಂದ್ರ ಪಟೇಲ್ ಈಗಾಗಲೇ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಕೂಡ ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

Gujarat Election results 2022: ಟ್ವಿಟ್ಟರ್‌ನಲ್ಲಿ ಹೌಸ್‌ ದ ಜೋಶ್‌ ಟ್ರೆಂಡ್Gujarat Election results 2022: ಟ್ವಿಟ್ಟರ್‌ನಲ್ಲಿ ಹೌಸ್‌ ದ ಜೋಶ್‌ ಟ್ರೆಂಡ್

ಮೊರ್ಬಿ ಸೇತುವೆ ದುರಂತದ ನಡುವೆಯೂ ಬಿಜೆಪಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಕಾಂಗ್ರೆಸ್ ಹೀನಾಯ ಸೋಲಿನತ್ತ ಮುಖಮಾಡಿದೆ. ಪಂಜಾಬ್ ರಾಜ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿ ಗುಜರಾತ್‌ನಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದಿದ್ದ ಆಮ್‌ ಆದ್ಮಿ ಪಕ್ಷಕ್ಕೆ ಮುಖಭಂಗವಾಗಿದೆ.

Gujarat Election Result 2022 : BJP Preparing For Celebration With Crackers And Sweets

100ಕ್ಕೂ ಹೆಚ್ಚಿನ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಹೇಳಿಕೊಂಡಿದ್ದ ಆಮ್‌ ಆದ್ಮಿ ಪಕ್ಷ ಎರಡಂಕಿ ಸ್ಥಾನವನ್ನು ಪಡೆಯುವುದು ಕೂಡ ಕಷ್ಟವಾಗಿದೆ. 11.30 ಕ್ಕೆ ಬಂದಿರುವ ಮಾಹಿತಿ ಪ್ರಕಾರ 152 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ, ಆಮ್‌ ಆದ್ಮಿ ಪಕ್ಷ ಕೇವಲ 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

English summary
Gujarat Assembly Election Results 2022 Updates, BJP heading towards Record Win. All Set to rule for 7th time in Gujarath. BJP Workers Preparing For Celebration With Crackers And Sweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X