ಉಗ್ರರ ಹಿಟ್ ಲಿಸ್ಟ್ ನಲ್ಲಿ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು?!
ನವದೆಹಲಿ, ನವೆಂಬರ್ 29: ಗುಜರಾತ್ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಲ್ಲಿ, ಭಾರತೀಯ ಗುಪ್ತಚರದಳ ಆಘಾತಕಾರಿ ಸುದ್ದಿಯೊಂದನ್ನು ಬಯಲಿಗೆಳೆದಿದೆ.
ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರನ್ನು ಕೊಲ್ಲುವುದಕ್ಕೆ ಲಷ್ಕರ್ ಇ ತೊಯ್ಬಾ ಯೋಜನೆ ಸಿದ್ಧಪಡಿಸುತ್ತಿದೆ ಎಂಬ ಮಾಹಿತಿಯನ್ನು ಇಂದು(ನವೆಂಬರ್ 29) ಲಕ್ನೋ(ಉ.ಪ್ರ.)ದಲ್ಲಿ ಬಂಧಿಸಲಾದ ಲಷ್ಕರ್ ಉಗ್ರ ಅಬ್ದುಲ್ ನಯೀಮ್ ಹೊರಹಾಕಿದ್ದಾನೆ.

ಲಾಹೋರ್ ನಲ್ಲಿರುವ ಕೆಲವರೊಂದಿಗೆ ನಯೀಮ್ ನಂಟುಹೊಂದಿರುವುದು ಮತ್ತು ಆತ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಗುಪ್ತಚರ ಇಲಾಖೆಗೆ ತಿಳಿದಿದೆ.
ಗುಜರಾತ್ ಚುನಾವಣೆಯ ಸಮಯದಲ್ಲಿ ಹಿಂಸೆ ಮತ್ತು ಅಶಾಂತಿಯನ್ನು ಸೃಷ್ಟಿಸುವ ಗುರಿಯನ್ನು ಭಯೋತ್ಪಾದಕರು ಹೊಂದಿದ್ದಾರೆ ಎಂಬ ಮಾಹಿತಿಯೂ ಗುಪ್ತಚರ ಇಲಾಖೆ ಸಿಕ್ಕಿದೆ.
ಅದಕ್ಕೆಂದೇ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ಗುಜರಾತ್ ಚುನಾವಣೆಗೆ ವಿಶೇಷ ಭದ್ರತೆ ಮತ್ತು ಇಲ್ಲಿಗೆ ಪ್ರಚಾರಕ್ಕೆಂದು ಬರುವ ನಾಯಕರಿಗೂ ಸೂಕ್ತ ರಕ್ಷಣೆ ನೀಡುವ ಅಗತ್ಯವನ್ನು ಗುಪ್ತಚರ ಇಲಾಖೆ ತಿಳಿಸಿದೆ.












Click it and Unblock the Notifications