• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಹೋರಾಟಕ್ಕೆ ಬೆಂಬಲ: ಗೂಗಲ್ ಹೊಸ ಫೀಚರ್

|

ನವ ದೆಹಲಿ, ಜೂನ್ 13: ವಿಶ್ವದ ನಂಬರ್ ಒನ್ ಸರ್ಚ್‌ ಇಂಜಿನ್ ಗೂಗಲ್ ಹೊಸ ಫೀಚರ್‌ವೊಂದನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಬಳಕೆದಾರರು ತಮ್ಮ ಹತ್ತಿರದ ಕೊರೊನಾ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ಗೂಗಲ್‌ನಲ್ಲಿ ಈಗಾಗಲೇ ಬಳಕೆದಾರು ಸುಲಭವಾಗಿ ತಮ್ಮ ಹತ್ತಿರದ ಹೋಟೆಲ್, ರೆಸ್ಟೊರೆಂಟ್, ಆಸ್ಪತ್ರೆ, ಮಾಲ್‌ಗಳನ್ನು ಹುಡುಕಬಹುದಾಗಿದೆ. ಈಗ ಅದೇ ರೀತಿ ಗೂಗಲ್ ಮೂಲಕ ಹತ್ತಿರದ ಕೊರೊನಾ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ಸಿಗಲಿದೆ.

ಗೂಗಲ್ ಮ್ಯಾಪ್, ಗೂಗಲ್ ಸರ್ಚ್, ಗೂಗಲ್ ಅಸಿಸ್ಟೆಂಟ್ ಸಂಯೋಜನೆಯೊಂದಿಗೆ ಈ ಹೊಸ ಫೀಚರ್ ಬಳಕೆದಾರರಿಗೆ ಲಭ್ಯವಿದೆ ಎಂದು ಗೂಗಲ್ ಮಾಹಿತಿ ನೀಡಿದೆ. ಶುಕ್ರವಾರ ಈ ಬಗ್ಗೆ ಸುದ್ದಿ ನೀಡಿದ್ದು, ಗೂಗಲ್ ಇನ್ನು ಮುಂದೆ ಬಳಕೆದಾರರು ತಮ್ಮ ಹತ್ತಿರದ ಕೊವಿಡ್-19 ಪರೀಕ್ಷಾ ಕೇಂದ್ರಗಳನ್ನು ಹುಡುಕಬಹುದಾಗಿದೆ ಎಂದು ತಿಳಿಸಿದೆ.

ಈ ಫೀಚರ್ ಸರ್ಕಾರದಿಂದ ಅನುಮತಿ ಪಡೆದಿದೆ. ಸುಮಾರು 700 ಕೊರೊನಾ ಪರೀಕ್ಷಾ ಕೇಂದ್ರಗಳು ಈಗಾಗಲೇ ಗೂಗಲ್ ಸರ್ಚ್‌ನಲ್ಲಿ ನೋಂದಣಿ ಮಾಡಲಾಗಿದೆಯಂತೆ. ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್‌) My gov ಫ್ಲಾಟ್‌ ಫಾರ್ಮಿನೊಂದಿಗೆ ಜೊತೆಯಾಗಿ ಈ ಯೋಜನೆಗೆ ಮಾಡಿದೆ ಎಂದು ಗೂಗಲ್‌ ತಿಳಿಸಿದೆ

ಕೊರೊನಾ ಪರೀಕ್ಷಾ ಕೇಂದ್ರದ ಫೀಚರ್ ಕನ್ನಡ, ಇಂಗ್ಲೀಷ್, ಹಿಂದಿ, ಮಲಯಾಳಂ, ತಮಿಳು, , ಗುಜರಾತಿ, ಬೆಂಗಾಳಿ, ಮರಾಠಿ ಭಾಷೆಗಳಲ್ಲಿ ಲಭ್ಯವಿದೆ.

English summary
Google new feature: Google will show coronavirus testing centres in map, assistant and search.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X