Coconut Water Side Effects: ಎಳನೀರು ಕುಡಿಯುವ ಮೊದಲು ತಿಳಿಯಬೇಕಾದ 5 ಕಾರಣಗಳು
ಎಳನೀರು ದೇಹಕ್ಕೆ ತಂಪು ನೀಡುವ ಮತ್ತು ನಮ್ಮ ಆರೋಗ್ಯವನ್ನು ಕಾಪಾಡುವ ಒಂದು ತಂಪು ಪಾನೀಯ ಆಗಿದೆ ಎಂದೆ ಹೇಳಬಹುದು. ಇದು ನಮ್ಮ ದೇಹದಲ್ಲಿ ಆಗುವ ಡಿಹೈಡ್ರೇಶನ್ (ನಿರ್ಜಲೀಕರಣ) ತಡೆಯುವ ಶಕ್ತಿಯನ್ನು ಹೊಂದಿದೆ. ಇದರಲ್ಲಿ ಪೊಟ್ಯಾಶಿಯಮ್ ಸೇರಿದಂತೆ ಹಲವಾರು ಇಲೆಕ್ಟ್ರೋಲೈಟ್ ಇರುವುದರಿಂದ ದೇಹದ ನೀರಿನ ಅಂಶವನ್ನು ಸಮತೋಲನದಲ್ಲಿಡಲು ಸಹಾಯಕವಾಗಿದೆ. ಮಕ್ಕಳ ಸೇರಿದಂತೆ ಎಲ್ಲ ವಯಸ್ಸಿನವರು ಇದನ್ನು ಇಷ್ಟ ಪಡುತ್ತಾರೆ. ಆದರೆ ಇದು ಎಲ್ಲರಿಗೂ ಒಂದೆ ರೀತಿಯಲ್ಲಿ ಆರೋಗ್ಯಕ್ಕೆ ಸಹಾಯಕವಾಗುವುದಿಲ್ಲಾ ಎಂಬುದು ತಿಳಿದುಕೊಳ್ಳಬೇಕು.
ಪೌಷ್ಟಿಕ ತಜ್ಞರು ಹೇಳುವ ಪ್ರಕಾರ ಕೆಲವು ಆರೋಗ್ಯದಲ್ಲಿ ಸಮಸ್ಯೆಗಳಿರುವವರು ಎಳನೀರನ್ನು ಸೇವಿಸುವಾಗ ಎಚ್ಚರಿಕೆಯಿಂದ ಇರಬೇಕು ಅಥವಾ ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು ಎಂದು ಹೇಳುತ್ತಾರೆ.
ಕೆಳಗೆ ನೀಡಿರುವ ಆರೋಗ್ಯ ಸಮಸ್ಯೆಗಳಿರುವವರು ಎಳನೀರಿನಿಂದ ದೂರವಿರುವುದು ಉತ್ತಮ.
1. ಮಧುಮೇಹ ರೋಗಿಗಳು:
ಎಳನೀರಿನಲ್ಲಿ ಸಹಜವಾಗಿ ಸಕ್ಕರೆ ಅಂಶವಿರುತ್ತದೆ. ಆದ್ದರಿಂದ ಇದನ್ನು ಮಧುಮೇಹ ಇರುವವರು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಬಹುದು. ಆದ್ದರಿಂದ ವೈದ್ಯರ ಸಲಹೆ ಪಡೆದು ಕುಡಿಯುವುದು ಒಳ್ಳೆಯದು.

2. ರಕ್ತದ ಒತ್ತಡದ ಇರುವ ರೋಗಿಗಳು:
ಎಳನೀರು ಸಹಜವಾಗಿ ರಕ್ತದ ಒತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಈಗಾಗಲೇ ರಕ್ತದ ಒತ್ತಡದ ಔಷಧಿಗಳನ್ನು ಸೇವಿಸುತ್ತಿರುವವರು ಇದನ್ನು ಹೆಚ್ಚು ಪ್ರಮಾಣದಲ್ಲಿ ಕುಡಿದರೆ, ರಕ್ತದ ಒತ್ತಡ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
3. ಅಲರ್ಜಿ ಇರುವವರು:
ಕೆಲವರಿಗೆ ತೆಂಗಿನಕಾಯಿ ಅಥವಾ ಟ್ರೀ ನಟ್ಸ್ ಅಂದರೆ ಬಾದಾಮಿ, ಗೋಡಂಬಿ, ವಾಲ್‌ನಟ್, ಪಿಸ್ತಾ, ಹ್ಯಾಝೆಲ್ನಟ್ ಇವುಗಳಿಂದ ಅಲರ್ಜಿ ಇರಬಹುದು. ಇಂತಹವರು ಎಳನೀರು ಕುಡಿದರೆ ಚರ್ಮದ ಸಮಸ್ಯೆಗಳು, ಹೊಟ್ಟೆಯ ಸಮಸ್ಯೆಗಳು ಅಥವಾ ಅಪರೂಪದಲ್ಲಿ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
4. ಮೂತ್ರಪಿಂಡ ಸಮಸ್ಯೆ ಇರುವವರು:
ಎಳನೀರಿನಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚು ಇರುತ್ತದೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಹೆಚ್ಚುವರಿ ಪೊಟ್ಯಾಸಿಯಂ ದೇಹದಲ್ಲಿ ಸಂಗ್ರಹ ಆಗಬಹುದು. ಇದರಿಂದ ಹೃದಯದ ಬಡಿತ ಅಸ್ಥಿರತೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.
5. ಅತಿಯಾಗಿ ಬೆವರುವ ಕ್ರೀಡಾಳುಗಳು:
ವ್ಯಾಯಾಮದ ನಂತರ ದೇಹಕ್ಕೆ ನೀರು ಅಗತ್ಯವಾದರೂ, ಎಳನೀರಿನಲ್ಲಿ ಸೋಡಿಯಂ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ದೇಹದಿಂದ ಹೆಚ್ಚು ಬೆವರು ಹರಿದು ಹೋದಾಗ ಸೋಡಿಯಮ್ ಅಂಶವು ಕಡಿಮೆ ಆಗಿರುತ್ತದೆ. ಆದ್ದರಿಂದ ಕ್ರೀಡಾಪಟುಗಳು ಇದನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಉತ್ತಮ ಎಂಬುದು ತಜ್ಞರ ಸಲಹೆಯಾಗಿದೆ.
ಎಳನೀರು ಆರೋಗ್ಯಕರ ಪಾನೀಯ ಆಗಿದ್ದರು ಇದು ಎಲ್ಲರಿಗೂ ಅದು ಸೂಕ್ತ ಅಲ್ಲ. ನಿಮ್ಮಲ್ಲಿ ಯಾವುದೆ ರೀತಿಯ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಎಳನೀರು ಸೇವಿಸುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಅತ್ಯಂತ ಅಗತ್ಯವಾಗಿದೆ.














Click it and Unblock the Notifications