ಗಜಲಕ್ಷ್ಮೀ ರಾಜಯೋಗದಿಂದ ಈ ನಾಲ್ಕು ರಾಶಿಯವರಿಗೆ ಹಣದ ಸುರಿಮಳೆ: ಹೆಚ್ಚಾಗುವುದು ಸುಖ ಸಮೃದ್ಧಿ
ಯಾವುದೇ ಒಂದು ರಾಶಿಯಲ್ಲಿ ಗುರು ಮತ್ತು ಶುಕ್ರರ ಸಂಯೋಗವಾದಾಗ ಅತ್ಯಂತ ಶುಭವಾದ ಗಜಲಕ್ಷ್ಮೀ ರಾಜಯೋಗ ರೂಪುಗೊಳ್ಳುವುದು. ಇದೀಗ ಗುರು ಮತ್ತು ಶುಕ್ರರು ಮಿಥುನ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ. ಈ ಮೂಲಕ ಮಿಥುನ ರಾಶಿಯಲ್ಲಿ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗಲಿದೆ. ಇದು ನಾಲ್ಕು ರಾಶಿಯವರ ಸಂಪತ್ತು, ಸ್ಥಾನಮಾನ, ಗೌರವವನ್ನು ಹೆಚ್ಚಿಸುತ್ತದೆ.
ಮೇ 14, 2026 ರಂದು, ಶುಕ್ರನು ಮಿಥುನ ರಾಶಿಗೆ ಸಾಗುತ್ತಾನೆ. ಈ ರಾಶಿಯಲ್ಲಿ ಈಗಾಗಲೇ ಗುರು ಇರುವ ಕಾರಣ ಎರಡೂ ಗ್ರಹಗಳ ಸಂಯೋಗ ಮಿಥುನ ರಾಶಿಯಲ್ಲಿ ಆಗಲಿದೆ. ಜೂನ್ 2, 2026ರವರೆಗೆ ಗುರು ಮಿಥುನ ರಾಶಿಯಲ್ಲಿ ಇರುತ್ತಾನೆ. ಹೀಗಾಗಿ ರೂಪುಗೊಳ್ಳುವ ಗಜಲಕ್ಷ್ಮಿ ರಾಜ ಯೋಗ ನಾಲ್ಕು ರಾಶಿಯವರ ವೃತ್ತಿಜೀವನದಲ್ಲಿ ಪ್ರಗತಿ, ತರಲಿದೆ.ಇವರಿಗೆ ಆರ್ಥಿಕ ಲಾಭವಾಗಿ ಗೌರವ ಹೆಚ್ಚಾಗಲಿದೆ.
ಗಜಲಕ್ಷ್ಮೀ ರಾಜಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು:

ವೃಷಭ ರಾಶಿ:
ಗಜಲಕ್ಷ್ಮಿ ರಾಜಯೋಗವು ವೃಷಭ ರಾಶಿಯವರ ಸಂಪತ್ತನ್ನು ಹೆಚ್ಚಿಸುತ್ತದೆ. ವೃತ್ತಿಜೀವನದಲ್ಲಿ ಹಿಂದೆಂದೂ ಕಾಣದ ಪ್ರಗತಿಯಾಗುವುದು. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುತ್ತದೆ. ಉದ್ಯಮಿಗಳು ಹೊಸ ಡೀಲ್‌ಗಳನ್ನು ಮಾಡಿಕೊಳ್ಳಲು ಇದು ಸರಿಯಾದ ಸಮಯ. ಈಗ ವ್ಯವಹಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಿನ ಲಾಭವನ್ನು ತಂದುಕೊಡುವುದು.ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು.

ತುಲಾ ರಾಶಿ:
ಗಜಲಕ್ಷ್ಮಿ ರಾಜ್ಯಯೋಗದಿಂದ ತುಲಾ ರಾಶಿಯವರಿಗೆ ಆರ್ಥಿಕವಾಗಿ ಬಹಳಷ್ಟು ಲಾಭವಾಗುವುದು.ಕೈ ಸೇರದೆ ಉಳಿದಿರುವ ಹಣ ಮತ್ತೆ ನಿಮ್ಮದಾಗುವುದು. ಹಣಕಾಸಿನ ಕೊರತೆ ನೀಗುವುದು. ಹೂಡಿಕೆ ಮಾಡಲು ಇದು ಸರಿಯಾದ ಸಮಯ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ವೃತ್ತಿಜೀವನದಲ್ಲಿಯೂ ದೊಡ್ಡ ಮಟ್ಟದ ಯಶಸ್ಸು ಸಿಗುವುದು. ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು.

ಧನು ರಾಶಿ:
ಗಜಲಕ್ಷ್ಮಿ ರಾಜಯೋಗದಿಂದ ನಿಮ್ಮ ಅದೃಷ್ಟವೇ ಬದಲಾಗುವುದು. ಹೊಸ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆಗಳಿವೆ.ವ್ಯಾಪಾರ ವ್ಯವಹಾರಗಳಲ್ಲಿಯೂ ಗಣನೀಯವಾಗಿ ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು.

ಮೀನ ರಾಶಿ:
ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ಗಜಲಕ್ಷ್ಮಿ ಯೋಗದಿಂದಾಗಿ ಮೀನ ರಾಶಿಯವರ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುವುದು. ಸುಖ ಸಂತೋಷ ದುಪ್ಪಟ್ಟಾಗುವುದು. ನಿಮಗೆ ಸಮಸ್ಯೆ ಉಂಟು ಮಾಡುತ್ತಿದ್ದ ಹಳೆಯ ಸಮಸ್ಯೆಗಳು ಬಗೆಹರಿಯುವುದು. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications