ಕೈ ತೊಳೆಯುವುದರ ಅನುಕೂಲ ಹೇಳಿದ ಮೊದಲ ಡಾಕ್ಟರ್‌ಗೆ ಗೂಗಲ್ ನಮನ
ನವ ದೆಹಲಿ, ಮಾರ್ಚ್ 20: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಕೈಗಳನ್ನು ಆಗಾಗ ತೊಳೆದುಕೊಳ್ಳಬೇಕು ಎಂದು ತಿಳಿಸಲಾಗುತ್ತಿದೆ. ಕನ್ನಡದ ನಟಿಯರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜ್ ಕೂಡ ಮಾಡುತ್ತಿದ್ದಾರೆ. ಆದರೆ, ಈ ರೀತಿ ಕೈ ತೊಳೆಯುವುದರ ಆಗುವ ಪ್ರಯೋಜನಗಳನ್ನು ಮೊದಲು ತಿಳಿಸಿದ್ದು, ಡಾಕ್ಟರ್ ಇಗ್ನಾಝ್ ಸೆಮ್ಮೆಲ್.
ಇಗ್ನಾಝ್ ಸೆಮ್ಮೆಲ್ ಹಂಗೇರಿಯ ಬುಡಾಪೆಸ್ಟ್ ವೈದ್ಯರು. ಕೈ ತೊಳೆಯುವುದರ ಆಗುವ ವೈದ್ಯಕೀಯ ಅನುಕೂಲಗಳನ್ನು ಇವರೇ ಮೊದಲು ಕಂಡು ಹಿಡಿದರು. ಸೂಕ್ಷ್ಮಣು ಜೀವಿಗಳು ಕೈನಲ್ಲಿ ಇರುತ್ತದೆ. ಹಾಗಾಗಿ ಕೈ ತೊಳೆಯಬೇಕು. ಕೈ ತೊಳೆಯದೆ ಇದ್ದರೆ, ಆಗುವ ತೊಂದರೆಗಳನ್ನು ವಿವರಿಸಿದ್ದರು.

ಕೊರೊನಾ ವೈರಸ್ ವಿರುದ್ಧ ವಿಶ್ವವೇ ಹೋರಾಟ ಮಾಡುತ್ತಿರುವ ಈ ಸಮಯದಲ್ಲಿ ಇಗ್ನಾಝ್ ಸೆಮ್ಮೆಲ್ ಅವರ ಬಗ್ಗೆ ಗೂಗಲ್ ಮಾಹಿತಿ ಹಂಚಿಕೊಂಡಿದೆ. ಗೂಗಲ್ ಡೂಡಲ್ ಮೂಲಕ ನಮನ ಸಲ್ಲಿಸಿದೆ. 'ಗೂಗಲ್' ಮೇಲೆ ಕ್ಲಿಕ್ ಮಾಡಿದರೆ, ಸಣ್ಣದೊಂದು ವಿಡಿಯೋ ಪ್ಲೇ ಆಗುತ್ತದೆ. 50 ಸೆಕೆಂಡ್‌ನ ಈ ವಿಡಿಯೋ ಮೂಲಕ ಹೇಗೆ ಕೈತೊಳೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

1847ರಲ್ಲಿ ವಿಯೆನ್ನಾದ ಜನರಲ್ ಆಸ್ಪತ್ರೆಯಲ್ಲಿ ಇಗ್ನಾಝ್ ಸೆಮ್ಮೆಲ್ ಚೀಫ್ ರೆಸಿಡೆಂಟ್ ಆಗಿ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಕೈ ತೊಳೆಯುವುದರ ಅನುಕೂಲವನ್ನು ತಿಳಿಸಿದ್ದಾರೆ. ರೋಗಿಗಳ ಹಾಗೂ ಬಾಣಂತಿಯರ ಚಿಕಿತ್ಸೆಗೆ ಮೊದಲು ಕೈ ತೊಳೆಯುವುದು ಎಷ್ಟು ಮುಖ್ಯ ಎಂದು ವಿವರಿಸಿದ್ದಾರೆ.












Click it and Unblock the Notifications