ಚಾಂದಿನಿ ಚೌಕ್ ನಿಂದ ಮಾಜಿ ಸಿಎಂ ಶೀಲಾ ದೀಕ್ಷಿತ್ ಸ್ಪರ್ಧೆ ಇಲ್ಲ

ಬೆಂಗಳೂರು, ಏಪ್ರಿಲ್ 22: ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೆಸರಿಸಿದೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರಿಗೆ ಚಾಂದನಿ ಚೌಕ್ ನಿಂದ ಸ್ಪರ್ಧಿಸುವ ನಿರೀಕ್ಷೆ ಸುಳ್ಳಾಗಿದೆ. ಶೀಲಾ ಅವರು ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆಮ್ ಆದ್ಮಿ ಪಕ್ಷದ ಜೊತೆ ಯಾವುದೇ ಮೈತ್ರಿ ಸಾಧ್ಯವಿಲ್ಲ ಎಂದು ಶೀಲಾ ದೀಕ್ಷಿತ್ ಸ್ಪಷ್ಟಪಡಿಸಿದ್ದು, ಈ ಬಾರಿ ಬಿಜೆಪಿ-ಕಾಂಗ್ರೆಸ್-ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಖಚಿತವಾಗಿದೆ.

ಕಳೆದ ವರ್ಷ ದೆಹಲಿ ರಾಜ್ಯ ಘಟಕ ಅಧ್ಯಕ್ಷೆಯಾದ ಅನುಭವಿ ರಾಜಕಾರಣಿ ಅವರು ಪಕ್ಷದ ಹೈಕಮಾಂಡ್ ಗೆ ಕಳಿಸಿದ್ದ ಸಂಭಾವ್ಯ ಪಟ್ಟಿಯ ಬಹುತೇಕ ಹೆಸರುಗಳನ್ನೇ ಅಂತಿಮಗೊಳಿಸಲಾಗಿದೆ. ಚಾಂದಿನಿ ಚೌಕ್ ಕ್ಷೇತ್ರದಿಂದ ಜೆ.ಪಿ ಅಗರವಾಲ್ ಸ್ಪರ್ಧಿಸುತ್ತಿದ್ದರೆ, ನವದೆಹಲಿ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ ಅಜಯ್ ಮಾಕೇನ್ ಸ್ಪರ್ಧಿಸಲಿದ್ದಾರೆ.

General Election 2019: Sheila Dikshit To Contest From Delhi, Congress Names 6 Candidates

ಪೂರ್ವ ದೆಹಲಿಯಿಂದ ಅರವಿಂದ್ ಸಿಂಗ್ ಲವ್ಲಿ, ವಾಯುವ್ಯ ದೆಹಲಿ ಮೀಸಲು ಕ್ಷೇತ್ರದಿಂದ ರಾಜೇಶ್ ಲಿಲೊಥಿಯಾ ಅವರಿಗೆ ಟಿಕೆಟ್ ಸಿಕ್ಕಿದ್ದರೆ, ಪಶ್ಚಿಮ ದೆಹಲಿಯಿಂದ ಮಹಾಬಲ ಮಿಶ್ರಾ ಅವರಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಒಲಿಂಪಿಕ್ ಪದಕ ವಿಜೇತ ಖ್ಯಾತ ಕುಸ್ತಿಪಟು ಸುಶೀಲ್​ಕುಮಾರ್ ​ಅವರಿಗೆ ಪಶ್ಚಿಮ ದೆಹಲಿಯಿಂದ ಟಿಕೆಟ್ ಸಿಗುವ ನಿರೀಕ್ಷೆಯಿತ್ತು.

ಇದೇ ವೇಳೆ ಬಿಜೆಪಿ ಕೂಡಾ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ದೆಹಲಿಯ ಐತಿಹಾಸಿಕ ಚಾಂದಿನಿ ಚೌಕ್ ಕ್ಷೇತ್ರದಿಂದ ಡಾ. ಹರ್ಷ್ ವರ್ಧನ್, ಈಶಾನ್ಯ ದೆಹಲಿಯಿಂದ ದೆಹಲಿ ಬಿಜೆಪಿ ಮುಖ್ಯಸ್ಥ, ಭೋಜ್ ಪುರಿ ನಟ, ಗಾಯಕ ಮನೋಜ್ ತಿವಾರಿ, ಪಶ್ಚಿಮ ದೆಹಲಿಯಿಂದ ಪ್ರವೇಶ್ ವರ್ಮಾ, ದಕ್ಷಿಣ ದೆಹಲಿಯಿಂದ ರಮೇಶ್ ಬಿಧುರಿ ಅವರಿಗೆ ಟಿಕೆಟ್ ನೀಡಲಾಗಿದೆ. ದೆಹಲಿಯಲ್ಲಿ ಮೇ 12ರಂದು ಮತದಾನ ನಡೆಯಲಿದೆ. ಮೇ 23ರಂದು ಫಲಿತಾಂಶ ಹೊರಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+