• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರವನ್ನ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ರಾ? ದೆಹಲಿ ಸಿಎಂ ವಿರುದ್ಧ ಸಂಸದ ಗೌತಮ್ ಗಂಭೀರ್ ಕಿಡಿ

|

ದೆಹಲಿ, ಜುಲೈ 11: ರಾಷ್ಟ್ರ ರಾಜಧಾನಿಯಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯನ್ನು ಒಳಗೊಂಡಿರುವಲ್ಲಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳ ಸಮಗ್ರ ಪ್ರಯತ್ನವನ್ನು ಪ್ರಧಾನಿ ಮೋದಿ ಇಂದು ಶ್ಲಾಘಿಸಿದರು. ಇದರ ಬೆನ್ನಲ್ಲೇ ಎಎಪಿ ಸರ್ಕಾರವು ತನ್ನ ಪ್ರಯತ್ನದ ಕುರಿತು ಮುಕ್ತ ಕಂಠದಲ್ಲಿ ಹೊಗಳುತ್ತಿದೆ. ಈ ಕುರಿತು ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ.

ಟ್ವಿಟರ್‌ನಲ್ಲಿ ಎಎಪಿ ಸರ್ಕಾರ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಗಂಭೀರ್, ಜನರನ್ನು ಗಾಬಳಿಗೊಳಿಸಲು ಮತ್ತು ಕೇಂದ್ರವನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ರಾ? ಎಂದು ಪ್ರಶ್ನಿಸಿದ್ದಾರೆ.

24 ಗಂಟೆಯಲ್ಲಿ 22,752 ಕೊರೊನಾ ಕೇಸ್, 482 ಜನರು ಸಾವು

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರವು ಜುಲೈ ಕೊನೆಯೊಳಗೆ ರಾಷ್ಟ್ರ ರಾಜಧಾನಿಯಲ್ಲಿ 5.5 ಲಕ್ಷ ಸೋಂಕಿತ ಪ್ರಕರಣಗಳು ದಾಖಲಾಗುತ್ತವೆ ಎಂದು ಹೇಳಿಕೆಯನ್ನು ನೀಡಿತ್ತು.

ದೆಹಲಿ ಸರ್ಕಾರದ ಈ ಹೇಳಿಕೆಯನ್ನು ಯಾವ ಆಧಾರದ ಮೇಲೆ ನೀಡಲಾಗಿದೆ ಎಂದು ಸಂಸದ ಗೌತಮ್ ಗಂಭೀರ್ ಪ್ರಶ್ನಿಸಿದ್ದಾರೆ. ಇದು ಜನರನ್ನು ಹೆದರಿಸುವ ಮತ್ತು ಕೇಂದ್ರದಿಂದ ಸಹಾಯ ಪಡೆಯಲು ಬ್ಲ್ಯಾಕ್‌ಮೇಲ್ ತಂತ್ರವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನೀವು ಆಸ್ಕರ್ ಅವಾರ್ಡ್ ಸಿಗುವಂತ ಪ್ರದರ್ಶನವನ್ನು ನೀಡಿದ್ದೀರಾ ಎಂದು ಅಣಕಿಸಿದ್ದಾರೆ.

English summary
Lashing out at kejriwal, Gautam gambir asks the delhi cm whether this was ''to create panic & blackmail centre for help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X