ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಇಬ್ಬರು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಹದಿನೇಳು ಹಾಗೂ ಹದಿನೆಂಟು ವರ್ಷದ ಹುಡುಗಿಯರ ಮೇಲೆ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಆಗಿದೆ. ಸ್ನೇಹಿತರ ಜತೆಗೆ ಹೊರಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದ್ದು, ಹೆಣ್ಣುಮಕ್ಕಳಿಗೆ ದೆಹಲಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವಿಸಿದೆ. ನಾಲ್ಕು ವರ್ಷದ ಹಿಂದೆ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ರಾತ್ರಿ 8.30ರ ವೇಳೆಯಲ್ಲಿ ಹುಡುಗಿಯರು ಗೆಳೆಯರ ಜತೆಗೆ ಹೊರಗೆ ಹೋಗಿದ್ದರು. ಮೆಟ್ರೋ ಸ್ಟೇಷನ್ ಸಮೀಪದ ಜನರಹಿತ ಪ್ರದೇಶದಲ್ಲಿ ಗುಂಪೊಂದು ದಾಳಿ ಮಾಡಿದೆ. ಹುಡುಗರನ್ನು ಥಳಿಸಿದ ಗುಂಪು, ಅಲ್ಲೇ ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ಬಾಲಾಪರಾಧಿ ಬಿಡುಗಡೆಗೆ ತಡೆ ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ]

Nirbhaya

ಪೊಲೀಸರಿಗೆ ದೂರು ನೀಡದಂತೆ ನಾಲ್ವರಿಗೂ ಆ ಗುಂಪು ಎಚ್ಚರಿಕೆ ನೀಡಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಮತ್ತೊಬ್ಬ ಕೂಡ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.[ನಿರ್ಭಯಾ ಕೇಸಿನ ಅತ್ಯಾಚಾರಿ ವಿನಯ್ ಆತ್ಮಹತ್ಯೆಗೆ ಯತ್ನ]

ಈ ಹಿಂದೆ ದೆಹಲಿಯಲ್ಲಿ ಚಲಿಸುವ ಬಸ್ ನಲ್ಲಿ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಹಿಂಸೆ ನೀಡಲಾಗಿತ್ತು. ಹದಿಮೂರು ದಿನಗಳ ನಂತರ ಆ ಯುವತಿ ಮೃತಪಟ್ಟಿದ್ದಳು. "ನಿರ್ಭಯಾ ಅತ್ಯಾಚಾರ" ಪ್ರಕರಣ ಎಂದೇ ಗುರುತಿಸಲಾಗಿದ್ದ ಆ ಘಟನೆ ನಂತರ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಕಾನೂನಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು.

English summary
Two girls were gang raped in front of their male friends in Delhi. An incident that once again question women's safety in the capital four years after the gang-rape of a young medical student.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X