ವ್ಯವಹಾರದಲ್ಲಿ ನಷ್ಟವಾಗುತ್ತಿದೆಯೇ? ಈ ವಾಸ್ತು ಟಿಪ್ಸ್ ಪಾಲಿಸಿದರೆ ಲಾಭ ಖಚಿತ

ವ್ಯವಹಾರದಲ್ಲಿ ಯಶಸ್ಸು ಸಾಧಿಸಲು ಕೇವಲ ಕಷ್ಟಪಟ್ಟು ಕೆಲಸ ಮಾಡಿದರೆ ಸಾಕಾಗುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಸ್ಥಳದಲ್ಲಿರುವ ಪಂಚಭೂತಗಳ ಸಮತೋಲನ ಸಹ ಅತಿ ಮುಖ್ಯವಾಗುತ್ತದೆ. ಹಲವರು ತಮ್ಮ ವ್ಯವಹಾರ ಆರಂಭದಲ್ಲಿ ಉತ್ತಮವಾಗಿ ನಡೆಯುತ್ತಿದ್ದರೂ, ಮಧ್ಯದಲ್ಲಿ ಬೀಳುವ ಸಾದ್ಯತೆ ಇರುತ್ತದೆ. ಇದಕ್ಕೆ ಪ್ರಮುಖ ಕಾರಣವಾಗಿ ವಾಸ್ತು ದೋಷಗಳೆ ಕಾರಣ ಎಂದು ತಜ್ಞರು ಸೂಚಿಸುತ್ತಾರೆ. ವಿಶೇಷವಾಗಿ ಉತ್ತರ ದಿಕ್ಕಿನ ವ್ಯವಸ್ಥೆ ಸರಿಯಾಗಿದ್ದರೆ ಆರ್ಥಿಕ ಪ್ರಗತಿಗೆ ತುಂಬಾ ಸಹಾಯ ಆಗುತ್ತದೆ ಎಂದು ಹೇಳುತ್ತಾರೆ.

ಉತ್ತರ ದಿಕ್ಕಿನ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕು ಶ್ರೀ ಕುಬೇರನ ಅಧಿಪತ್ಯದಲ್ಲಿದೆ. ಆದ್ದರಿಂದ ಈ ದಿಕ್ಕನ್ನು ಯಾವಾಗಲು ಸ್ವಚ್ಛವಾಗಿ, ಖಾಲಿಯಾಗಿ ಮತ್ತು ಶಾಂತಿಯುತವಾಗಿ ಇಟ್ಟುಕೊಳ್ಳುವುದು ಮುಖ್ಯ. ಈ ಭಾಗದಲ್ಲಿ ಬೆಂಕಿಗೆ ಸಂಬಂಧಿಸಿದ ವಸ್ತುಗಳು ದೀಪ, ಧೂಪ, ಕರ್ಪೂರ, ಎಣ್ಣೆ ಇತ್ಯಾದಿಗಳನ್ನು ಇಡುವುದನ್ನು ತಪ್ಪಿಸಬೇಕು. ಹಾಗೆಯೇ ಕೆಂಪು ಬಣ್ಣದ ವಸ್ತುಗಳು ಅಥವಾ ಚಿತ್ರಗಳನ್ನು ಇಡುವುದರಿಂದ ಆರ್ಥಿಕ ನಷ್ಟ ಆಗಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಬದಲಾಗಿ ಹಸಿರು ಬಣ್ಣದ ವಸ್ತುಗಳನ್ನು ಬಳಸುವುದು ಒಳ್ಳೆಯದು, ಏಕೆಂದರೆ ಇದು ಬುಧ ಗ್ರಹಕ್ಕೆ ಸಂಬಂಧಿಸಿದ್ದು ವ್ಯವಹಾರದಲ್ಲಿ ಚಾತುರ್ಯ ಹೆಚ್ಚಿಸುತ್ತದೆ.

Vastu Tips for Business

ಈಶಾನ್ಯ ದಿಕ್ಕು: ಶಕ್ತಿಯ ಕೇಂದ್ರ

ವ್ಯವಹಾರದ ಸ್ಥಳದಲ್ಲಿ ಈಶಾನ್ಯ ಮೂಲೆಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇಲ್ಲಿ ನೀರಿನ ಅಂಶ ಇಡುವುದರಿಂದ ಮಂಗಳಕರ. ಸಣ್ಣ ಫೌಂಟನ್ ಅಥವಾ ನೀರು ತುಂಬಿದ ಪಾತ್ರೆಯಲ್ಲಿ ಹೂಗಳನ್ನು ಇಡುವುದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪೂಜಾ ಸ್ಥಳವನ್ನೂ ಈ ಭಾಗದಲ್ಲಿ ಮಾಡುವುದು ಉತ್ತಮ, ದೇವರ ಮುಖ ಪೂರ್ವದತ್ತ ಮಾಡಬೇಕು ಅಂದರೆ ವ್ಯವಹಾರದಲ್ಲಿ ಆರ್ಥಿಕತೆ ಸಮತೋಲನದಲ್ಲಿ ಇರುತ್ತದೆ ಎಂಬ ನಂಬಿಕೆ ಇದೆ.

ಟಿವಿ, ರೆಫ್ರಿಜರೇಟರ್ ಸೇರಿದಂತೆ ವಸ್ತುಗಳು ಪದೇ ಪದೇ ಹಾಳಾಗುತ್ತಿವೆಯೇ? ಈ ವಾಸ್ತು ದೋಷವೇ ಇದಕ್ಕೆ ಕಾರಣ
ಟಿವಿ, ರೆಫ್ರಿಜರೇಟರ್ ಸೇರಿದಂತೆ ವಸ್ತುಗಳು ಪದೇ ಪದೇ ಹಾಳಾಗುತ್ತಿವೆಯೇ? ಈ ವಾಸ್ತು ದೋಷವೇ ಇದಕ್ಕೆ ಕಾರಣ

ದಕ್ಷಿಣ-ಪಶ್ಚಿಮ ದಿಕ್ಕು: ಮಾಲೀಕರ ಸ್ಥಾನ

ವ್ಯವಹಾರದ ಮಾಲೀಕರು ಅಥವಾ ನಿರ್ವಾಹಕರು ದಕ್ಷಿಣ-ಪಶ್ಚಿಮ ಮೂಲೆಯಲ್ಲಿ ಕುಳಿತುಕೊಳ್ಳುವುದು ಶ್ರೇಯಸ್ಕರ. ಕುಳಿತುಕೊಳ್ಳುವಾಗ ಹಿಂದೆ ಗಟ್ಟಿಯಾದ ಗೋಡೆ ಇರಬೇಕು; ಕಿಟಕಿ ಇರಬಾರದು. ಮುಖವನ್ನು ಉತ್ತರ ಅಥವಾ ಪೂರ್ವ ದಿಕ್ಕಿನತ್ತ ಇಟ್ಟುಕೊಂಡು ಕೆಲಸ ಮಾಡಿದರೆ ನಿರ್ಧಾರ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ವ್ಯವಹಾರದಲ್ಲಿ ಸ್ಥಿರತೆ ಮತ್ತು ಆರ್ಥಿಕತೆ ಹೆಚ್ಚುತ್ತದೆ.

ಇದರಿಂದ ಕೇವಲ ಆರ್ಥಿಕ ಲಾಭ ಮಾತ್ರವಲ್ಲ, ವ್ಯಾಪಾರದಲ್ಲಿ ಸ್ಥಿರತೆ ಮತ್ತು ದೀರ್ಘಕಾಲದ ಬೆಳವಣಿಗೆ ಕೂಡ ಸಾಧಿಸಲು ಅನುಕೂಲಕರ ಎಂದು ಹೇಳುತ್ತಾರೆ. ವಾಸ್ತು ತತ್ವಗಳನ್ನು ಸರಿಯಾಗಿ ಅನುಸರಿಸುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗಿ, ವ್ಯವಹಾರದಲ್ಲಿ ಸರಿಯಾದ ಮತ್ತು ಸ್ಪಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ನೈಪುಣ್ಯತೆ ಹೆಚ್ಚುತ್ತದೆ. ಇದರಿಂದ ವ್ಯವಹಾರದಲ್ಲಿ ಎದುರಾಗುವ ಅನಿಶ್ಚಿತತೆ ಮತ್ತು ಅನಾನುಕೂಲ ಕಡಿಮೆಯಾಗುತ್ತವೆ.

ತುಳಸಿ ಬಾಡುವುದು ಅಶುಭ ಸೂಚನೆನಾ? ವಾಸ್ತು ಮತ್ತು ಜ್ಯೋತಿಷ್ಯ ಹೇಳುವುದೇನು
ತುಳಸಿ ಬಾಡುವುದು ಅಶುಭ ಸೂಚನೆನಾ? ವಾಸ್ತು ಮತ್ತು ಜ್ಯೋತಿಷ್ಯ ಹೇಳುವುದೇನು

ಒಟ್ಟಾರೆ ಹೆಳುವುದಾದರೆ, ಕಠಿಣ ಪರಿಶ್ರಮದ ಜೊತೆಗೆ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ವ್ಯಾಪಾರದಲ್ಲಿ ಯಶಸ್ಸು ಪಡೆಯಲು ಸಹಾಯಕವಾಗುತ್ತದೆ. ನಿಮ್ಮ ಕೆಲಸದ ಸ್ಥಳವನ್ನು ಸಕಾರಾತ್ಮಕ ಶಕ್ತಿಯಿಂದ ಇಡುವುದರಿಂದ, ಹಣಕಾಸಿನ ಸ್ಥಿರತೆ, ಉತ್ತಮವಾಗಿ ಕಾರ್ಯ ನಿರ್ವಹಣೆ ಮತ್ತು ಲಾಭದಾಯಕ ಬೆಳವಣಿಗೆ ಸಾಧ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+